ETV Bharat / bharat

ಬಿಡಲಾಗದ ಭುವಿಯ ಮಾಯೆ; ಇದು ಅಮ್ಮನಿಂದ ಬೇರ್ಪಟ್ಟ ಚಿರತೆ ಮರಿಗಳ ಕಥೆ - ಅಸ್ಸೋಂನಲ್ಲಿ ಅಮ್ಮನಿಂದ ಬೇರ್ಪಟ್ಟ ಚಿರತೆ ಮರಿಗಳ ಕಥೆ

ವನ್ಯಜೀವಿ ಪುನರ್ವಸತಿ ಮತ್ತು ಸಂರಕ್ಷಣಾ ಕೇಂದ್ರದಲ್ಲಿ ಮರಿಗಳಿಗೆ ಆಸರೆಯೇನೋ ನೀಡಲಾಗಿದೆ. ಆರೋಗ್ಯವಾಗಿರುವ ಈ ನಾಲ್ಕು ಚಿರತೆ ಮರಿಗಳು ಅಮ್ಮನ ಮಡಿಲ ಬಿಸಿ ಅಪ್ಪುಗೆಯಿಂದ ವಂಚಿತವಾಗಿವೆ

Assam orphan leopard cubs looking for permanent home
ಬಿಡಲಾಗದ ಭುವಿಯ ಮಾಯೆ ‘ತಾಯಿ’
author img

By

Published : Feb 13, 2021, 6:21 AM IST

ಜೋರ್ಹತ್ (ಅಸ್ಸೋಂ): ಭೂಮಿಯ ಮೇಲೆ ಪ್ರತಿ ಜೀವಿಯ ಎದೆ ಮಿಡಿತವೇ ಅಮ್ಮ.. ತಾಯಿಯಿಲ್ಲದ ತಬ್ಬಲಿಯ ಪರಿಪಾಟಲು ಆ ದೇವರಿಗೆ ಪ್ರೀತಿ ಎಂಬಂತಿರುತ್ತದೆ. ಮಾನವ ಮಾತ್ರವಲ್ಲ ಪ್ರತಿ ಜೀವಿಯೂ ಕಣ್ಣು ಬಿಟ್ಟಾಗ ಅಮ್ಮನೇ ಆಸರೆ.

ಇಂದು ನಾವು ಅಂತಹ ತಬ್ಬಲಿ ಜೀವಗಳ ಬಗ್ಗೆ ಮಾತನಾಡುತ್ತಿದ್ದೇವೆ. ಈ ನಾಲ್ಕು ಚಿರತೆ ಮರಿಗಳೂ ತಾಯಿ ಇಲ್ಲದ ತಬ್ಬಲಿಗಳು. ಆದರೆ, ಈ ಪುಟ್ಟ ಕಂದಮ್ಮಗಳಿಗೆ ಆಸರೆಯಾಗಿದ್ದು ಸಿಡಬ್ಲ್ಯುಆರ್‌ಸಿ. ಇವುಗಳನ್ನು ಸ್ಥಳೀಯರು 2014-15ರಲ್ಲಿ ರಕ್ಷಿಸಿ ವನ್ಯಜೀವಿ ಪುನರ್ವಸತಿ ಮತ್ತು ಸಂರಕ್ಷಣಾ ಕೇಂದ್ರಕ್ಕೆ ಹಸ್ತಾಂತರಿಸಿದರು.

ಬಿಡಲಾಗದ ಭುವಿಯ ಮಾಯೆ ‘ತಾಯಿ’

ಈ ನಾಲ್ಕು ಚಿರತೆಗಳನ್ನು ಅಸ್ಸೋಂನ ಜೋರ್ಹತ್ ಜಿಲ್ಲೆಯ ಮರಿಯಾನಿ ಬಳಿಯ ಅರಣ್ಯದಿಂದ ಸ್ಥಳೀಯರು ರಕ್ಷಿಸಿ ಸಿಡಬ್ಲ್ಯುಆರ್‌ಸಿಗೆ ಹಸ್ತಾಂತರಿಸಿದರು. ಅಂದಿನಿಂದ ಈ ಪುಟಾಣಿ ಚಿರತೆ ಮರಿಗಳು ಸಿಡಬ್ಲ್ಯುಆರ್‌ಸಿಯ ಆರೈಕೆಯಲ್ಲಿವೆ.

ವನ್ಯಜೀವಿ ಪುನರ್ವಸತಿ ಮತ್ತು ಸಂರಕ್ಷಣಾ ಕೇಂದ್ರದಲ್ಲಿ ಮರಿಗಳಿಗೆ ಆಸರೆಯೇನೋ ನೀಡಲಾಗಿದೆ. ಆರೋಗ್ಯವಾಗಿರುವ ಈ ನಾಲ್ಕು ಚಿರತೆ ಮರಿಗಳು ಅಮ್ಮನ ಮಡಿಲ ಬಿಸಿ ಅಪ್ಪುಗೆಯಿಂದ ವಂಚಿತವಾಗಿವೆ. ಬೆಳೆದು ದೊಡ್ಡವಾದ ಚಿರತೆ ಮರಿಗಳು ತಾವಾಗಿಯೇ ಬೇಟೆಯಾಡಲು ಕಲಿಯುವುದು ಕಷ್ಟ ಸಾಧ್ಯ. ತಮ್ಮ ಮೂಲ ಬದುಕುಳಿಯುವ ಕೌಶಲ್ಯಗಳು ಈ ಮರಿಗಳಿಗೆ ಅಭ್ಯಾಸವಾಗಿಲ್ಲ. ಆದ್ದರಿಂದ ಅವುಗಳನ್ನು ಕಾಡಿಗೆ ಮತ್ತೆ ಮರಳಿಸಲಾಗ್ತಿಲ್ಲ ಎಂದು ಸಿಡಬ್ಲ್ಯುಆರ್‌ಸಿ ತಿಳಿಸಿದೆ.

ಚಿರತೆಗಳನ್ನು ಈಗ ಕಾಡಿಗೆ ಪುನರ್ವಸತಿ ಮಾಡಲು ಸಾಧ್ಯವಾಗದ ಕಾರಣ, ಸಿಡಬ್ಲ್ಯುಆರ್‌ಸಿ ಈ ಮರಿಗಳನ್ನು ಪ್ರಾಣಿ ಸಂಗ್ರಹಾಲಯಕ್ಕೆ ಕಳುಹಿಸಲು ವ್ಯವಸ್ಥೆ ಮಾಡಿದೆ.

ತಾಯಿಯಿಂದ ಬೇರ್ಪಟ್ಟು ಆಸರೆಯನ್ನೇನೋ ಪಡೆದ ಮರಿಗಳು, ಈಗ ಮೂಲ ಕೌಶಲ್ಯಗಳ ಕಲಿಕೆಯಿಲ್ಲದೇ ಜೀವನ ಸಾಗಿಸಬೇಕಿದೆ. ಅದಿಕ್ಕೆ ನಮ್ಮ ಹಿರಿಯರು ಹೇಳಿದ್ದು, ಮನೆಯೇ ಮೊದಲ ಪಾಠ ಶಾಲೆ ತಾಯಿ ತಾನೇ ಮೊದಲ ಗುರುವೆಂದು.. ಈಗ ಆ ಮಾತು ಮತ್ತೊಮ್ಮೆ ನಿಜವೆನಿಸುತ್ತಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.