ETV Bharat / bharat

ಅಸ್ಸೋಂನಲ್ಲಿ ಭೀಕರ ಪ್ರವಾಹ: ಅಂದಾಜು 4.89 ಲಕ್ಷ ಜನರು ತತ್ತರ, ಇಬ್ಬರು ಸಾವು - ಅಸ್ಸಾಂ ರಾಜ್ಯ ವಿಪತ್ತು ನಿರ್ವಹಣಾ ಪ್ರಾಧಿಕಾರ

Assam Floods Updates: ಅಸ್ಸೋಂನಲ್ಲಿ ಪ್ರವಾಹ ಪರಿಸ್ಥಿತಿ ಇನ್ನೂ ಭೀಕರವಾಗಿದೆ. 16 ಜಿಲ್ಲೆಗಳಲ್ಲಿ ಸುಮಾರು 4.89 ಲಕ್ಷ ಜನರು ಸಂತ್ರಸ್ತರಾಗಿದ್ದಾರೆ ಎಂದು ವರದಿಯಾಗಿದೆ.

Assam flood
ಅಸ್ಸಾಂನಲ್ಲಿ ಭೀಕರ ಪ್ರವಾಹ
author img

By

Published : Jun 24, 2023, 11:32 AM IST

ಗುವಾಹಟಿ (ಅಸ್ಸೋಂ ): ರಾಜ್ಯದಲ್ಲಿ ಪ್ರವಾಹ ಪರಿಸ್ಥಿತಿ ಇನ್ನೂ ಭೀಕರವಾಗಿದೆ. 16 ಜಿಲ್ಲೆಗಳಲ್ಲಿ ಸುಮಾರು 4.89 ಲಕ್ಷ ಜನರು ಪ್ರವಾಹಕ್ಕೆ ಸಿಲುಕಿದ್ದಾರೆ. ಕಳೆದ 24 ಗಂಟೆಗಳಲ್ಲಿ ನಲ್ಬರಿ ಜಿಲ್ಲೆಯಲ್ಲಿ ಪ್ರವಾಹದ ನೀರಿನಲ್ಲಿ ಮುಳುಗಿ ಒಬ್ಬರು ಸಾವನ್ನಪ್ಪಿದ್ದಾರೆ. ಅಸ್ಸೋಂ ಪ್ರವಾಹದಲ್ಲಿ ಒಟ್ಟು ಸಾವಿನ ಸಂಖ್ಯೆ 2ಕ್ಕೇರಿದೆ.

ಅಸ್ಸೋಂ ರಾಜ್ಯ ವಿಪತ್ತು ನಿರ್ವಹಣಾ ಪ್ರಾಧಿಕಾರದ (ಎಎಸ್‌ಡಿಎಂಎ) ವರದಿಯ ಪ್ರಕಾರ "ಬಜಾಲಿ ಜಿಲ್ಲೆಯಲ್ಲಿ ಸುಮಾರು 2.67 ಲಕ್ಷ ಜನರು ಬಾಧಿತರಾಗಿದ್ದಾರೆ. ನಲ್ಬರಿಯಲ್ಲಿ 80,061 ಜನರು, ಬಾರ್ಪೇಟಾದಲ್ಲಿ 73,233 ಜನರು, ಲಖಿಂಪುರದಲ್ಲಿ 22,577 ಜನರು, ದರ್ಂಗ್‌ನಲ್ಲಿ 14,5813 ಜನರು, 14,5814180, ತಮುಲ್ಪುರದಲ್ಲಿ ಜನರು, ಬಕ್ಸಾದಲ್ಲಿ 7,282 ಜನರು, ಗೋಲ್ಪಾರಾ ಜಿಲ್ಲೆಯಲ್ಲಿ 4,750 ಜನರು ಸಂತ್ರಸ್ತರಾಗಿದ್ದಾರೆ. ಪ್ರವಾಹದ ನೀರಲ್ಲಿ 10782.80 ಹೆಕ್ಟೇರ್ ಬೆಳೆ ನಾಶವಾಗಿದೆ.

ರಾಜ್ಯದ ಬಜಾಲಿ, ಬಕ್ಸಾ, ಬಾರ್ಪೇಟಾ, ಬಿಸ್ವನಾಥ್, ಬೊಂಗೈಗಾಂವ್, ಚಿರಾಂಗ್, ದರ್ರಾಂಗ್, ಧೇಮಾಜಿ, ಧುಬ್ರಿ, ದಿಬ್ರುಗಢ, ಗೋಲ್‌ಪಾರಾ, ಗೋಲಾಘಾಟ್, ಕಾಮ್ರೂಪ್, ಕೊಕ್ರಜಾರ್, ಲಖಿಂಪುರ, ನಾಗಾಂವ್, ನಲ್ಬರಿ, ತಾಮುಲ್‌ಪುರ ಜಿಲ್ಲೆ 54 ಕಂದಾಯ ವೃತ್ತಗಳ ವ್ಯಾಪ್ತಿಯ 1,538 ಗ್ರಾಮಗಳು ಬಾಧಿತವಾಗಿವೆ.

