ಹೈದರಾಬಾದ್: ಮಹತ್ವದ ಬೆಳವಣಿಗೆಯೊಂದರಲ್ಲಿ ವೈದ್ಯಕೀಯ ಕೌನ್ಸೆಲಿಂಗ್ ಸಮಿತಿ (ಎಂಸಿಸಿ) ಮೂರನೇ ಸುತ್ತಿನ ನೀಟ್ ಪಿಜಿ ವೈದ್ಯಕೀಯ ಕೌನ್ಸೆಲಿಂಗ್‌ಗೆ ಇದ್ದ ಅರ್ಹತಾ ಅಂಕಗಳು (ಕಟ್ ಆಫ್) ರದ್ದುಗೊಳಿಸುವುದಾಗಿ ಘೋಷಿಸಿದೆ. ಇದರಿಂದಾಗಿ ಪ್ರಸಕ್ತ ವರ್ಷ ನೀಟ್ ಪರೀಕ್ಷೆ ಬರೆಯುವ ಅಭ್ಯರ್ಥಿಗಳೆಲ್ಲರೂ ಕೌನ್ಸೆಲಿಂಗ್ ಪ್ರಕ್ರಿಯೆಯಲ್ಲಿ ಪಾಲ್ಗೊಳ್ಳಲು ಅರ್ಹತೆ ಪಡೆಯಲಿದ್ದಾರೆ.
ಕೇಂದ್ರದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ಈ ಕ್ರಮಕ್ಕೆ ಅನುಮೋದನೆ ನೀಡಿದ್ದು, ಕಟ್ ಆಫ್ ಅಂಕಗಳನ್ನು ಶೂನ್ಯಕ್ಕೆ ಇಳಿಸಿದ್ದರಿಂದ ಸ್ನಾತಕೋತ್ತರ ವೈದ್ಯಕೀಯ ಮತ್ತು ದಂತ ವೈದ್ಯಕೀಯ ಸೀಟುಗಳಿಗೆ ಸ್ಪರ್ಧಿಸಲು ಎಲ್ಲ ವಿದ್ಯಾರ್ಥಿಗಳಿಗೆ ಅವಕಾಶ ಸಿಗಲಿದೆ.
-
My two cents regarding this recent controversy of zero percentile eligibility for #NEETPG2023 counselling.
— Aviral Mathur (@draviralmathur) September 20, 2023 " class="align-text-top noRightClick twitterSection" data="
There’s always a sunny side. #MedTwitter #MedEd @MoHFW_INDIA @ANI @mansukhmandviya @OfficeOf_MM @DghsIndia @ianilradadiya @FordaIndia @DrPandeyRML @MamcRda pic.twitter.com/S4nHDGHHMp
">My two cents regarding this recent controversy of zero percentile eligibility for #NEETPG2023 counselling.
— Aviral Mathur (@draviralmathur) September 20, 2023
There’s always a sunny side. #MedTwitter #MedEd @MoHFW_INDIA @ANI @mansukhmandviya @OfficeOf_MM @DghsIndia @ianilradadiya @FordaIndia @DrPandeyRML @MamcRda pic.twitter.com/S4nHDGHHMpMy two cents regarding this recent controversy of zero percentile eligibility for #NEETPG2023 counselling.
