ETV Bharat / bharat

1450 ಕೋಟಿ ವೆಚ್ಚ, 15,660 ಡಬಲ್ ಬೆಡ್ ರೂಂ.. ಏಷ್ಯಾದ ಅತಿದೊಡ್ಡ ವಸತಿ ಸಂಕೀರ್ಣಕ್ಕೆ ಚಾಲನೆ ಕೊಟ್ಟ ಸಿಎಂ ​

ನೂರಾರು ಎಕರೆ ಪ್ರದೇಶದಲ್ಲಿ ಸಾವಿರಾರೂ ಕೋಟಿ ರೂಪಾಯಿ ವೆಚ್ಚದಲ್ಲಿ 15 ಸಾವಿರಕ್ಕೂ ಹೆಚ್ಚು ಮನೆಗಳನ್ನು ನಿರ್ಮಿಸಲಾಗಿದ್ದು, ಸರ್ಕಾರಿ ಸಾಮಾಜಿಕ ವಸತಿ ಸಮುಚ್ಚಯವನ್ನು ತೆಲಂಗಾಣ ಸಿಎಂ ಕೆಸಿಆರ್​ ಉದ್ಘಾಟಿಸಿದರು.

Asia largest housing complex inaugurated  Asia largest housing complex inaugurated by CM KCR  housing complex inaugurated  ವಸತಿ ಸಂಕೀರ್ಣವನ್ನು ಉದ್ಘಾಟಿಸಿದ ಸಿಎಂ ಕೆಸಿಆರ್​ ಏಷ್ಯಾದ ಅತಿದೊಡ್ಡ ವಸತಿ ಸಂಕೀರ್ಣ  15 ಸಾವಿರಕ್ಕೂ ಹೆಚ್ಚು ಮನೆಗಳನ್ನು ನಿರ್ಮಿಸಲಾಗಿದ್ದು  ರ್ಕಾರಿ ಸಾಮಾಜಿಕ ವಸತಿ ಸಮುಚ್ಚಯ  ತೆಲಂಗಾಣ ಸಿಎಂ ಕೆಸಿಆರ್  ಏಷ್ಯಾದಲ್ಲೇ ಅತಿ ದೊಡ್ಡ ಸರ್ಕಾರಿ ಸಾಮಾಜಿಕ ವಸತಿ ಸಮುಚ್ಚಯ  ಡಬಲ್ ಬೆಡ್ ರೂಂ ಮನೆಗಳನ್ನು ಸಿಎಂ ಕೆಸಿಆರ್ ಉದ್ಘಾಟಿಸಿದರು  ವಸತಿ ಸಂಕೀರ್ಣದಲ್ಲಿರುವ ಪ್ರತಿಯೊಂದು ಮನೆ
ಏಷ್ಯಾದ ಅತಿದೊಡ್ಡ ವಸತಿ ಸಂಕೀರ್ಣವನ್ನು ಉದ್ಘಾಟಿಸಿದ ಸಿಎಂ ಕೆಸಿಆರ್​
author img

By

Published : Jun 23, 2023, 10:29 AM IST

ಹೈದರಾಬಾದ್​, ತೆಲಂಗಾಣ: ಏಷ್ಯಾದಲ್ಲೇ ಅತಿ ದೊಡ್ಡ ಸರ್ಕಾರಿ ಸಾಮಾಜಿಕ ವಸತಿ ಸಮುಚ್ಚಯದ ಉದ್ಘಾಟನೆ ಅದ್ಧೂರಿಯಾಗಿ ನಡೆಯಿತು. ಸಂಗಾರೆಡ್ಡಿ ಜಿಲ್ಲೆಯ ಕೊಲ್ಲೂರಿನಲ್ಲಿ 145 ಎಕರೆ ಪ್ರದೇಶದಲ್ಲಿ ನಿರ್ಮಿಸಲಾದ 15,660 ಡಬಲ್ ಬೆಡ್ ರೂಂ ಮನೆಗಳನ್ನು ಸಿಎಂ ಕೆಸಿಆರ್ ಉದ್ಘಾಟಿಸಿದರು. ಈ ವಸತಿ ಸಮುಚ್ಚಯಕ್ಕೆ 'ಕೆಸಿಆರ್ ನಗರ 2ಬಿಕೆ ಡಿಗ್ನಿಟಿ ಹೌಸಿಂಗ್ ಕಾಲೋನಿ' ಎಂದು ನಾಮಕರಣ ಮಾಡಲಾಗಿದೆ. ಮನೆಗಳ ಉದ್ಘಾಟನೆ ವೇಳೆ ಆರು ಫಲಾನುಭವಿಗಳಿಗೆ ಹಂಚಿಕೆ ದಾಖಲೆಗಳನ್ನು ಸಿಎಂ ಹಸ್ತಾಂತರಿಸಿದರು. ಬಳಿಕ ಕೆಸಿಆರ್, ಸಚಿವ ಕೆಟಿಆರ್ ಹಾಗೂ ಇತರ ಜನಪ್ರತಿನಿಧಿಗಳು ಅಲ್ಲಿನ ಮನೆಗಳನ್ನು ಪರಿಶೀಲಿಸಿದರು.

