ನವದೆಹಲಿ: ಸೇರಂ ಇನ್ಸ್ಟಿಟ್ಯೂಟ್ ಆಫ್ ಇಂಡಿಯಾ ಹಾಗೂ ಅಸ್ಟ್ರಾಜೆನೆಕಾ ಸಂಸ್ಥೆ ಜಂಟಿಯಾಗಿ ಅಭಿವೃದ್ಧಿಪಡಿಸಿರುವ ದೇಶೀಯ ಕೊರೊನಾ ಲಸಿಕೆ 'ಕೊವಿಶೀಲ್ಡ್' ಅನ್ನು ಬಳಸಲು ನೇಪಾಳ ಸರ್ಕಾರ ಅನುಮೋದಿಸಿದೆ.
ಇಂದು ದೆಹಲಿಯಲ್ಲಿ ನೇಪಾಳ-ಭಾರತ ಜಂಟಿ ಆಯೋಗದ ಆರನೇ ಸಭೆ ನಡೆದಿದೆ. ನೇಪಾಳದ ವಿದೇಶಾಂಗ ಸಚಿವ ಪ್ರದೀಪ್ ಗಯಾವಲಿ ಹಾಗೂ ಭಾರತದ ವಿದೇಶಾಂಗ ವ್ಯವಹಾರಗಳ ಸಚಿವ ಜೈಶಂಕರ್ ಕೋವಿಡ್ ಲಸಿಕೆ ಸೇರಿದಂತೆ ಅನೇಕ ವಿಚಾರಗಳ ಕುರಿತು ಸಭೆಯಲ್ಲಿ ಚರ್ಚಿಸಿದ್ದಾರೆ.
ಇದನ್ನೂ ಓದಿ: 17 ಸಾವಿರ ಕೋಟಿ ರೂ. ಹಗರಣ: ರೋಸ್ ವ್ಯಾಲಿ ಗ್ರೂಪ್ ಮುಖ್ಯಸ್ಥನ ಪತ್ನಿ ಅರೆಸ್ಟ್
ನೇಪಾಳದ ಡ್ರಗ್ ಅಡ್ಮಿನಿಸ್ಟ್ರೇಷನ್ ಡಿಪಾರ್ಟ್ಮೆಂಟ್ (ಡಿಡಿಎ) ದೇಶದಲ್ಲಿ ಭಾರತ ನಿರ್ಮಿತ ಲಸಿಕೆ ಬಳಕೆಗೆ ಅನುಮತಿ ನೀಡಿ ಭಾರತದೊಂದಿಗೆ ಕೋವಿಡ್ ಲಸಿಕೆ ಒಪ್ಪಂದಕ್ಕೆ ಸಹಿ ಹಾಕಿದೆ.
ಚೀನಾ ಮತ್ತು ರಷ್ಯಾದಂತಹ ಅನೇಕ ರಾಷ್ಟ್ರಗಳು ನೇಪಾಳಕ್ಕೆ ಲಸಿಕೆಗಳನ್ನು ನೀಡಲು ಆಸಕ್ತಿ ಹೊಂದಿದ್ದವು. ಆದರೆ ಭಾರತದ ಲಸಿಕೆಗೆ ಆದ್ಯತೆ ನೀಡುವ ಮೂಲಕ ನೇಪಾಳವು ಉಭಯ ರಾಷ್ಟ್ರಗಳ ಸಂಬಂಧವನ್ನು ಬಲಪಡಿಸಿದೆ.