ETV Bharat / bharat

ಮಣಿಪುರ ಹಿಂಸಾಚಾರ : 45 ಅಂಧ ವಿದ್ಯಾರ್ಥಿಗಳನ್ನು ರಕ್ಷಿಸಿದ ಅಸ್ಸೋಂ ರೈಫಲ್ಸ್​

author img

By

Published : May 14, 2023, 7:25 PM IST

Updated : May 14, 2023, 7:41 PM IST

ಮಣಿಪುರದಲ್ಲಿ ನಡೆದಿರುವ ಹಿಂಸಾಚಾರದಲ್ಲಿ ಒಟ್ಟಾರೆ 71 ಜನರು ಸಾವನ್ನಪ್ಪಿದ್ದಾರೆ ಎಂಬುದು ಅಧಿಕೃತ ಮಾಹಿತಿಯಿಂದ ತಿಳಿದುಬಂದಿದೆ.

ಅಸ್ಸೋಂ ರೈಫಲ್ಸ್‌ನಿಂದ ಮುಂದುವರೆದ ರಕ್ಷಣಾ ಕಾರ್ಯ
ಅಸ್ಸೋಂ ರೈಫಲ್ಸ್‌​ನಿಂದ ಮುಂದುವರೆದ ರಕ್ಷಣಾ ಕಾರ್ಯ
ಅಸ್ಸೋಂ ರೈಫಲ್ಸ್​ನಿಂದ ಮುಂದುವರೆದ ರಕ್ಷಣಾ ಕಾರ್ಯ

ತೇಜ್‌ಪುರ (ಅಸ್ಸೋಂ) : ಮಣಿಪುರದಲ್ಲಿ ನಡೆಯುತ್ತಿರುವ ಹಿಂಸಾಚಾರಕ್ಕೆ ಇಂದಿಗೆ 12 ದಿನಗಳು ಕಳೆದಿವೆ. ಆದರೂ ರಾಜ್ಯದಲ್ಲಿ ಇನ್ನೂ ಹಲವಾರು ಮಂದಿ ನಿರಾಶ್ರಿತರಿದ್ದಾರೆ. ಹಿಂಸಾಚಾರದ ಕೂಗು ಈ ನೆಲದಲ್ಲಿ ಆವರಿಸುತ್ತಿದ್ದಂತೆ ಸೇನೆ ಮತ್ತು ಅಸ್ಸೋಂ ರೈಫಲ್ಸ್‌ ತಂಡ ಮಾನವೀಯ ಕಾರ್ಯಗಳಿಗೆ ಮುಂದಾಗಿವೆ.

ಮೇ ಮೊದಲ ವಾರದಲ್ಲಿ ಮಣಿಪುರ ರಾಜ್ಯದಲ್ಲಿ ನಡೆದ ಘರ್ಷಣೆಗಳ ಮಧ್ಯೆ ಕಾಕ್ಚಿಂಗ್‌ನ ಮಿಷನ್ ಬ್ಲೈಂಡ್ ಸ್ಕೂಲ್‌ನ 45 ಅಂಧ ವಿದ್ಯಾರ್ಥಿಗಳನ್ನು ಮತ್ತು ಸಹಾಯಕ ಸಿಬ್ಬಂದಿಯನ್ನು ರಕ್ಷಿಸುವಲ್ಲಿ ರಕ್ಷಣಾ ಪಡೆ ಯಶಸ್ವಿಯಾಗಿದೆ.

