ಶ್ರೀನಗರ (ಜಮ್ಮು ಮತ್ತು ಕಾಶ್ಮೀರ): ಅನಂತನಾಗ್ ಜಿಲ್ಲೆಯ ಐಶ್ಮುಖಂ ಪ್ರದೇಶದಲ್ಲಿ ಮಾನಸಿಕ ಅಸ್ವಸ್ಥನೊಬ್ಬ ದಾಳಿ ನಡೆಸಿದ್ದು, ಮೂವರು ಸಾವನ್ನಪ್ಪಿದ್ದಾರೆ. ಆರಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ.
ಐಶ್ಮುಖಂ ನಿವಾಸಿ ಜಾವೇದ್ ಹಸನ್ ರಾಥರ್ ಎಂಬಾತ ಮಾನಸಿಕ ಅಸ್ವಸ್ಥನಾಗಿದ್ದ. ಇಂದು ಬೆಳಗ್ಗೆ ತನ್ನ ತಾಯಿ ಸೇರಿದಂತೆ ಮೂವರ ಮೇಲೆ ಹಲ್ಲೆ ನಡೆಸಿದ್ದು, ಅವರು ಸಾವನ್ನಪ್ಪಿದ್ದಾರೆ. ಬಳಿಕ ಮನೆಯ ಹೊರಗಿದ್ದ ಸ್ಥಳೀಯರ ಮೇಲೂ ಎರಗಿದ್ದಾನೆ. ಗಾಯಾಳುಗಳನ್ನು ಹತ್ತಿರದ ಆಸ್ಪತ್ರೆಗೆ ದಾಖಲಿಸಲಾಗಿದೆ.
ಮೃತರನ್ನು ಆರೋಪಿಯ ತಾಯಿ ಹಫೀಜಾ ಬಾಗುಮ್, ಸ್ಥಳೀಯ ನಿವಾಸಿಗಳಾದ ಗುಲಾಮ್ ನಬಿ ಕಾದಿಮ್ ಮತ್ತು ಮೊಹಮ್ಮದ್ ಅಮೀನ್ ಶಾ ಎಂದು ಗುರುತಿಸಲಾಗಿದೆ. ಆರೋಪಿಯನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಇದನ್ನೂ ಓದಿ:15 ದಿನ ಗಂಟಲಲ್ಲೇ ಉಳಿದ ಜಿಗಣೆ ಜೀವಂತ: ಅಚ್ಚರಿಗೊಳಗಾದ ವೈದ್ಯರಿಂದ ಯಶಸ್ವಿ ಶಸ್ತ್ರಚಿಕಿತ್ಸೆ