ಅಪಾಯದ ಮಟ್ಟ ಮೀರಿ ಹರಿಯುತ್ತಿರುವ ಬ್ರಹ್ಮಪುತ್ರ: ಧಾರಾಕಾರ ಮಳೆಯ ಬಳಿಕ ಬ್ರಹ್ಮಪುತ್ರ ನದಿಯ ನೀರಿನ ಮಟ್ಟ ಜೋರ್ಹತ್ ಜಿಲ್ಲೆಯ ನೇಮತಿಘಾಟ್‌ನಲ್ಲಿ ಮತ್ತು ಧುಬ್ರಿ, ಎನ್‌ಎಚ್ ರೋಡ್ ಕ್ರಾಸಿಂಗ್‌ನಲ್ಲಿ ಮಾನಸ್ ನದಿ, ಎನ್‌ಟಿ ರಸ್ತೆ ಕ್ರಾಸಿಂಗ್‌ನಲ್ಲಿ ಪಗ್ಲಾಡಿಯಾ ನದಿ, ಎನ್‌ಎಚ್ ರಸ್ತೆ ಕ್ರಾಸಿಂಗ್‌ನಲ್ಲಿ ಪುತಿಮರಿ ನದಿಯಲ್ಲಿ ಅಪಾಯದ ಮಟ್ಟ ಮೀರಿ ಹರಿಯುತ್ತಿದೆ.

ಪರಿಹಾರ ವಿತರಣಾ ಕೇಂದ್ರ ಸ್ಥಾಪನೆ: ಜಿಲ್ಲಾಡಳಿತ 140 ಪರಿಹಾರ ಶಿಬಿರಗಳನ್ನು ಮತ್ತು ಪ್ರವಾಹ ಪೀಡಿತ ಜಿಲ್ಲೆಗಳಲ್ಲಿ 75 ಪರಿಹಾರ ವಿತರಣಾ ಕೇಂದ್ರಗಳನ್ನು ಸ್ಥಾಪಿಸಿದೆ. 35,142 ಜನರು ಈ ಪರಿಹಾರ ಶಿಬಿರಗಳಲ್ಲಿ ಆಶ್ರಯ ಪಡೆದಿದ್ದಾರೆ. ಮತ್ತೊಂದೆಡೆ ಇನ್ನೂ ಅನೇಕರು ರಸ್ತೆಗಳು, ಎತ್ತರದ ಪ್ರದೇಶಗಳು ಮತ್ತು ಒಡ್ಡುಗಳಲ್ಲಿ ಆಶ್ರಯ ಪಡೆದಿದ್ದಾರೆ.

ಎಎಸ್‌ಡಿಎಂಎ ವರದಿಯ ಪ್ರಕಾರ 4,27,474 ಸಾಕು ಪ್ರಾಣಿಗಳು ಸಹ ಪ್ರವಾಹದಿಂದ ಪ್ರಭಾವಿತವಾಗಿವೆ ಎಂದು ಹೇಳಿದೆ. ಕಳೆದ 24 ಗಂಟೆಗಳಲ್ಲಿ, ಪ್ರವಾಹದ ನೀರಿನಿಂದ ಒಂದು ಒಡ್ಡು ಒಡೆದು 14 ಇತರ ಒಡ್ಡುಗಳು, 213 ರಸ್ತೆಗಳು, 14 ಸೇತುವೆಗಳು, ಹಲವಾರು ಅಗ್ರಿ ಬಂಡ್‌ಗಳು, ಶಾಲಾ ಕಟ್ಟಡಗಳು, ನೀರಾವರಿ ಕಾಲುವೆಗಳು ಮತ್ತು ಮೋರಿಗಳನ್ನು ಹಾನಿಗೊಳಿಸಿದೆ ಎಂದು ವರದಿಯಾಗಿದೆ.