ಈ ವಸತಿ ಸಂಕೀರ್ಣದಲ್ಲಿರುವ ಪ್ರತಿಯೊಂದು ಮನೆಯು 560 ಚದರ ಅಡಿ ವಿಸ್ತೀರ್ಣವನ್ನು ಹೊಂದಿದೆ. 117 ಬ್ಲಾಕ್‌ಗಳಾಗಿ ವಿಂಗಡಿಸಲಾಗಿದೆ. G 9, G 10, G 11 ಅಂತಸ್ತುಗಳ ರೂಪದಲ್ಲಿ ನಿರ್ಮಿಸಲಾಗಿದೆ. 37ರಷ್ಟು ಭೂಮಿಯಲ್ಲಿ ಮನೆಗಳನ್ನು ನಿರ್ಮಿಸಲಾಗಿದೆ. ಉಳಿದ ಶೇ.63ರಷ್ಟು ಭೂಮಿಗೆ ಮೂಲಸೌಕರ್ಯ ಕಲ್ಪಿಸಲಾಗಿದೆ.

ಈ ವಸತಿ ಸಂಕೀರ್ಣವು ಹಲವು ವೈಶಿಷ್ಟ್ಯಗಳನ್ನು ಹೊಂದಿದೆ. 145 ಎಕರೆ ಪ್ರದೇಶದಲ್ಲಿ 1450 ಕೋಟಿ ರೂಪಾಯಿ ವೆಚ್ಚದಲ್ಲಿ 15 ಸಾವಿರದ 660 ಮನೆಗಳನ್ನು ನಿರ್ಮಿಸಲಾಗಿದೆ. 117 ಬ್ಲಾಕ್​ಗಳಲ್ಲಿ ನಿರ್ಮಿಸಿರುವ ವಸತಿ ಸಮುಚ್ಚಯದಲ್ಲಿ ಪ್ರತಿ ಬ್ಲಾಕ್​ನಲ್ಲಿ 8 ರಿಂದ 11 ಮಹಡಿಗಳಿವೆ. ಪ್ರತಿ ಪ್ಲಾಟ್‌ಗೆ ಸಾಕಷ್ಟು ಗಾಳಿ ಮತ್ತು ಬೆಳಕು ಸಿಗುವಂತೆ ವಿಶೇಷ ಕಾಳಜಿ ವಹಿಸಲಾಗಿದೆ. ಪ್ರತಿ ಬ್ಲಾಕ್‌ಗೆ ಎರಡು ಲಿಫ್ಟ್‌ಗಳು ಮತ್ತು ಎರಡು ಅಥವಾ ಮೂರು ಮೆಟ್ಟಿಲುಗಳಿವೆ. ಒಟ್ಟು ವಿಸ್ತೀರ್ಣದ ಶೇ 14ರಷ್ಟು ಮಾತ್ರ ಕಟ್ಟಡಗಳ ನಿರ್ಮಾಣಕ್ಕೆ ಬಳಕೆಯಾಗುತ್ತಿದೆ. 23 ರಷ್ಟು ರಸ್ತೆಗಳು ಮತ್ತು ಒಳಚರಂಡಿಗೆ, 25 ರಷ್ಟು ಉದ್ಯಾನ ಮತ್ತು ಆಟದ ಮೈದಾನಗಳಿಗೆ ಬಳಸಲಾಗಿದೆ. 38 ರಷ್ಟು ಭೂಮಿಯನ್ನು ಭವಿಷ್ಯದ ಸಾಮಾಜಿಕ ಅಗತ್ಯಗಳಿಗಾಗಿ ಮೀಸಲಿಡಲಾಗಿದೆ.

