ಅಸ್ಸೋಂ : ಬಟಾದ್ರವ ಪೊಲೀಸ್ ಠಾಣೆಯನ್ನು ಸುಟ್ಟ ಪ್ರಕರಣದಲ್ಲಿ ಜಿಹಾದಿ ಭಾಗಿಯಾಗಿದ್ದಾರೆ ಎಂದು ಅಸ್ಸೋಂ ಪೊಲೀಸರು ಶಂಕಿಸಿದ್ದಾರೆ. ಪ್ರಕರಣದ ತನಿಖೆಗಾಗಿ ಎಸ್‌ಐಟಿ ರಚಿಸಿದ್ದು, ಇಂದು ಬೆಳಗ್ಗೆ ವಿಶೇಷ ಡಿಜಿಪಿ ಜಿ.ಪಿ.ಶಿಂಗ್ ಬಟದ್ರವ ಪೊಲೀಸ್ ಠಾಣೆಗೆ ಭೇಟಿ ನೀಡಿದ್ದಾರೆ.
ಠಾಣೆ ಸುಟ್ಟ ಪ್ರಕರಣದ ಬಗ್ಗೆ ನಾಗಾವ್ನ ಎಸ್ಪಿ ಮತ್ತು ಪೊಲೀಸ್ ಅಧಿಕಾರಿಯೊಂದಿಗೆ ಡಿಜಿಪಿ ಜಿ.ಪಿ.ಶಿಂಗ್ ಚರ್ಚಿಸಿದ್ದಾರೆ. ಘಟನೆಯಲ್ಲಿ ಭಾಗಿಯಾಗಿದ್ದ 20 ಮಂದಿಯನ್ನು ಈಗಾಗಲೇ ಬಂಧಿಸಲಾಗಿದೆ.
ಲಾಕಪ್ ಡೆತ್ ಆರೋಪದ ಮೇಲೆ ಉದ್ವಿಗ್ನಗೊಂಡ ಜನರು ಪೊಲೀಸ್ ಠಾಣೆಗೆ ಬೆಂಕಿ ಹಚ್ಚಿದ್ದರು. ಈ ವೇಳೆ ನಡೆದ ಗಲಾಟೆಯಲ್ಲಿ ಇಬ್ಬರು ಪೊಲೀಸರು ಸೇರಿದಂತೆ ಹಲವರಿಗೆ ಗಾಯಗಳಾಗಿವೆ.
ಇದನ್ನೂ ಓದಿ: ಲಾಕಪ್ ಡೆತ್ ಆರೋಪಕ್ಕೆ ಹೊತ್ತಿ ಉರಿದ ಪೊಲೀಸ್ ಠಾಣೆ..ಅಸ್ಸೋಂನ ನಾಗಾಂವ್ನಲ್ಲಿ ಉದ್ವಿಗ್ನ ಸ್ಥಿತಿ