— Aviral Mathur (@draviralmathur) September 20, 2023
There’s always a sunny side. #MedTwitter #MedEd @MoHFW_INDIA @ANI @mansukhmandviya @OfficeOf_MM @DghsIndia @ianilradadiya @FordaIndia @DrPandeyRML @MamcRda pic.twitter.com/S4nHDGHHMp
ಈ ಹಿಂದೆ, ನೀಟ್ ಪಿಜಿ ಕೌನ್ಸೆಲಿಂಗ್‌ನ ಅರ್ಹತಾ ಮಾನದಂಡವು ಸಾಮಾನ್ಯ ವರ್ಗಕ್ಕೆ ಒಟ್ಟು 800 ಅಂಕಗಳಲ್ಲಿ 291 ಮತ್ತು ಮೀಸಲಾತಿ ವರ್ಗದ ಅಭ್ಯರ್ಥಿಗಳಿಗೆ 257 ಅಂಕಗಳ ಕನಿಷ್ಠ ಕಟ್-ಆಫ್ ಅಂಕವನ್ನು ಕಡ್ಡಾಯಗೊಳಿಸಿತ್ತು. ಇದರಿಂದಾಗಿ ಇಷ್ಟು ಅಂಕ ಗಳಿಸಲು ವಿಫಲವಾದ ವಿದ್ಯಾರ್ಥಿಗಳು ಮೂರನೇ ಸುತ್ತಿನ ಕೌನ್ಸೆಲಿಂಗ್ನಲ್ಲಿ ಪಾಲ್ಗೊಳ್ಳಲು ಅವಕಾಶ ಇರಲಿಲ್ಲ. ಇದೀಗ ಎಲ್ಲರೂ ಕೌನ್ಸೆಲಿಂಗ್ನಲ್ಲಿ ಭಾಗಿಯಾಗಬಹುದಾಗಿದೆ.
ಅಂಕ ರದ್ದಿನಿಂದ ಲಾಭವೇನು?: ಅರ್ಹತಾ ಕನಿಷ್ಠ ಅಂಕ ರದ್ದಾದ್ದರಿಂದ ಮೂರನೇ ಸುತ್ತಿನ ಕೌನ್ಸೆಲಿಂಗ್‌ಗೆ ಎಲ್ಲ ವಿದ್ಯಾರ್ಥಿಗಳು ತೆರಳಲಿದ್ದು, 13,000 ಕ್ಕೂ ಹೆಚ್ಚು ಖಾಲಿ ಸೀಟುಗಳಿಗೆ ಪೈಪೋಟಿ ನಡೆಯಲಿದೆ. ಇದು ಅಭ್ಯರ್ಥಿಗಳು ಸ್ನಾತಕೋತ್ತರ ವೈದ್ಯಕೀಯ ಮತ್ತು ದಂತ ವೈದ್ಯಕೀಯ ಕೋರ್ಸ್‌ಗಳನ್ನು ಮಾಡುವ ಅವರ ಕನಸುಗಳನ್ನು ಸಾಕಾರ ಮಾಡಲಿದೆ.
-
I completely disagree with the bizarre circular released by @MoHFW_INDIA of removing cut off bar from#NEETPG. @PMOIndia - it is only going to promote corruption and high fee in pvt medical colleges.
— Dr. Rohan Krishnan (@DrRohanKrishna3) September 20, 2023 " class="align-text-top noRightClick twitterSection" data="
It is Shameful tht any medical body supported this step of zero percent merit.… pic.twitter.com/emv6crDBYw
">I completely disagree with the bizarre circular released by @MoHFW_INDIA of removing cut off bar from#NEETPG. @PMOIndia - it is only going to promote corruption and high fee in pvt medical colleges.
— Dr. Rohan Krishnan (@DrRohanKrishna3) September 20, 2023
It is Shameful tht any medical body supported this step of zero percent merit.… pic.twitter.com/emv6crDBYwI completely disagree with the bizarre circular released by @MoHFW_INDIA of removing cut off bar from#NEETPG. @PMOIndia - it is only going to promote corruption and high fee in pvt medical colleges.
— Dr. Rohan Krishnan (@DrRohanKrishna3) September 20, 2023
It is Shameful tht any medical body supported this step of zero percent merit.… pic.twitter.com/emv6crDBYw
ಈ ಬಗ್ಗೆ ವೈದ್ಯಕೀಯ ಕೌನ್ಸೆಲಿಂಗ್ ಸಮಿತಿಯು ಅಧಿಕೃತ ಸೂಚನೆ ಹೊರಡಿಸಿದ್ದು, NEET PG ಕೌನ್ಸೆಲಿಂಗ್ 2023 ಕ್ಕೆ ಅನ್ವಯವಾಗುವಂತೆ ಪಿಜಿ ಕೋರ್ಸ್‌ಗಳಿಗೆ (ವೈದ್ಯಕೀಯ/ದಂತ) ಅರ್ಹತಾ ಕಟ್ ಆಫ್ ಅಂಕಗಳನ್ನು ರದ್ದು ಮಾಡಲಾಗಿದೆ ಎಂದಿದೆ. ಆದರೆ, ಈ ನಿರ್ಧಾರಕ್ಕೆ ವೈದ್ಯಕೀಯ ಸಮುದಾಯದಿಂದ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ.
