ETV Bharat / bharat

ಏಷ್ಯಾ ಕಪ್ 2023: ಇಂದು ಭಾರತ Vs ಪಾಕಿಸ್ತಾನ ರೋಚಕ ಹಣಾಹಣಿಗೆ ವೇದಿಕೆ ಸಿದ್ಧ.. - ಪಾಕ್ ಮಣಿಸಲು ಭಾರತ ಉತ್ಸುಕ

Asia Cup 2023 - India Vs Pakistan: ಭಾರತ ಮತ್ತು ಪಾಕಿಸ್ತಾನ ನಡುವಿನ ಕ್ರಿಕೆಟ್ ಪಂದ್ಯದ ಬಗ್ಗೆ ಕ್ರಿಕೆಟ್ ಪ್ರೇಮಿಗಳು ತುಂಬಾ ಆಸಕ್ತಿ ಹೊಂದಿದ್ದಾರೆ. ಇಂದು (ಸೆಪ್ಟೆಂಬರ್ 2) ನಡೆಯಲಿರುವ ಪಂದ್ಯದ ಹಣಾಹಣಿಯನ್ನು ವೀಕ್ಷಿಸಲು ದೇಶದ ಎಲ್ಲರೂ ಕಾತರದಿಂದ ಕಾಯುತ್ತಿದ್ದಾರೆ. ಶ್ರೀಲಂಕಾದ ಪಲ್ಲೆಕೆಲೆ ಅಂತಾರಾಷ್ಟ್ರೀಯ ಕ್ರಿಕೆಟ್ ಸ್ಟೇಡಿಯಂನಲ್ಲಿ ಎರಡು ಬಲಿಷ್ಠ ತಂಡಗಳು ಮುಖಾಮುಖಿಯಾಗಲಿವೆ.

Asia Cup 2023 India Vs Pakistan
ಏಷ್ಯಾ ಕಪ್ 2023: ನಾಳಿನ ಭಾರತ Vs ಪಾಕಿಸ್ತಾನ ರೋಚಕ ಹಣಾಹಣಿಗೆ ವೇದಿಕೆ ಸಿದ್ಧ...
author img

By ETV Bharat Karnataka Team

Published : Sep 1, 2023, 9:55 AM IST

Updated : Sep 2, 2023, 8:49 AM IST

ಹೈದರಾಬಾದ್: ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಭಾರತ ಮತ್ತು ಪಾಕಿಸ್ತಾನ ನಡುವಿನ ಪಂದ್ಯ ಎಂದರೆ ಕ್ರೀಡಾಭಿಮಾನಿಗಳಲ್ಲಿ ಭರ್ಜರಿ ಕ್ರೇಜ್. ಉಭಯ ದೇಶಗಳ ನಡುವಿನ ಸಂಬಂಧ ಹಳಸಿರುವ ಕಾರಣ, ಎರಡು ತಂಡಗಳ ನಡುವೆ ದ್ವಿಪಕ್ಷೀಯ ಸರಣಿ ನಡೆಯುತ್ತಿಲ್ಲ. ಆದರೆ, ಐಸಿಸಿ ಅಥವಾ ಏಷ್ಯಾಕಪ್ ನಂತಹ ಟೂರ್ನಿಗಳಲ್ಲಿ ಭಾರತ - ಪಾಕಿಸ್ತಾನ ನಡುವಿನ ಕ್ರಿಕೆಟ್ ಪಂದ್ಯವನ್ನು ವೀಕ್ಷಿಸುವ ಭಾಗ್ಯ ಕ್ರೀಡಾಭಿಮಾನಿಗಳಿಗೆ ಲಭಿಸಿದೆ. ಶ್ರೀಲಂಕಾದ ಪಲ್ಲೆಕೆಲೆಯಲ್ಲಿ ನಡೆಯಲಿರುವ ಏಷ್ಯಾಕಪ್ ಪಂದ್ಯದಲ್ಲಿ ಎರಡು ಬಲಿಷ್ಠ ತಂಡಗಳು ಮುಖಾಮುಖಿಯಾಗಲಿವೆ.

  • Get ready for the ultimate clash as 6 top Asian teams fight for supremacy in the Men's ODI Asia Cup! Exciting matches await in Pakistan (2:30 PM Pak time) and Sri Lanka (3:00 PM SL local time). Let the battle begin! 🏆 #ACC pic.twitter.com/kh9YJM8phK

    — AsianCricketCouncil (@ACCMedia1) August 22, 2023 " class="align-text-top noRightClick twitterSection" data=" ">

ಭಾರತ ಮತ್ತು ಪಾಕಿಸ್ತಾನದ ಪಂದ್ಯಗಳು ಯಾವಾಗಲೂ ಅಭಿಮಾನಿಗಳಿಗೆ ಭರ್ಜರಿ ಸಂತೋಷವನ್ನು ನೀಡುತ್ತದೆ. ಭದ್ರತೆ ಮತ್ತು ರಾಜತಾಂತ್ರಿಕ ಸಮಸ್ಯೆಗಳಿಂದಾಗಿ ಭಾರತ ತಂಡವು ಪಾಕಿಸ್ತಾನದಲ್ಲಿ ಆಡದ ಕಾರಣ ಪಂದ್ಯಗಳನ್ನು ಬೇರೆ ಸ್ಥಳಗಳಲ್ಲಿ ಆಡಲಾಗುತ್ತದೆ.

