ETV Bharat / bharat

ಲಸಿಕೆ ತಯಾರಿಕೆ ವಿಳಂಬ: ಸೆರಮ್​ ಇನ್ಸಿಟ್ಯೂಟ್​ ಆಫ್​​ ಇಂಡಿಯಾಕ್ಕೆ ಆಸ್ಟ್ರಾಜೆನಿಕಾ ನೋಟಿಸ್​

ಕೋವಿಡ್​​ ಲಸಿಕೆ ತಯಾರಿಕೆಯಲ್ಲಿ ತಡವಾಗುತ್ತಿರುವ ಕಾರಣಕ್ಕಾಗಿ ಅಸ್ಟ್ರಾಜೆನಿಕಾ ಇದೀಗ ಸೆರಮ್​ ಇನ್ಸ್​ಟ್ಯೂಟ್​ ಆಫ್​ ಇಂಡಿಯಾಗೆ ನೋಟಿಸ್​ ನೀಡಿದೆ.

AstraZeneca legal notice
AstraZeneca legal notice
author img

By

Published : Apr 8, 2021, 3:39 PM IST

ನವದೆಹಲಿ: ಆದಾರ್​ ಪೂನಾವಾಲಾ ಅವರ ಸೆರಮ್​ ಇನ್ಸಿಟ್ಯೂಟ್​ ಆಫ್​ ಇಂಡಿಯಾ(ಎಸ್​​ಐಐ)ಗೆ ಆಸ್ಟ್ರಾಜೆನಿಕಾ ನೋಟಿಸ್​ ನೀಡಿದೆ. ಕೋವಿಡ್​​ ವ್ಯಾಕ್ಸಿನ್​​​ ಪೂರೈಕೆಯಲ್ಲಿ ವಿಳಂಬವನ್ನು ಪ್ರಶ್ನಿಸಿ ಆಸ್ಟ್ರಾಜೆನಿಕಾ ಸಿರಮ್​ ಇನ್ಸಿಟ್ಯೂಟ್​​ಗೆ ಈ ನೋಟಿಸ್​ ಜಾರಿ ಮಾಡಿದೆ.

ಭಾರತದಲ್ಲಿ ಕೋವಿಶೀಲ್ಡ್​ಗೆ ಹೆಚ್ಚುತ್ತಿರುವ ಬೇಡಿಕೆ ಹಿನ್ನೆಲೆಯಲ್ಲಿ ಲಸಿಕೆ ತಯಾರಿಕೆ ಮೇಲೆ ಭಾರಿ ಒತ್ತಡ ಇರುವ ಕಾರಣ ಪೂರೈಕೆಯಲ್ಲಿ ತಡವಾಗುತ್ತಿದೆ ಎಂದು ಪೂನಾವಾಲಾ ಆಸ್ಟ್ರಾಜೆನಿಕಾ ನೋಟಿಸ್​ಗೆ ನೀಡಿರುವ ಉತ್ತರದಲ್ಲಿ ತಿಳಿಸಿದ್ದಾರೆ. ಇನ್ನೊಂದು ಅಂಶವನ್ನು ಉತ್ತರದಲ್ಲಿ ಹೇಳಿರುವ ಪೂನಾವಾಲಾ, ಇತರ ದೇಶಗಳಿಗೆ ಕೋವಿಶೀಲ್ಡ್​ ರಫ್ತನ್ನು ತಾತ್ಕಾಲಿಕ ನಿಲುಗಡೆ ಮಾಡಿ ದೇಶದಲ್ಲಿ ಹೆಚ್ಚುತ್ತಿರುವ ಬೇಡಿಕೆ ಪೂರೈಕೆ ಮಾಡುವಂತೆ ಭಾರತ ಸರ್ಕಾರ ಹೇಳಿದೆ. ಹೀಗಾಗಿ ಬೇಡಿಕೆ ಈಡೇರಿಕೆ ಮತ್ತು ಪೂರೈಕೆಯಲ್ಲಿ ವಿಳಂಬವಾಗುತ್ತಿದೆ ಎಂದು ಸ್ಪಷ್ಟಪಡಿಸಲಾಗಿದೆ.

ಇದನ್ನೂ ಓದಿ: ಉತ್ತರಾಖಂಡ: ಐಐಟಿ ರೂರ್ಕಿಯ 88 ವಿದ್ಯಾರ್ಥಿಗಳಿಗೆ ಕೊರೊನಾ ದೃಢ

ಕಳೆದ ಮಾರ್ಚ್​ನಲ್ಲಿ ಅಸ್ಟ್ರಾಜೆನಿಕ 142 ರಾಷ್ಟ್ರಗಳಿಗೆ ಕೋವಿಶೀಲ್ಡ್​ ಪೂರೈಕೆ ಮಾಡುವುದಾಗಿ ಘೋಷಣೆ ಮಾಡಿತ್ತು. ಅದರಂತೆ ಲಸಿಕೆ ಉತ್ಪಾದನೆ ಮಾಡಿ ಪೂರೈಕೆ ಮಾಡಲಾಗುತ್ತಿದೆ. ಆಸ್ಟ್ರಾಜೆನಿಕಾ ಭಾರತದ ಸೆರಮ್​ ಇನ್ಸಿಟ್ಯೂಟ್​ ಆಫ್ ಇಂಡಿಯಾ ಜತೆ ಲಸಿಕಾ ಉತ್ಪಾದನೆಯ ಒಪ್ಪಂದ ಮಾಡಿಕೊಂಡಿದೆ. ಸೆರಮ್​ ಇನ್ಸಿಟ್ಯೂಟ್​​​ ಕೋವಾಕ್ಸ್​​​​​​​​​​​​​​​ ಲಸಿಕೆ ಪೂರೈಸುವ ಅತಿದೊಡ್ಡ ಕಂಪನಿಯಾಗಿದೆ. ಹಲವು ಮಿಲಿಯನ್​​ ಕೋವ್ಯಾಕ್ಸ್​​​ ಬಡ ಮತ್ತು ಮಧ್ಯಮ ಆದಾಯದ ರಾಷ್ಟ್ರಗಳಿಗೆ ಪೂರೈಕೆ ಮಾಡಲಾಗಿದೆ ಎಂದು ಆಸ್ಟ್ರಾಜೆನಿಕಾ ಹೇಳಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.