ರಾಂಚಿ (ಜಾರ್ಖಂಡ್): ಸದ್ಯ ದೇಶದಲ್ಲಿ ನೂತನ ಸಂಸತ್ ಭವನ ಉದ್ಘಾಟನೆಯತ್ತ ಎಲ್ಲರ ಕಣ್ಣು ನೆಟ್ಟಿದೆ. ರಾಜಕೀಯ ಚರ್ಚೆಗಳ ನಡುವೆಯೇ ಈ ನೂತನ ಸಂಸತ್ ಭವನದ ಬಗ್ಗೆ ಜ್ಯೋತಿಷಿಗಳೊಬ್ಬರು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಖ್ಯಾತ ಜ್ಯೋತಿಷಿ ಮತ್ತು ಧರ್ಮಾಚಾರ್ಯ ಸ್ವಾಮಿ ದಿವ್ಯಾನಂದ ಮಹಾರಾಜ್ ಅವರು ಹೊಸ ಸಂಸತ್ತಿನ ಕಟ್ಟಡವನ್ನು ಜ್ಯೋತಿಷ್ಯ ದೃಷ್ಟಿಕೋನದಿಂದ ಮಂಗಳಕರವೆಂದು ಪರಿಗಣಿಸಿದ್ದಾರೆ. ಮೇ 28ರ ಭಾನುವಾರದಂದು ಭಾರತದ ಹೊಸ ಸಂಸತ್ ಭವನದ ಉದ್ಘಾಟನೆಯು ಜ್ಯೋತಿಷ್ಯದ ದೃಷ್ಟಿಯಿಂದ ತುಂಬಾ ಮಂಗಳಕರವಾಗಿದೆ ಎಂದು ಅವರು ಹೇಳಿದ್ದಾರೆ.
ಖಂಡಿತವಾಗಿಯೂ ಭಾರತವು ಹೆಚ್ಚು ಶಕ್ತಿಶಾಲಿ ರೂಪದಲ್ಲಿ ಹೊರಹೊಮ್ಮುತ್ತದೆ. ವಿಕ್ರಮ ಸಂವತ್ 2080, ಜ್ಯೇಷ್ಠ ಮಾಸ, ಕೃಷ್ಣ ಪಕ್ಷ, ಅಷ್ಟಮಿ ತಿಥಿ ಮತ್ತು ಪೂರ್ವ ಫಾಲ್ಗುಣಿ ನಕ್ಷತ್ರದಲ್ಲಿ ಸಂಸತ್ ಭವನದ ಉದ್ಘಾಟನೆಯ ಸಂಪೂರ್ಣ ಕಾರ್ಯಕ್ರಮವನ್ನು ಪೂರ್ಣಗೊಳಿಸುವುದು ಅತ್ಯಂತ ಶುಭ ಸಂಕೇತವನ್ನು ನೀಡುತ್ತಿದೆ ಎಂದು ಹೇಳಿದರು. 28ರಂದು ಹಲವು ರೀತಿಯ ಶುಭ ಯೋಗಗಳು ರೂಪುಗೊಳ್ಳುತ್ತಿವೆ. ಹರ್ಷ ಯೋಗ, ವಜ್ರ ಯೋಗ, ಸರ್ವಾರ್ಥ ಸಿದ್ಧಿ ಯೋಗ, ರವಿ ಯೋಗ ಮತ್ತು ಯಯೀಜಯ ಯೋಗ ಈ ಐದು ಯೋಗಗಳ ಸಂಯೋಜನೆಯು ಈ ದಿನದ ಐಶ್ವರ್ಯವನ್ನು ಹೆಚ್ಚಿಸುತ್ತಿದೆ ಎಂದು ತಿಳಿಸಿದ್ದಾರೆ.
ಅಭಿಜಿತ್ ಮುಹೂರ್ತದಲ್ಲಿ ಉದ್ಘಾಟನೆ ಶುಭ ಫಲ ನೀಡಲಿದೆ: ಮುಖ್ಯ ಕಾರ್ಯಕ್ರಮವಾದ ಸಂಸತ್ ಭವನದ ಉದ್ಘಾಟನೆಯನ್ನು ಮಧ್ಯಾಹ್ನ 12:00 ಗಂಟೆ ಸುಮಾರಿಗೆ ಖಚಿತಪಡಿಸಲಾಗಿದೆ ಎಂದು ಹೇಳಲಾಗಿದೆ. ಈ ವೇಳೆ, ಅಭಿಜಿತ್ ಮುಹೂರ್ತ ಇದ್ದು ಅಭಿಜಿತ್ ಮುಹೂರ್ತದಲ್ಲಿ ಮಾಡಿದ ಯಾವುದೇ ಕಾರ್ಯದ ಫಲವು ಶುಭ ಎಂದು ನಂಬಲಾಗುತ್ತದೆ. ಪಂಚಾಂಗದಲ್ಲಿ ಯಾವುದೇ ನ್ಯೂನತೆಗಳಿದ್ದರೆ, ಸ್ವಯಂಚಾಲಿತವಾಗಿ ಈ ದೋಷವನ್ನು ತೆಗೆದುಹಾಕಲಾಗುತ್ತದೆ. ಇದರೊಂದಿಗೆ ಸಿಂಹ ಲಗ್ನ ಮತ್ತು ಸಿಂಹ ರಾಶಿ ಒಟ್ಟಿಗೆ ಇವೆ. ಸಿಂಹ ರಾಶಿಯನ್ನು ಸ್ಥಿರ ಆರೋಹಣ, ಪ್ರಬಲ ಮತ್ತು ಮಂಗಳಕರ ಸಮಯ ಎಂದು ಪರಿಗಣಿಸಲಾಗುತ್ತದೆ. ಸ್ಥಿರ ಆರೋಹಣದಲ್ಲಿ ನಡೆಸಲಾಗುವ ಆಚರಣೆಗಳು ದೀರ್ಘಕಾಲದವರೆಗೆ ಸ್ಥಿರತೆಯನ್ನು ಒದಗಿಸುತ್ತವೆ.