ಅಸ್ಸೋಂ ರೈಫಲ್ಸ್​ನಿಂದ ಮಕ್ಕಳ ರಕ್ಷಣೆ: ಮಿಷನ್ ಬ್ಲೈಂಡ್ ಶಾಲೆಯ ಪ್ರಾಂಶುಪಾಲರಾದ ಕೆ ಪರೆನಾಗ್ ಕೋಮ್ ಅವರ ಕೋರಿಕೆಯ ಮೇರೆಗೆ ಹಿಂಸಾಚಾರದಲ್ಲಿ ಸಿಲುಕಿದ್ದ ಅಂಧ ಮಕ್ಕಳನ್ನು ಮತ್ತು ಪೋಷಕ ಸಿಬ್ಬಂದಿಯನ್ನು ರಕ್ಷಿಸಲು ಒಂದು ಆಂತರಿಕ ಭದ್ರತಾ ಪಡೆಯನ್ನು ನಿಯೋಜಿಸಲಾಯಿತು. ನಂತರ ಅವರನ್ನು ಸುರಕ್ಷಿತವಾಗಿ ಹೊರ ಕರೆತಂದು ಕಾಕ್ಚಿಂಗ್ ಗ್ಯಾರಿಸನ್‌ಗೆ ಕರೆದೊಯ್ಯಲಾಯಿತು. ಅಲ್ಲಿ ಅವರಿಗೆ ಮೇ 3 ರಿಂದ ಜಾರಿಗೆ ಬರುವಂತೆ ಸಾಂತ್ವನ, ಆಹಾರ ಮತ್ತು ಆಶ್ರಯವನ್ನು ಒದಗಿಸಲಾಯಿತು. ಅಂತಿಮವಾಗಿ, ಅಸ್ಸೋಂ ರೈಫಲ್ಸ್ ಈ ಮಕ್ಕಳನ್ನು ಸುರಕ್ಷಿತವಾಗಿ ಅವರ ಮನೆಗಳಿಗೆ ತಲುಪಿಸುವಲ್ಲಿ ಯಶಸ್ವಿಯಾಯಿತು.

45 ದೃಷ್ಟಿ ವಿಕಲಚೇತನ ವಿದ್ಯಾರ್ಥಿಗಳನ್ನು ರಕ್ಷಿಸಿದ ಅಸ್ಸೋಂ ರೈಫಲ್ಸ್​

ಈ ನಿರಾಶ್ರಿತ ಮಕ್ಕಳನ್ನು ಮತ್ತೆ ಸಂಬಂಧಿಕರೊಂದಿಗೆ ಸೇರಿಸುವ ಅಸ್ಸೋಂ ರೈಫಲ್ಸ್ ಕಾರ್ಯವನ್ನು ಕೆ ಪರೆನಾಗ್ ಕೋಮ್, ಪ್ರಿನ್ಸಿಪಾಲ್ ಮಿಷನ್ ಬ್ಲೈಂಡ್ ಸ್ಕೂಲ್ ಮತ್ತು ಅವರ ಪೋಷಕರು ಸರ್ವಾನುಮತದಿಂದ ಒಪ್ಪಿಕೊಂಡಿದ್ದಾರೆ. ಅಲ್ಲದೇ, ಅವರು ಈ ಕೆಲಸಕ್ಕೆ ತಮ್ಮ ಕೃತಜ್ಞತೆಯನ್ನು ವ್ಯಕ್ತಪಡಿಸಿದ್ದಾರೆ ಮತ್ತು ಈ ಸಮಯದಲ್ಲಿ ಅಸ್ಸೋಂ ರೈಫಲ್ಸ್ ತೆಗೆದುಕೊಂಡ ಪ್ರಯತ್ನಗಳನ್ನು ಶ್ಲಾಘಿಸಿದ್ದಾರೆ. ಇಲ್ಲಿಯವರೆಗೆ ಮಣಿಪುರದ ಹಿಂಸಾಚಾರದಲ್ಲಿ ಒಟ್ಟಾರೆಯಾಗಿ 71 ಜನರು ಪ್ರಾಣ ಕಳೆದುಕೊಂಡಿದ್ದಾರೆ ಮತ್ತು 231 ಮಂದಿ ಗಾಯಗೊಂಡಿದ್ದಾರೆ ಎಂದು ಅಧಿಕೃತ ಮಾಹಿತಿಯಿಂದ ತಿಳಿದುಬಂದಿದೆ.

