ETV Bharat / bharat

ರಾಜಸ್ಥಾನದಲ್ಲಿ ಝಣ ಝಣ ಕಾಂಚಾಣ: 690 ಕೋಟಿ ರೂಪಾಯಿ ನಗದು, ಮದ್ಯ, ಡ್ರಗ್ಸ್ ವಶ - Cash liquor drugs seize

ರಾಜಸ್ಥಾನ ವಿಧಾನಸಭೆ ಚುನಾವಣೆಯಲ್ಲಿ ಹಣದ ಹೊಳೆಯೇ ಹರಿದಿದೆ. ಚುನಾವಣಾ ಆಯೋಗದ ಜೊತೆ ವಿವಿಧ ಏಜೆನ್ಸಿಗಳು ನಡೆಸಿದ ಕಾರ್ಯಾಚರಣೆಯಲ್ಲಿ ದಾಖಲೆಯ ಪ್ರಮಾಣದಲ್ಲಿ ಹಣ ಜಪ್ತಿ ಮಾಡಲಾಗಿದೆ.

ರಾಜಸ್ಥಾನ ವಿಧಾನಸಭೆ ಚುನಾವಣೆ
ರಾಜಸ್ಥಾನ ವಿಧಾನಸಭೆ ಚುನಾವಣೆ
author img

By ETV Bharat Karnataka Team

Published : Nov 25, 2023, 9:42 PM IST

ನವದೆಹಲಿ: ತೀವ್ರ ಬಿರುಸಿನಿಂದ ಕೂಡಿದ ರಾಜಸ್ಥಾನ ವಿಧಾನಸಭೆ ಚುನಾವಣೆ ಮುಗಿದಿದ್ದು, ರಾಜ್ಯಾದ್ಯಂತ ಶೇಕಡಾ 68 ರಷ್ಟು ಮತದಾನವಾಗಿದೆ. ಬಿಜೆಪಿ- ಕಾಂಗ್ರೆಸ್​ ನಡುವಿನ ನೇರ ಹಣಾಹಣಿಯಲ್ಲಿ ಕುರುಡು ಕಾಂಚಾಣ ಸದ್ದು ಮಾಡಿದೆ. ಮತದಾನದ ಕೊನೆಯ ದಿನ ಸೇರಿದಂತೆ ರಾಜ್ಯದಲ್ಲಿ 690 ಕೋಟಿ ರೂಪಾಯಿ ನಗದು, ಮದ್ಯ, ಡ್ರಗ್ಸ್ ಮತ್ತು ಇತರ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ.

ಇಂದು ಮತದಾನ ಮುಗಿದ ನಂತರ ಚುನಾವಣಾ ಆಯೋಗವು ಹಂಚಿಕೊಂಡ ಅಂಕಿ - ಅಂಶಗಳ ಪ್ರಕಾರ, ವಿವಿಧ ಜಾರಿ ಸಂಸ್ಥೆಗಳಿಂದ ಒಟ್ಟು 690 ಕೋಟಿ ರೂಪಾಯಿ ಹಣವನ್ನು ವಶಕ್ಕೆ ಪಡೆಯಲಾಗಿದೆ. 2018 ರಲ್ಲಿ ನಡೆದ ಚುನಾವಣೆಗಿಂತ ಈ ಬಾರಿ ಶೇಕಡಾ 970 ರಷ್ಟು ಹೆಚ್ಚಿನ ಹಣ ಹರಿದಾಡಿದೆ. ನಗದು, ಮದ್ಯ, ಡ್ರಗ್ಸ್, ಬೆಲೆಬಾಳುವ ಲೋಹಗಳು ಸೇರಿದಂತೆ ಇತರ ವಸ್ತುಗಳನ್ನು ಜಪ್ತಿ ಮಾಡಲಾಗಿದೆ ಎಂದು ಹೇಳಿದೆ.

ಸಿ-ವಿಜಿಲ್​ಗೆ ದೂರುಗಳ ಸುರಿಮಳೆ: ಭ್ರಷ್ಟಾಚಾರ, ಹಣದ ಆಮಿಷದ ಘಟನೆಗಳು ಕಂಡು ಬಂದಲ್ಲಿ ದೂರು ನೀಡಲು ಆರಂಭಿಸಲಾಗಿರುವ ಸಿ-ವಿಜಿಲ್ ಆ್ಯಪ್​ಗೆ ಭರ್ಜರಿ ಸ್ಪಂದನೆ ಸಿಕ್ಕಿದೆ. ಶನಿವಾರ (ನವೆಂಬರ್​ 25) ಬೆಳಗ್ಗಿನವರೆಗೆ ಒಟ್ಟು 20,298 ದೂರುಗಳು ಬಂದಿವೆ. ಇದರಲ್ಲಿ 20,245 ವಿಲೇವಾರಿ ಮಾಡಲಾಗಿದೆ. ಇನ್ನೂ 53 ದೂರುಗಳು ಬಾಕಿ ಇವೆ. ಜನರು ನೀಡಿದ ದೂರುಗಳನ್ನು 100 ನಿಮಿಷಗಳಲ್ಲಿ ಪರಿಹರಿಸಲು ಈ ಆ್ಯಪ್​ ಅನುವು ಮಾಡಿಕೊಟ್ಟಿದೆ.

