ETV Bharat / bharat

ಮೂರು ರಾಜ್ಯಗಳಲ್ಲಿ ಮತದಾನ ಪ್ರಕ್ರಿಯೆ ಅಂತ್ಯ : ಎಲ್ಲೆಲ್ಲಿ ಎಷ್ಟು ವೋಟಿಂಗ್​? - Single-phase polling in Uttarakhand

ಉತ್ತರಪ್ರದೇಶದಲ್ಲಿ 2ನೇ ಹಂತದ ಮತದಾನದಲ್ಲಿ 55 ವಿಧಾನಸಭೆ ಸ್ಥಾನಗಳಿಗೆ 586 ಅಭ್ಯರ್ಥಿಗಳು ಕಣದಲ್ಲಿದ್ದರು. ಗೋವಾದಲ್ಲಿ ಒಂದನೇ ಹಂತದ ಚುನಾವಣೆಯಲ್ಲಿ 40 ಸ್ಥಾನಗಳಿಗೆ 301 ಅಭ್ಯರ್ಥಿಗಳು ಮತ್ತು ಉತ್ತರಾಖಂಡದ 70 ಸ್ಥಾನಗಳಿಗೆ 632 ಅಭ್ಯರ್ಥಿಗಳು ಸ್ಪರ್ಧಿಸಿದ್ದರು. ಮಾರ್ಚ್ 10ರಂದು ಮತ ಎಣಿಕೆ ಕಾರ್ಯ ನಡೆಯಲಿದೆ..

ಮುಗಿದ ಮೂರು ರಾಜ್ಯಗಳಲ್ಲಿನ ಮತದಾನ ಪ್ರಕ್ರಿಯೆ
ಮುಗಿದ ಮೂರು ರಾಜ್ಯಗಳಲ್ಲಿನ ಮತದಾನ ಪ್ರಕ್ರಿಯೆ
author img

By

Published : Feb 14, 2022, 7:16 PM IST

Updated : Feb 14, 2022, 8:25 PM IST

ಹೈದರಾಬಾದ್ : ಪಂಚರಾಜ್ಯ ಚುನಾವಣೆ ಹಿನ್ನೆಲೆ ಇಂದು ಮೂರು ಪ್ರಮುಖ ರಾಜ್ಯಗಳಲ್ಲಿ ಚುನಾವಣೆ ನಡೆದಿದೆ. ಗೋವಾದಲ್ಲಿ ಶೇ.77.9, ಯುಪಿಯಲ್ಲಿ ಶೇ.61 ಹಾಗೂ ಉತ್ತರಾಖಂಡ್‌ನಲ್ಲಿ ಶೇ. 59.5ರಷ್ಟು ಮತದಾನ ನಡೆದಿದೆ. ಯುಪಿಯಲ್ಲಿ ಹಂತ 2 ಹಾಗೂ ಉತ್ತರಾಖಂಡ ಮತ್ತು ಗೋವಾದಲ್ಲಿ ಏಕ-ಹಂತದ ಮತದಾನ ನಡೆದಿದೆ.

ಇದನ್ನೂ ಓದಿ: ಗೋವಾ, ಉತ್ತರಾಖಂಡ, ಉತ್ತರಪ್ರದೇಶದಲ್ಲಿ ಬಿರುಸಿನ ಮತದಾನ: ಈವರೆಗೆ ಆದ ಬೆಳವಣಿಗೆ ಇಷ್ಟು!

ಗೋವಾದ ಎಲ್ಲಾ 40 ಸ್ಥಾನಗಳಿಗೆ ಮತ್ತು ಉತ್ತರಪ್ರದೇಶದ ಒಂಬತ್ತು ಜಿಲ್ಲೆಗಳ 55 ಸ್ಥಾನಗಳಿಗೆ ಹಾಗೂ ಉತ್ತರಾಖಂಡದ 70 ಸ್ಥಾನಗಳಿಗೆ ಬೆಳಗ್ಗೆ 7 ಗಂಟೆಗೆ ಮತದಾನ ಆರಂಭವಾಗಿತ್ತು.

ಉತ್ತರಪ್ರದೇಶದಲ್ಲಿ 2ನೇ ಹಂತದ ಮತದಾನದಲ್ಲಿ 55 ವಿಧಾನಸಭೆ ಸ್ಥಾನಗಳಿಗೆ 586 ಅಭ್ಯರ್ಥಿಗಳು ಕಣದಲ್ಲಿದ್ದರು. ಗೋವಾದಲ್ಲಿ ಒಂದನೇ ಹಂತದ ಚುನಾವಣೆಯಲ್ಲಿ 40 ಸ್ಥಾನಗಳಿಗೆ 301 ಅಭ್ಯರ್ಥಿಗಳು ಮತ್ತು ಉತ್ತರಾಖಂಡದ 70 ಸ್ಥಾನಗಳಿಗೆ 632 ಅಭ್ಯರ್ಥಿಗಳು ಸ್ಪರ್ಧಿಸಿದ್ದರು. ಮಾರ್ಚ್ 10ರಂದು ಮತ ಎಣಿಕೆ ಕಾರ್ಯ ನಡೆಯಲಿದೆ.

Last Updated : Feb 14, 2022, 8:25 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.