71 ಜನರು ಹಿಂಸಾಚಾರಕ್ಕೆ ಬಲಿ: ಇತ್ತೀಚಿನ ದಿನಗಳಲ್ಲಿ ಮಣಿಪುರವು ರಾಜ್ಯದ ಮೈತೇಯಿ ಮತ್ತು ಬುಡಕಟ್ಟು ಸಮುದಾಯಗಳ ನಡುವೆ ವ್ಯಾಪಕ ಜನಾಂಗೀಯ ಹಿಂಸಾಚಾರ ಉಂಟಾಗಿತ್ತು. ಇಲ್ಲಿಯವರೆಗೆ ಕನಿಷ್ಠ 71 ಜನರು ಹಿಂಸಾಚಾರಕ್ಕೆ ಬಲಿಯಾಗಿದ್ದಾರೆ. ಸಾವಿರಾರು ಸೇನಾ ಮತ್ತು ಅರೆಸೇನಾ ಪಡೆ ಸಿಬ್ಬಂದಿಯನ್ನು ರಾಜ್ಯಾದ್ಯಂತ ನಿಯೋಜಿಸಿದ ಬಳಿಕ ಹಿಂಸಾಚಾರವು ಸ್ವಲ್ಪಮಟ್ಟಿಗೆ ನಿಯಂತ್ರಣಕ್ಕೆ ಬಂದಿದೆ.

ಇಂಫಾಲ್‌ ಕಣಿವೆಯಲ್ಲಿ ವಾಸಿಸುತ್ತಿರುವ ಮೈತೇಯಿ ಸಮುದಾಯವು ತಮಗೆ ಎಸ್‌ಟಿ ಮೀಸಲಾತಿ ನೀಡುವಂತೆ ಸರ್ಕಾರಕ್ಕೆ ಒತ್ತಡ ತಂದಿದೆ. ಆದರೆ, ಈ ಮೈತೇಯಿ ಸಮುದಾಯದವರ ಮೀಸಲಾತಿ ಬೇಡಿಕೆಯನ್ನು ಗುಡ್ಡಗಾಡು ಪ್ರದೇಶದಲ್ಲಿ ವಾಸಿಸುತ್ತಿರುವ ನಾಗಾ ಮತ್ತು ಕುಕಿ ಬುಡಕಟ್ಟು ಸಮುದಾಯಗಳು ವಿರೋಧಿಸಿವೆ.

ಕಣಿವೆ ಹಾಗೂ ಗುಡ್ಡಗಾಡು ಜನರ ನಡುವೆ ಹಿಂಸಾಚಾರ: ಮೈತೇಯಿ ಜನರಿಗೆ ಪರಿಶಿಷ್ಟ ಪಂಗಡದ ಸ್ಥಾನ ನೀಡಲು ಸರ್ಕಾರ ಒಲವು ತೋರಿರುವುದನ್ನು ಖಂಡಿಸಿ ಕುಕಿ ಮತ್ತು ನಾಗಾ ಬುಡಕಟ್ಟು ಜನರು ಇಂಫಾಲ್‌ನಲ್ಲಿ ಪ್ರತಿಭಟನಾ ಮೆರವಣಿಗೆಯನ್ನು ಆಯೋಜಿಸಿದ್ದರು. ಈ ಮೆರವಣಿಗೆ ವೇಳೆ ಕಣಿವೆ ಜನರು ಮತ್ತು ಗುಡ್ಡಗಾಡು ಜನರ ನಡುವೆ ಹಿಂಸಾಚಾರ ನಡೆದಿತ್ತು. ಹಿಂಸಾಚಾರದ ವೇಳೆ 60 ಮಂದಿ ಸಾವನ್ನಪ್ಪಿದ್ದರು ಎಂದು ಅಧಿಕಾರಿಗಳು ತಿಳಿಸಿದ್ದರು.

ಇದನ್ನೂ ಓದಿ: ಮಣಿಪುರದಲ್ಲಿ ಹಿಂಸಾಚಾರ: ಅಸ್ಸೋಂ ರೈಫಲ್ಸ್ ನಿಂದ 'ಆಪರೇಷನ್ ಕೊಹಿಮಾ ಕಾಲಿಂಗ್'

Last Updated : May 14, 2023, 7:41 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.