ರುದ್ರಾಪುರ (ಉತ್ತರಾಖಂಡ): ವಿಧಾನಸಭೆ ಚುನಾವಣೆ ಪ್ರಚಾರದಲ್ಲಿ ಮಾತನಾಡುವ ಭರದಲ್ಲಿ "ತಮ್ಮ ತಂದೆಗೇ ರಾಹುಲ್ ಗಾಂಧಿ ಹುಟ್ಟಿದ್ದು ಅನ್ನೋದಕ್ಕೆ ಯಾರಾದ್ರೂ ಸಾಕ್ಷಿ ಕೇಳಿದ್ರಾ?" ಎಂದು ಅಸ್ಸೋಂ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ಅವರು ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.
ಉತ್ತರಾಖಂಡದ ರುದ್ರಾಪುರ ಜಿಲ್ಲೆಯ ಕಿಚ್ಚಾ ವಿಧಾನಸಭಾ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿ ರಾಜೇಶ್ ಶುಕ್ಲಾ ಪರ ಪ್ರಚಾರ ಮಾಡಲು ಬಂದಿದ್ದ ಸಿಎಂ ಹಿಮಂತ ಬಿಸ್ವಾ ಶರ್ಮಾ, "ಭಾರತೀಯ ಸೇನೆಯನ್ನು ನಂಬದ ರಾಹುಲ್ ಗಾಂಧಿ ಸರ್ಜಿಕಲ್ ವೈಮಾನಿಕ ದಾಳಿಯ ಪುರಾವೆ ಕೇಳುತ್ತಾರೆ. ಹಾಗಾದರೆ ಯಾರಾದ್ರು ಅವರ ಬಳಿ ತಮ್ಮ ತಂದೆಗೇ (ರಾಜೀವ್ ಗಾಂಧಿ) ರಾಹುಲ್ ಗಾಂಧಿ ಹುಟ್ಟಿದ್ದು ಅನ್ನೋದಕ್ಕೆ ಯಾರಾದ್ರೂ ಸಾಕ್ಷಿ ಕೇಳಿದ್ರಾ? ಎಂದು ಪ್ರಶ್ನಿಸಿದ್ದಾರೆ.
ಇದನ್ನೂ ಓದಿ: 'ಯುಪಿಯಲ್ಲಿ ಸಮ್ಮಿಶ್ರ ಸರ್ಕಾರ ರಚನೆ': ಮೊದಲ ಹಂತದ ಮತದಾನದ ಬಳಿಕ ಅಖಿಲೇಶ್ ಯಾದವ್ ಭವಿಷ್ಯ
ನಮ್ಮ ಸೈನಿಕರು ಪಾಕಿಸ್ತಾನದಲ್ಲಿ ದಾಳಿ ಮಾಡಿದ್ರು ಅಂದರೆ ಮಾಡಿದ್ರು ಅಷ್ಟೇ. ಅದರಲ್ಲಿ ಎರಡು ಮಾತಿಲ್ಲ. ಭಾರತೀಯ ಸೇನೆ ಬಳಿ ಸಾಕ್ಷಿ ಕೇಳುವ ಅಧಿಕಾರ ನಿಮಗೆ ಯಾರು ನೀಡಿದ್ದು? ಕಾಂಗ್ರೆಸ್ ತುಷ್ಟೀಕರಣದ ರಾಜಕಾರಣ ಮಾಡುತ್ತಿದೆ ಎಂದು ಅಸ್ಸೋಂ ಸಿಎಂ ಕಿಡಿ ಕಾರಿದರು.