ಪಾಕ್ ಮಣಿಸಲು ಭಾರತ ಉತ್ಸುಕ: ಶನಿವಾರ ಪಲ್ಲೆಕೆಲೆ ಅಂತರಾಷ್ಟ್ರೀಯ ಕ್ರೀಡಾಂಗಣದಲ್ಲಿ ರೋಹಿತ್ ಶರ್ಮಾ ನೇತೃತ್ವದ ಭಾರತ ತಂಡವು ಬಾಬರ್ ಅಜಮ್ ನೇತೃತ್ವದ ಪಾಕಿಸ್ತಾನ ವಿರುದ್ಧ ಮತ್ತೊಂದು ಗೆಲುವು ದಾಖಲಿಸಲು ಹೆಚ್ಚು ಉತ್ಸುಕವಾಗಿದೆ. ಪಂದ್ಯ ವಿಜೇತರನ್ನು ಒಗೊಂಡಿರುವ ಬಲಿಷ್ಠ ಭಾರತೀಯ ತಂಡದ ನಡುವಿನ ಏಕೈಕ ಅಡಚಣೆ ಎಂದರೆ ಅದು ಬಾಬರ್ ಅಜಮ್. ಮ್ಯಾಚ್​ ವಿನ್ನರ್​ ಆಗಿರುವ ಬಾಬರ್ ಅವರು ಏಷ್ಯಾ ಕಪ್ ಅನ್ನು ಭವ್ಯವಾದ ಶತಕದೊಂದಿಗೆ ಪ್ರಾರಂಭಿಸಿದರು. ಅವರು ಪ್ರಭಾವಶಾಲಿಯಾದ ಫಾರ್ಮ್ ಅನ್ನು ಮುಂದುವರಿಸುವ ಸಾಧ್ಯತೆಯಿದೆ. ಜೊತೆಗೆ ಜಸ್ಪ್ರೀತ್ ಬುಮ್ರಾ ನೇತೃತ್ವದ ಭಾರತೀಯ ದಾಳಿಯನ್ನು ಎದುರಿಸಲು ಸಿದ್ಧರಾಗಿದ್ದಾರೆ. ಆದರೆ, ಪಾಕಿಸ್ತಾನದ ನಾಯಕನಿಗೆ ಈ ಕಾರ್ಯ ಅಷ್ಟು ಸುಲಭವಲ್ಲ. ಅವರಿಗೆ ಇತರ ಬ್ಯಾಟ್ಸ್​ಮನ್​ಗಳಿಂದ ನೆರವು ಬೇಕಾಗುತ್ತದೆ.

ಮೊಹಮ್ಮದ್ ಸಿರಾಜ್ ಎರಡನೇ ಸೀಮರ್ ಆಗಿ ಸ್ವಯಂಚಾಲಿತ ಆಯ್ಕೆ ಮಾಡುತ್ತಾರೆ. ಕೋಚ್ ರಾಹುಲ್ ದ್ರಾವಿಡ್ ಮತ್ತು ನಾಯಕ ರೋಹಿತ್ ಶರ್ಮಾ ಅವರು, ಮೂರು ವೇಗಿಗಳೊಂದಿಗೆ ಅಥವಾ ಮೂವರು ಸ್ಪಿನ್ನರ್‌ಗಳನ್ನು ಆಡಿಸಲು ನಿರ್ಧರಿಸುತ್ತಾರೆಯೇ ಎಂಬುದು ಕುತೂಹಲಕಾರಿ ಸಂಗತಿಯಾಗಿದೆ. ಪಾಕಿಸ್ತಾನವು ಸ್ಪಿನ್ ಬಾಲ್​ಗಳನ್ನು ಚೆನ್ನಾಗಿ ಆಡುತ್ತದೆ ಎಂದು ತಿಳಿದಿದೆ. ಆದ್ದರಿಂದ ಕೋಚ್ ಮತ್ತು ನಾಯಕ ಈ ಅಂಶವನ್ನು ಪರಿಗಣಿಸಬೇಕಾಗುತ್ತದೆ.

