ETV Bharat / bharat

ಅಸ್ಸೋಂನಲ್ಲಿಂದು ಅಂತಿಮ​ ಹಣಾಹಣಿ: 337 ಅಭ್ಯರ್ಥಿಗಳ ಭವಿಷ್ಯ ನಿರ್ಧಾರ - ಅಸ್ಸೋಂ ವಿಧಾನಸಭೆ ಚುನಾವಣೆ 2021

ದೇಶದ ಈಶಾನ್ಯ ರಾಜ್ಯವಾದ ಅಸ್ಸೋಂನ 39,07,963 ಮಹಿಳೆಯರು ಮತ್ತು 139 ಮಂಗಳಮುಖಿಯರು ಸೇರಿದಂತೆ ಒಟ್ಟು 79,19,641 ಮತದಾರರು ರಾಜ್ಯಾದ್ಯಂತ 11 ಜಿಲ್ಲೆಗಳಲ್ಲಿ 40 ಕ್ಷೇತ್ರಗಳ 11,401 ಮತಗಟ್ಟೆಗಳಲ್ಲಿ ತಮ್ಮ ಹಕ್ಕು ಚಲಾಯಿಸಲಿದ್ದಾರೆ. 31 ರಾಷ್ಟ್ರೀಯ ಮತ್ತು ರಾಜ್ಯ ರಾಜಕೀಯ ಪಕ್ಷಗಳ 337 ಅಭ್ಯರ್ಥಿಗಳ ಭವಿಷ್ಯವನ್ನು ಮತದಾರರು ಇಂದು ನಿರ್ಧರಿಸಲಿದ್ದಾರೆ.

Assam Phase
Assam Phase
author img

By

Published : Apr 6, 2021, 6:28 AM IST

ಹೈದರಾಬಾದ್: ಈಗಾಗಲೇ ಎರಡು ಸುತ್ತುಗಳ ಮತದಾನ ಕಂಡಿರುವ ಅಸ್ಸೋಂ ವಿಧಾನಸಭೆ ಅಂತಿಮ ಹಂತದ ಚುನಾವಣೆಗೆ ಸಿದ್ಧಗೊಂಡಿದೆ.

Assam Phase III Polls
ಪ್ರಮುಖ ಪಕ್ಷಗಳಲ್ಲಿ ಕಣದಲ್ಲಿರುವ ಮಹಿಳಾ ಅಭ್ಯರ್ಥಿಗಳ ವಿವರ
Assam Phase III Polls
ಅಪರಾಧ ಹಿನ್ನೆಲೆಯ ಪ್ರಮುಖ ಅಭ್ಯರ್ಥಿಗಳು..

ಮತದಾರರ ಮಾಹಿತಿ:

39,07,963 ಮಹಿಳೆಯರು ಮತ್ತು 139 ಮಂಗಳಮುಖಿ ಸೇರಿದಂತೆ ಒಟ್ಟು 79,19,641 ಮತದಾರರು ರಾಜ್ಯಾದ್ಯಂತ 11 ಜಿಲ್ಲೆಗಳಲ್ಲಿ 40 ಕ್ಷೇತ್ರಗಳ 11,401 ಮತಗಟ್ಟೆಗಳಲ್ಲಿ ತಮ್ಮ ಹಕ್ಕು ಚಲಾಯಿಸಲಿದ್ದಾರೆ. 31 ರಾಷ್ಟ್ರೀಯ ಮತ್ತು ರಾಜ್ಯ ರಾಜಕೀಯ ಪಕ್ಷಗಳ 337 ಅಭ್ಯರ್ಥಿಗಳ ಭವಿಷ್ಯವನ್ನು ಮತದಾರರು ಮಂಗಳವಾರ ನಿರ್ಧರಿಸಲಿದ್ದಾರೆ.