ಸ್ವಾಮಿ ದಿವ್ಯಾನಂದ ಮಹಾರಾಜ್ ಪ್ರಕಾರ, ಸಂಸತ್ ಭವನವನ್ನು ತ್ರಿಕೋನದ ಆಕಾರದಲ್ಲಿ ನಿರ್ಮಿಸಲಾಗಿದೆ. ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ತ್ರಿಕೋನ ಆಕಾರವು ಮಂಗಳದ ಸಂಕೇತವಾಗಿದೆ, ಮಂಗಳವನ್ನು ಈ ವಲಯಗಳಲ್ಲಿ ಕಮಾಂಡರ್ ಎಂದು ಪರಿಗಣಿಸಲಾಗುತ್ತದೆ. ಇಲ್ಲಿ ಕಮಾಂಡರ್ ಎಂದರೆ ಶೌರ್ಯ ಮತ್ತು ಪರಾಕ್ರಮ. ಸಂಸತ್ ಭವನವು ಇಡೀ ರಾಷ್ಟ್ರದ ಕೇಂದ್ರವಾಗಿದೆ. ರಾಷ್ಟ್ರದ ಕೇಂದ್ರಬಿಂದು, ಅಂದರೆ ನಮ್ಮ ಸಂಸತ್ ಭವನವು ಶೌರ್ಯದಿಂದ ಸಜ್ಜುಗೊಂಡಿದ್ದರೆ, ಖಂಡಿತವಾಗಿಯೂ ರಾಷ್ಟ್ರವು ಬಲಿಷ್ಠವಾಗಿರುತ್ತದೆ ಮತ್ತು ಇತರರ ಮೇಲೆ ಪ್ರಾಬಲ್ಯ ಸಾಧಿಸುತ್ತದೆ. ಭಾರತ ವಿಶ್ವದಲ್ಲಿಯೇ ಪ್ರಬಲ ರಾಷ್ಟ್ರವಾಗಿ ಹೊರಹೊಮ್ಮಲಿದೆ ಎಂಬುದು ಇದು ಸ್ಪಷ್ಟವಾಗಿ ತೋರಿಸುತ್ತದೆ ಎಂದು ಹೇಳಿದರು.
ಭಾನುವಾರ (ನಾಳೆ) ನೂತನ ಸಂಸತ ಭವನ ಉದ್ಘಾಟನೆ ಗೊಳ್ಳಲಿದೆ. ಇದು ಹಲವಾರು ವೈಶಿಷ್ಟ್ಯಗಳನ್ನು ಹೊಂದಿದ್ದು, ತ್ರಿಕೋನ ಆಕಾರದ ಸಂಸತ್ತು ಭವನ ಮೂರು ದ್ವಾರಗಳನ್ನು ಹೊಂದಿದ್ದು, ಆ ದ್ವಾರಗಳಿಗೆ ಹೆಸರನ್ನು ಸಹ ನೀಡಲಾಗಿದೆ. ಸಂಸದರು ಪ್ರವೇಶ ಮಾಡುವ ದ್ವಾರಕ್ಕೆ ಜ್ಞಾನ ದ್ವಾರ, ಗಣ್ಯರ ಪ್ರವೇಶ ದ್ವಾರಕ್ಕೆ ಶಕ್ತಿದ್ವಾರ, ಅಧಿಕಾರಗಳ ಪ್ರವೇಶ ದ್ವಾರಕ್ಕೆ ಕರ್ಮ ದ್ವಾರ ಎಂದು ಹೆಸರಿಡಲಾಗಿದೆ.
ಮತ್ತೊಂದು ವಿಶೇಷತೆ ಎಂದರೆ ಭವನ ಉದ್ಘಾಟನೆಯ ದಿನ ಭಾರತ ಸರ್ಕಾರ 75 ರೂಪಾಯಿಯ ವಿಶೇಷ ನಾಣ್ಯವನ್ನು ಕೂಡ ಬಿಡುಗಡೆ ಮಾಡಲು ನಿರ್ಧರಿಸಿದೆ. ಈ ಬಗ್ಗೆ ಹಣಕಾಸು ಸಚಿವಾಲಯ ಪ್ರಕಟಣೆಯಲ್ಲಿ ತಿಳಿಸಿದೆ ಪ್ರಧಾನಿ ಮೋದಿ ನೂತನ ಸಂಸತ್ ಭವನವನ್ನು ಉದ್ಘಾಟನೆ ಮಾಡಲಿದ್ದಾರೆ.
ಇದನ್ನೂ ಓದಿ: ನೂತನ ಸಂಸತ್ ಕಟ್ಟಡದ ಉದ್ಘಾಟನೆಗೆ ಕ್ಷಣಗಣನೆ: ಭವ್ಯ ಭವನದ ಸೊಗಸು ಹೀಗಿದೆ!