  • #WATCH | The flood situation in Assam is still grim as nearly 4.89 lakh people in 19 districts have been affected. In the last 24 hours, one person died in the Nalbari district after drowning in flood waters. Total death toll of Assam floods stands at 2 pic.twitter.com/DPRZsR3Gv2

    — ANI (@ANI) June 24, 2023 " class="align-text-top noRightClick twitterSection" data=" ">

368.30 ಹೆಕ್ಟೇರ್‌ ಬೆಳೆ ನಾಶ: ಬಜಾಲಿ ಜಿಲ್ಲೆಯಲ್ಲಿ ಪ್ರವಾಹ ಪರಿಸ್ಥಿತಿ ಇನ್ನೂ ಗಂಭೀರವಾಗಿದೆ, 191 ಹಳ್ಳಿಗಳ 2,67,253 ಜನರು ತೊಂದರೆಗೀಡಾಗಿದ್ದಾರೆ. ಎಎಸ್‌ಡಿಎಂಎ ಪ್ರಕಾರ, ಜಿಲ್ಲೆಯ ಬಜಾಲಿ ಕಂದಾಯ ವೃತ್ತದಲ್ಲಿ 1,76,678 ಮತ್ತು ಸರುಪೇಟ ಕಂದಾಯ ವೃತ್ತದಲ್ಲಿ 90,575 ಜನರು ಪ್ರವಾಹಕ್ಕೆ ಸಿಲುಕಿದ್ದಾರೆ. ಜಿಲ್ಲೆಯ 368.30 ಹೆಕ್ಟೇರ್‌ ಬೆಳೆ ಪ್ರದೇಶ ಪ್ರವಾಹಕ್ಕೆ ಸಿಲುಕಿ ಹಾನಿಗೊಳಗಾಗಿದೆ.

ಪಹುಮಾರಾ ನದಿಯ ಪ್ರವಾಹಕ್ಕೆ ಒಡ್ಡಿನ ಭಾಗ ಒಡೆದಿದ್ದು ಡೊಲೊಯಿ ಗಾಂವ್ ಶಾಂತಿಪುರ ಗ್ರಾಮದ ಸುಮಾರು 200 ಕುಟುಂಬಗಳು ತೊಂದರೆಗೀಡಾಗಿವೆ. ಗ್ರಾಮಸ್ಥರು ಈಗ ತಾತ್ಕಾಲಿಕ ಟೆಂಟ್‌ಗಳನ್ನು ನಿರ್ಮಿಸಿ ಒಡ್ಡು, ರಸ್ತೆಯಲ್ಲಿ ಆಶ್ರಯ ಪಡೆಯುತ್ತಿದ್ದಾರೆ. ಗ್ರಾಮದ 8-10 ಮನೆಗಳು ಪ್ರವಾಹಕ್ಕೆ ಕೊಚ್ಚಿ ಹೋಗಿವೆ ಎಂದು ಪ್ರವಾಹ ಪೀಡಿತ ಗ್ರಾಮಸ್ಥರಾದ ಕಮಲ್ ಬರ್ಮನ್ ಎಂಬುವವರು ಹೇಳಿದ್ದಾರೆ.

"ಬೆಳಗ್ಗೆ 3 ಗಂಟೆ ಸುಮಾರಿಗೆ ಪ್ರವಾಹದ ನೀರು ಒಡ್ಡು ಒಡೆದಿದ್ದು, ಆ ಸಮಯದಲ್ಲಿ ಎಲ್ಲ ಗ್ರಾಮಸ್ಥರು ಮಲಗಿದ್ದರು. ಆದ್ದರಿಂದ ಗ್ರಾಮಸ್ಥರಿಗೆ ತಮ್ಮ ವಸ್ತುಗಳನ್ನು ಹೊರತೆಗೆಯಲು ಸಾಧ್ಯವಾಗಲಿಲ್ಲ. ಈಗ ಜನರು ಸಮಸ್ಯೆ ಎದುರಿಸುತ್ತಿದ್ದಾರೆ. ಮಳೆ ಮುಂದುವರಿಯುತ್ತಿರುವುದರಿಂದ ಸಾಕಷ್ಟು ಸಮಸ್ಯೆಗಳು ಎದುರಾಗಿವೆ ಮತ್ತು ಆಹಾರದ ಬಿಕ್ಕಟ್ಟನ್ನು ಸಹ ಎದುರಿಸುತ್ತಿವೆ" ಎಂದು ಕಮಲ್ ಬರ್ಮನ್ ಹೇಳಿದ್ದಾರೆ.

ಇದನ್ನೂ ಓದಿ: Assam floods: ಭಾರಿ ಪ್ರವಾಹಕ್ಕೆ ಅಸ್ಸಾಂ ತತ್ತರ; ಅಪಾಯದ ಮಟ್ಟ ಮೀರಿ ಹರಿಯುತ್ತಿವೆ ನದಿಗಳು, ಜನರ ಸ್ಥಳಾಂತರ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.