ಹದಿಮೂರೂವರೆ ಕಿಲೋಮೀಟರ್ ಉದ್ದದ ಆಂತರಿಕ ರಸ್ತೆಗಳನ್ನು ನಿರ್ಮಿಸಲಾಗಿದೆ. 10.6 ಕಿ.ಮೀ ಉದ್ದದ ಭೂಗತ ಒಳಚರಂಡಿ ಪೈಪ್‌ಲೈನ್‌ಗಳನ್ನು ಈಗಾಗಲೇ ಹಾಕಲಾಗಿದೆ. ಒಂದೇ ಆವರಣದಲ್ಲಿ 15 ಸಾವಿರದ 660 ಕುಟುಂಬಗಳು ವಾಸಿಸುತ್ತಿದ್ದು, ದೊಡ್ಡ ಪ್ರಮಾಣದ ನೀರು ಸರಬರಾಜು ಅಗತ್ಯವಿದೆ. ಇದಕ್ಕಾಗಿ 21 ಸಾವಿರ ಕಿಲೋ ಲೀಟರ್ ಸಾಮರ್ಥ್ಯದ ಶುದ್ಧ ನೀರಿನ ತೊಟ್ಟಿಗಳನ್ನು ನಿರ್ಮಿಸಲಾಗಿದೆ. 3 ಅಂಗಡಿ ಸಂಕೀರ್ಣಗಳು, ಬ್ಯಾಂಕ್, ಪ್ರಾಥಮಿಕ ಆರೋಗ್ಯ ಕೇಂದ್ರ ಮತ್ತು ಅಂಗನವಾಡಿ ಕೇಂದ್ರಗಳನ್ನು ಸಹ ಸ್ಥಾಪಿಸಲಾಗುವುದು. ಡಬಲ್​ ಬೆಡ್ ​ರೂಂ ನಿರ್ಮಾಣದ ಆವರಣದಲ್ಲಿ 30 ಸಾವಿರ ಸಸಿಗಳನ್ನು ನೆಡಲಾಗಿದೆ. 9 ಮಿಲಿಯನ್ ಲೀಟರ್ ಸಾಮರ್ಥ್ಯದ ಎಸ್‌ಟಿಪಿ ಸ್ಥಾವರವನ್ನು ಸ್ಥಾಪಿಸಲಾಗಿದ್ದು, ಕೊಳಚೆ ನೀರನ್ನು ಸಂಸ್ಕರಿಸಿ ಅದನ್ನು ಸ್ಥಾವರಗಳಿಗೆ ಮತ್ತು ಇತರ ಉದ್ದೇಶಗಳಿಗೆ ಬಳಸಲಾಗುತ್ತದೆ.

ಓದಿ: Lok Sabha Election: ಇಂದು ಪ್ರತಿಪಕ್ಷಗಳ ಮಹತ್ವದ ಸಭೆ.. ಪಾಟ್ನಾದಲ್ಲಿ ಬೀಡುಬಿಟ್ಟ ಹಿರಿಯ ನಾಯಕರ ದಂಡು!!

ಇನ್ನು ಸಿಎಂ ಕೆಸಿಆರ್​ ಸಂಗಾರೆಡ್ಡಿ ಜಿಲ್ಲೆಗೆ ಭೇಟಿ ನೀಡಿ 183 ಕೋಟಿ ವೆಚ್ಚದಲ್ಲಿ 200 ಹಾಸಿಗೆಗಳ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ನಿರ್ಮಾಣಕ್ಕೆ ಶಂಕುಸ್ಥಾಪನೆ ನೆರವೇರಿಸಿದರು. ಆ ಬಳಿಕ ಅಲ್ಲಿ ಆಯೋಜಿಸಿದ್ದ ಸಾರ್ವಜನಿಕ ಸಭೆಯಲ್ಲಿ ಮಾತನಾಡಿದ ಮುಖ್ಯಮಂತ್ರಿ ಕೆಸಿಆರ್, ಜಿಲ್ಲೆಯ ಪ್ರತಿ ನಗರಸಭೆಗೆ ರೂ.30 ಕೋಟಿ ಹಾಗೂ ಪ್ರತಿ ವಿಭಾಗಕ್ಕೆ ರೂ.10 ಕೋಟಿ ನೀಡುವುದಾಗಿ ಸಿಎಂ ಕೆಸಿಆರ್ ಘೋಷಿಸಿದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.