Assam Phase III Polls
ಅಭ್ಯರ್ಥಿಗಳ ಅಪರಾಧ ಹಿನ್ನೆಲೆಯ ಶೇಕಡಾವಾರು ಮಾಹಿತಿ

ಕಣದಲ್ಲಿರುವ ಅಭ್ಯರ್ಥಿಗಳ ಮಾಹಿತಿ:

ಈ ವರ್ಷದ ವಿಧಾನಸಭಾ ಚುನಾವಣೆಯಲ್ಲಿ 337 ಅಭ್ಯರ್ಥಿಗಳಲ್ಲಿ 25 ಮಹಿಳೆಯರು ಮತ್ತು 312 ಪುರುಷ ಅಭ್ಯರ್ಥಿಗಳು ತಮ್ಮ ಅದೃಷ್ಟ ಪರೀಕ್ಷೆಗೆ ಇಳಿದಿದ್ದಾರೆ. 40 ವಿಧಾನಸಭಾ ಕ್ಷೇತ್ರಗಳಲ್ಲಿ 54 ಗುವಾಹಟಿ ಪಶ್ಚಿಮ ಕ್ಷೇತ್ರದಲ್ಲಿ ಗರಿಷ್ಠ ಸಂಖ್ಯೆಯ ಅಭ್ಯರ್ಥಿಗಳಿದ್ದಾರೆ (15), 48-ಬೊಕೊ ಎಸ್‌ಸಿ ಕನಿಷ್ಠ ಸಂಖ್ಯೆಯ ಅಭ್ಯರ್ಥಿಗಳನ್ನು ಹೊಂದಿದೆ (3).

Assam Phase III Polls
ಅಖಾಡದಲ್ಲಿ ಕೋಟಿ ಕುಳಗಳು

ಕ್ರಿಮಿನಲ್‌ ಹಿನ್ನೆಲೆಯವರೂ ಕಣದಲ್ಲಿ..

ಒಟ್ಟು ಅಭ್ಯರ್ಥಿಗಳಲ್ಲಿ 60 (ಶೇ 18ರಷ್ಟು) ಅಭ್ಯರ್ಥಿಗಳು ಕ್ರಿಮಿನಲ್ ಪ್ರಕರಣಗಳನ್ನು ಘೋಷಿಸಿಕೊಂಡಿದ್ದಾರೆ. 45 (13ರಷ್ಟು) ಜನರು ತಮ್ಮ ವಿರುದ್ಧ ಗಂಭೀರ ಕ್ರಿಮಿನಲ್ ಪ್ರಕರಣಗಳನ್ನು ಘೋಷಿಸಿದ್ದಾರೆ. ಪ್ರಮುಖ ರಾಜಕೀಯ ಪಕ್ಷಗಳಲ್ಲಿ ಐಎನ್‌ಸಿಯ 24 ಅಭ್ಯರ್ಥಿಗಳಲ್ಲಿ 14 (ಶೇ 58ರಷ್ಟು) ಕ್ರಿಮಿನಲ್ ಪ್ರಕರಣಗಳನ್ನು ಘೋಷಿಸಿದರೆ, 24ರಲ್ಲಿ 13 (54ರಷ್ಟು) ಜನರು ತಮ್ಮ ವಿರುದ್ಧ ಗಂಭೀರ ಕ್ರಿಮಿನಲ್ ಪ್ರಕರಣಗಳಿವೆ ಎಂದು ಒಪ್ಪಿಕೊಂಡಿದ್ದಾರೆ.

Assam Phase III Polls
ಘಟಾನುಘಟಿಗಳು..

ಅಸ್ಸೋಂನಲ್ಲಿ ವಿಧಾನಸಭಾ ಚುನಾವಣೆಯನ್ನು ಮಾರ್ಚ್ 27, ಏಪ್ರಿಲ್ 1 ಮತ್ತು ಏಪ್ರಿಲ್ 6ರಂದು ಮೂರು ಹಂತಗಳಲ್ಲಿ ನಡೆಸಲಾಗಿದೆ. 47 ವಿಧಾನಸಭಾ ಕ್ಷೇತ್ರಗಳಲ್ಲಿ ಸ್ಪರ್ಧಿಸುತ್ತಿರುವ ಒಟ್ಟು 264 ಅಭ್ಯರ್ಥಿಗಳು ಮಾರ್ಚ್ 27ರಂದು ಮೊದಲ ಹಂತದಲ್ಲಿ ಮತ ಪಡೆದಿದ್ದಾರೆ. 39 ಕ್ಷೇತ್ರಗಳಿಂದ ಸ್ಪರ್ಧಿಸಿದ್ದ 345 ಅಭ್ಯರ್ಥಿಗಳ ಭವಿಷ್ಯ ಏಪ್ರಿಲ್ 1ರಂದು ಎರಡನೇ ಹಂತದಲ್ಲಿ ಮತಪೆಟ್ಟಿಗೆಯಲ್ಲಿ ಭದ್ರವಾಗಿದೆ. 40 ಕ್ಷೇತ್ರಗಳಲ್ಲಿ 337 ಅಭ್ಯರ್ಥಿಗಳು ತಮ್ಮ ಅದೃಷ್ಟವನ್ನು ಮೂರನೇ ಹಂತದ ಮತದಾನದಲ್ಲಿ ಪರೀಕ್ಷಿಸಿಕೊಳ್ಳಲಿದ್ದಾರೆ.