ಹಣ, ವಸ್ತುಗಳ ಹಂಚಿಕೆ ಸೇರಿದಂತೆ ಅನುಮತಿ ರಹಿತವಾಗಿ ನಗರಗಳಲ್ಲಿ ಹಾಕಲಾದ ಪೋಸ್ಟರ್‌ಗಳು ಅಥವಾ ಬ್ಯಾನರ್‌ಗಳಿಗೆ ಸಂಬಂಧಿಸಿದಂತೆ ಗರಿಷ್ಠ ಪ್ರಮಾಣದಲ್ಲಿ ದೂರುಗಳು ಬಂದಿವೆ. ಜನರು ರಾಜ್ಯದ ಮೂಲೆ ಮೂಲೆಗಳಿಂದ ಈ ಬಗ್ಗೆ ದೂರು ದಾಖಲಿಸಿದ್ದರು ಎಂದು ಆಯೋಗ ತಿಳಿಸಿದೆ.

ಮುಖ್ಯ ಚುನಾವಣಾ ಆಯುಕ್ತ (ಸಿಇಸಿ) ರಾಜೀವ್ ಕುಮಾರ್, ಚುನಾವಣಾ ಆಯುಕ್ತರಾದ ಅನುಪ್ ಚಂದ್ರ ಪಾಂಡೆ, ಅರುಣ್ ಗೋಯೆಲ್ ಅವರನ್ನು ಒಳಗೊಂಡ ಆಯೋಗವು ನೆರೆಯ ರಾಜ್ಯಗಳ ಮುಖ್ಯ ಕಾರ್ಯದರ್ಶಿಗಳು, ಪೊಲೀಸ್ ಮಹಾನಿರ್ದೇಶಕರು ಮತ್ತು ಇತರ ಜಾರಿ ಏಜೆನ್ಸಿಗಳೊಂದಿಗೆ ಜೊತೆಗೂಡಿ ವಿವರವಾದ, ನಿಯಮಿತ, ಸಮಗ್ರ ವಿಮರ್ಶೆಗಳನ್ನು ನಡೆಸಿದೆ. ದೂರುಗಳ ಸುಗಮ ವಿಲೇವಾರಿ, ಮುಕ್ತ, ನ್ಯಾಯಸಮ್ಮತತೆಯಿಂದ ನಡೆದಿವೆ. ರಾಜ್ಯದಲ್ಲಿ ಎಲ್ಲರನ್ನೂ ಒಳಗೊಳ್ಳುವ ಚುನಾವಣೆ ನಡೆದಿದೆ ಎಂದು ಚುನಾವಣಾ ಆಯೋಗ ಹೇಳಿದೆ.

ರಾಜಸ್ಥಾನದಾದ್ಯಂತ ಸ್ಥಾಪಿಸಲಾಗಿದ್ದ 51,890 ಮತಗಟ್ಟೆಗಳಲ್ಲಿ ನವವಿವಾಹಿತರು, ವಿಕಲಚೇತನರು, ಮಹಿಳೆಯರು ಮತ್ತು ತೃತೀಯಲಿಂಗಿ ಮತದಾರರು, ಬುಡಕಟ್ಟು ಜನಾಂಗದವರು ಮತ್ತು ಯುವಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದರು ಎಂದು ಅಧಿಕಾರಿಗಳು ತಿಳಿಸಿದರು.

ಇದನ್ನೂ ಓದಿ: ರಾಜಸ್ಥಾನ ಚುನಾವಣೆ: ನೀತಿ ಸಂಹಿತೆ ಉಲ್ಲಂಘಣೆ ಆರೋಪ, ರಾಹುಲ್ ಗಾಂಧಿ ವಿರುದ್ಧ ಬಿಜೆಪಿ ದೂರು

ETV Bharat Logo

Copyright © 2025 Ushodaya Enterprises Pvt. Ltd., All Rights Reserved.