ಏನಿದು ಕಟ್ ಆಫ್ ಅಂಕ: ವೈದ್ಯಕೀಯ ಮತ್ತು ದಂತ ವೈದ್ಯಕೀಯ ಕೋರ್ಸ್‌ಗಳನ್ನು ಮಾಡುವ ಕನಸು ಇಟ್ಟುಕೊಂಡಿದ್ದ ವಿದ್ಯಾರ್ಥಿಗಳು ಬರೆಯುವ ನೀಟ್ ಪಿಜಿ ಪರೀಕ್ಷೆಯಲ್ಲಿ ಇಂತಿಷ್ಟು ಅಂಕಗಳನ್ನು ಕಡ್ಡಾಯವಾಗಿ ಪಡೆದುಕೊಳ್ಳಬೇಕೆಂಬ ನಿಯಮ. ನಿಗದಿಪಡಿಸಿದ ಅಂಕಗಳನ್ನು ಮುಟ್ಟುವಲ್ಲಿ ವಿದ್ಯಾರ್ಥಿ ವಿಫಲವಾದರೆ, ಅವರು ಮುಂದಿನ ಹಂತಕ್ಕೆ ಅನರ್ಹತೆ ಹೊಂದುತ್ತಿದ್ದರು. ಆ ಗೋಜಲು ಈಗ ತಪ್ಪಿದೆ.
ಕಟ್ ಆಫ್ ಅಂಕಗಳೇ ಅನರ್ಥ: ನೀಟ್ ಪರೀಕ್ಷೆಯನ್ನೇ ರದ್ದು ಮಾಡಬೇಕು ಎಂದು ಪಟ್ಟು ಹಿಡಿದಿರುವ ತಮಿಳುನಾಡು ಸರ್ಕಾರ, ಕಟ್ ಆಫ್ ಅಂಕಗಳನ್ನು ಶೂನ್ಯಕ್ಕೆ ಇಳಿಸಿದ್ದನ್ನು ಟೀಕಿಸಿದೆ. ಈ ಬಗ್ಗೆ ಮಾತನಾಡಿರುವ ಸಿಎಂ ಎಂಕೆ ಸ್ಟಾಲಿನ್ ರಾಷ್ಟ್ರೀಯ ಅರ್ಹತೆ ಮತ್ತು ಪ್ರವೇಶ ಪರೀಕ್ಷೆಯಲ್ಲಿನ ಎಲಿಜಿಬಲ್ ಅಂಕಗಳೇ ಅರ್ಥಹೀನ. ಇದರಿಂದ ಕೇವಲ ಕೋಚಿಂಗ್ ಸೆಂಟರ್‌ಗಳು ಮತ್ತು ಪರೀಕ್ಷೆಗೆ ಪಾವತಿಸುವ ಹಣ ಪೋಲಾಗಲಿದೆ. ಇದನ್ನು ಮೊದಲಿನಿಂದಲೂ ವಿರೋಧಿಸುತ್ತಾ ಬಂದರೂ ಕೇಂದ್ರ ಸರ್ಕಾರ ಈ ಬಗ್ಗೆ ನಿರ್ಧಾರ ತೆಗೆದುಕೊಳ್ಳುವಲ್ಲಿ ವಿಫಲವಾಗಿದೆ ಎಂದು ಅವರು ಟೀಕಿಸಿದ್ದಾರೆ.
ಇದನ್ನೂ ಓದಿ: ವಿದ್ಯಾರ್ಥಿಗಳ ಆತ್ಮಹತ್ಯೆಯನ್ನು ತಡೆಯಲು "ದರ್ವಾಜ್ ಪೆ ದಸ್ತಕ್" ಅಭಿಯಾನ