ETV Bharat / state

ದಕ್ಷಿಣ ಕನ್ನಡ: ಹಿಂದಕ್ಕೆ ಚಲಾಯಿಸುತ್ತಿದ್ದ ಕಾರಿನಡಿಗೆ ಬಿದ್ದು ಬಾಲಕ ಸಾವು - BOY DIED - BOY DIED

ಮನೆಯಂಗಳದಲ್ಲಿ ಕಾರು ಚಲಾಯಿಸುವಾಗ ಹಿಂದೆ ನಿಂತಿದ್ದ ಬಾಲಕ ಅದರಡಿ ಬಿದ್ದು ಸಾವನ್ನಪ್ಪಿರುವ ಘಟನೆ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ನಡೆದಿದೆ.

ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ (ETV Bharat)
author img

By ETV Bharat Karnataka Team

Published : Oct 2, 2024, 6:43 AM IST

ನೆಲ್ಯಾಡಿ (ದಕ್ಷಿಣ ಕನ್ನಡ): ಮನೆಯ ಅಂಗಳದಲ್ಲಿ ಕಾರೊಂದನ್ನು ಹಿಂದಕ್ಕೆ ಚಲಾಯಿಸುತ್ತಿದ್ದ ವೇಳೆ ಬಾಲಕ ಕಾರಿನಡಿಗೆ ಬಿದ್ದು, ಮೃತಪಟ್ಟ ದಾರುಣ ಘಟನೆ ನೆಲ್ಯಾಡಿಯ ಕೊಕ್ಕಡದಲ್ಲಿ ಮಂಗಳವಾರ ನಡೆದಿದೆ.

ಬೆಳ್ತಂಗಡಿ ತಾಲೂಕಿನ ಕೊಕ್ಕಡ ನಿವಾಸಿ ಹಮೀದ್ ಎಂಬವರ ಪುತ್ರ ನವಾಫ್ (10) ಮೃತಪಟ್ಟ ಬಾಲಕ. ಕಡಬ ತಾಲೂಕು ಆತೂರಿನ ಶಾಲೆಯೊಂದರಲ್ಲಿ 4ನೇ ತರಗತಿ ಓದುತ್ತಿದ್ದ. ಹಮೀದ್ ಅವರ ಮನೆಗೆ ಬಂದಿದ್ದ ಸಂಬಂಧಿಕರು ಮನೆಯಂಗಳದಲ್ಲಿ ಕಾರನ್ನು ಹಿಂದಕ್ಕೆ ಚಲಾಯಿಸಿದಾಗ ವಾಹನದ ಹಿಂಬದಿ ಸಿಟೌಟ್ ಕೆಳಗೆ ನಿಂತಿದ್ದ ನವಾಫ್ ಕಾರಿನಡಿಗೆ ಬಿದ್ದಿದ್ದಾನೆ. ಕಾರು ಆತನ ಮೈಮೇಲೆ ಹರಿದು ಗಂಭೀರವಾಗಿ ಗಾಯಗೊಂಡು ಮೃತಪಟ್ಟಿದ್ದಾನೆ ಎಂದು ತಿಳಿದುಬಂದಿದೆ. ಈ ಬಗ್ಗೆ ಧರ್ಮಸ್ಥಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ: ಮಣ್ಣಿನಲ್ಲಿ ಮುಚ್ಚಿಟ್ಟಂತೆ ನವಜಾತ ಶಿಶು ಪತ್ತೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.