Assam Phase III Polls
ಅಪರಾಧ ಹಿನ್ನೆಲೆಯ ಪ್ರಮುಖ ಐವರು ಅಭ್ಯರ್ಥಿಗಳು

ಚುನಾವಣೆಯಲ್ಲಿ ನೇರ ಸಂಪರ್ಕಗಳನ್ನು ತಪ್ಪಿಸಲು ಮತ್ತು ಕೋವಿಡ್ ಸಾಂಕ್ರಾಮಿಕ ರೋಗದಿಂದಾಗಿ ಸಾಮಾಜಿಕ ಅಂತರ ಕಾಪಾಡಿಕೊಳ್ಳಲು ಚುನಾವಣಾ ಆಯೋಗವು ಎಲ್ಲಾ ತಡೆಗಟ್ಟುವ ಕ್ರಮಗಳನ್ನು ತೆಗೆದುಕೊಳ್ಳುತ್ತಿದೆ.

Assam Phase III Polls
ಅಸ್ಸೋಂ ಚುನಾವಣೆ

ಪ್ರತಿ ಬೂತ್‌ಗೆ ಮತದಾರರ ಸಂಖ್ಯೆಯನ್ನೂ ಗರಿಷ್ಠ 1,000ಕ್ಕೆ ಇಳಿಸಲಾಗಿದೆ. ಇದರ ಪರಿಣಾಮವಾಗಿ ಮತದಾನ ಕೇಂದ್ರಗಳ ಸಂಖ್ಯೆಯನ್ನು 2016ರಲ್ಲಿ 24,890 ರಿಂದ ಶೇ 34.71ರಷ್ಟು ಹೆಚ್ಚಿಸಿ 33,530ಕ್ಕೆ ತಲುಪಿಸಲಾಗಿದೆ.

ಇದೇ ಮೊದಲನೇ ಬಾರಿಗೆ ಚುನಾವಣಾ ಆಯೋಗವು ದಿವ್ಯಾಂಗರು, ಕೋವಿಡ್ -19 ಸೋಂಕಿತರು ಮತ್ತು 80 ವರ್ಷಕ್ಕಿಂತ ಮೇಲ್ಪಟ್ಟವರಿಗೆ ಅಂಚೆ ಮತಪತ್ರಗಳ ಮೂಲಕ ಮತದಾನ ಮಾಡಲು ವ್ಯವಸ್ಥೆ ಮಾಡಿದೆ. ಮತದಾನ ಪ್ರಾರಂಭವಾಗುವ ಎರಡು ವಾರಗಳ ಮೊದಲು ಅಂಚೆ ಮತಪತ್ರಗಳನ್ನು ನಡೆಸಲಾಯಿತು.

Assam Phase III Polls
ಅಸ್ಸೋಂ ಚುನಾವಣೆ

126 ವಿಧಾನಸಭಾ ಕ್ಷೇತ್ರಗಳ ವಿಧಾನಸಭಾ ಚುನಾವಣೆಯ ಫಲಿತಾಂಶ ಮೇ 2ರಂದು ಹೊರಬೀಳಲಿದೆ.

Assam Phase III Polls
ಕಣದಲ್ಲಿರುವ ಪ್ರಮುಖರು

ETV Bharat Logo

Copyright © 2025 Ushodaya Enterprises Pvt. Ltd., All Rights Reserved.