ಬರ್ಪೇಟಾ(ಅಸ್ಸೋಂ): ಬಾಂಗ್ಲಾದೇಶದಲ್ಲಿನ ಅಲ್‌ಖೈದಾ ಉಗ್ರ ಸಂಘಟನೆ ಜೊತೆ ಸಂಪರ್ಕ ಹೊಂದಿರುವ ಆರೋಪದ ಮೇಲೆ ಆರು ಮಂದಿ ಶಂಕಿತರನ್ನ ಅಸ್ಸೋಂನ ಬರ್ಪೇಟಾದಲ್ಲಿ ಪೊಲೀಸರು ಬಂಧಿಸಿದ್ದಾರೆ. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಮಿತಾಭ್ ಸಿನ್ಹಾ ಈ ವಿಷಯ ತಿಳಿಸಿದ್ದಾರೆ.

ಬಂಧಿತ ಆರೋಪಿಗಳನ್ನ ಮುಫ್ತಿ ಸೈಲೆಮಾನ್, ಜೆಹಿದುಲ್ ಇಸ್ಲಾಂ, ಸದ್ದಾನ್ ಹುಸೇನ್, ರಸಿದುಲ್ ಇಸ್ಲಾಂ, ಮುಷರಫ್ ಹುಸೇನ್ ಮತ್ತು ಮಕಿಬುಲ್ ಇಸ್ಲಾಂ ಎಂದು ಗುರುತಿಸಲಾಗಿದೆ. ಆರು ಮಂದಿ ಬಾಂಗ್ಲಾದೇಶದ ಅಲ್‌ಖೈದಾ ಸಂಘಟನೆಯ ಪ್ರಮುಖ ಮೊಹಮ್ಮದ್ ಸುಮನ್ ಜೊತೆ ನಿಕಟ ಸಂಪರ್ಕದಲ್ಲಿದ್ದರು ಎಂದು ತಿಳಿದು ಬಂದಿದೆ.

ಇದನ್ನೂ ಓದಿ: ಹನುಮ ಜಯಂತಿ ಮೆರವಣಿಗೆ ವೇಳೆ ಕಲ್ಲು ತೂರಾಟ.. ಪೊಲೀಸರಿಗೆ ಗಾಯ, ಬಿಗುವಿನ ವಾತಾವರಣ
ಪ್ರಕರಣವೊಂದರ ಸಂಬಂಧ ಮಾರ್ಚ್ 4ರಂದು ಬಂಧನಕ್ಕೊಳಗಾಗಿದ್ದ ವ್ಯಕ್ತಿಯ ಆಧಾರದ ಮೇರೆಗೆ ಕಾರ್ಯಾಚರಣೆ ನಡೆಸಲಾಗಿದ್ದು, ಮದರಸಾವೊಂದರಲ್ಲಿ ಇವರನ್ನ ಬಂಧನ ಮಾಡಲಾಗಿದೆ. ಇವರೆಲ್ಲರೂ ಉಪಖಂಡದ ಅಲ್‌ಖೈದಾ ಸಂಘಟನೆ ಜೊತೆ ನಿಕಟ ಸಂಪರ್ಕ ಹೊಂದಿದ್ದರು ಎಂದು ತಿಳಿದು ಬಂದಿದೆ.