ಭಾರತದ ಬ್ಯಾಟಿಂಗ್‌ಗೆ ಸಂಬಂಧಿಸಿದಂತೆ, ಮೂರು ಶತಕಗಳನ್ನು ಗಳಿಸಿರುವ ನಾಯಕ ರೋಹಿತ್ ಅವರು, ಮುಂದೆ ನಿಂತು ತಂಡವನ್ನು ಮುನ್ನಡೆಸಬೇಕಾಗಿದೆ. ದಂತಕಥೆ ವಿರಾಟ್ ಕೊಹ್ಲಿ, 360 - ಡಿಗ್ರಿ ಮ್ಯಾನ್ ಸೂರ್ಯಕುಮಾರ್ ಯಾದವ್, ಆಲ್ ರೌಂಡರ್ ಹಾರ್ದಿಕ್ ಪಾಂಡ್ಯ ಮತ್ತು ತಿಲಕ್ ವರ್ಮಾ ಜೊತೆಗೆ ಶುಭಮಾನ್ ಗಿಲ್ ಅವರು ಪ್ರಮುಖ ಆಟಗಾರರು. ಭಾರತವು ದೊಡ್ಡ ಗುರಿಯನ್ನು ತಲುಪಲು ಬಯಸಿದರೆ, ಆಲ್‌ರೌಂಡರ್ ಹಾರ್ದಿಕ್ ಪಾಂಡ್ಯ ಅವರು ಇಚ್ಛೆಯಂತೆ ಸಿಕ್ಸರ್‌ಗಳನ್ನು ಬಾರಿಸಬೇಕಾಗುತ್ತದೆ.

ಎರಡು ಬಲಿಷ್ಠ ತಂಡಗಳ ಹಣಾಹಣಿ: ಮತ್ತೊಂದೆಡೆ, ಮುಲ್ತಾನ್‌ನಲ್ಲಿ ಮಿನ್ನೋಸ್ ನೇಪಾಳವನ್ನು 238 ರನ್‌ಗಳಿಂದ ಸೋಲಿಸಿದ ನಂತರ ಗೆಲುವಿನೊಂದಿಗೆ ತನ್ನ ಅಭಿಯಾನವನ್ನು ಪ್ರಾರಂಭಿಸಿದ ಪಾಕಿಸ್ತಾನ, ಗೆಲುವಿನ ಸರಣಿಯನ್ನು ವಿಸ್ತರಿಸಲು ಉತ್ಸುಕವಾಗಿದೆ. ನೇಪಾಳ ವಿರುದ್ಧದ ಪಂದ್ಯದಲ್ಲಿ ವೇಗಿ ಶಾಹೀನ್ ಅಫ್ರಿದಿ ಸ್ವಲ್ಪ ಸಮಯದವರೆಗೆ ಆಟದಿಂದ ಹೊರನಡೆದಾಗ ಪಾಕಿಸ್ತಾನಕ್ಕೆ ತೊಂದರೆ ಒಳಗಾಗಿತ್ತು. ಬೌಲರ್ ಸೀಮರ್, ಭಾರತೀಯ ಬ್ಯಾಟ್ಸ್​ಮನ್​ಗಳಿಗೆ ಕೆಲವು ಕಠಿಣ ಸವಾಲುಗಳನ್ನು ಹಾಕಲು ಸಮರ್ಥರಾಗಿದ್ದಾರೆ. ಉಭಯ ರಾಷ್ಟ್ರಗಳು ತಮ್ಮ ಪೈಪೋಟಿಯನ್ನು ಮುಂದುವರೆಸಿರುವುದರಿಂದ ಪಲ್ಲೆಕೆಲೆಯಲ್ಲಿ ನಡೆಯಲಿರುವ ಪಂದ್ಯವು ರೋಚಕತೆಗೆ ಸಾಕ್ಷಿಯಾಗಲಿದೆ.

ಭಾರತ ತಂಡ: ರೋಹಿತ್ ಶರ್ಮಾ (ನಾಯಕ), ಶುಭಮನ್ ಗಿಲ್, ವಿರಾಟ್ ಕೊಹ್ಲಿ, ಶ್ರೇಯಸ್ ಅಯ್ಯರ್, ಸೂರ್ಯಕುಮಾರ್ ಯಾದವ್, ತಿಲಕ್ ವರ್ಮಾ, ಕೆಎಲ್ ರಾಹುಲ್, ಇಶಾನ್ ಕಿಶನ್, ಹಾರ್ದಿಕ್ ಪಾಂಡ್ಯ (ವಿಸಿ), ರವೀಂದ್ರ ಜಡೇಜಾ, ಶಾರ್ದೂಲ್ ಠಾಕೂರ್, ಅಕ್ಷರ್ ಪಟೇಲ್, ಕುಲದೀಪ್ ಬಿ ಯಾದವ್, ಜಸ್ಪ್ರೀ ಪ್ ಯಾದವ್ , ಮೊಹಮ್ಮದ್ ಶಮಿ, ಮೊಹಮ್ಮದ್ ಸಿರಾಜ್, ಪ್ರಸಿದ್ಧ್ ಕೃಷ್ಣ. ಟ್ರಾವೆಲಿಂಗ್ ಸ್ಟ್ಯಾಂಡ್-ಬೈ ಆಟಗಾರ- ಸಂಜು ಸ್ಯಾಮ್ಸನ್.

ಭಾರತ- ಪಾಕಿಸ್ತಾನ 13 ಬಾರಿ ಮುಖಾಮುಖಿ: ಈ ಶನಿವಾರ ರೋಹಿತ್ ಶರ್ಮಾ ನೇತೃತ್ವದ ಭಾರತ ಮತ್ತು ಬಾಬರ್ ಅಜಮ್ ನೇತೃತ್ವದ ಪಾಕಿಸ್ತಾನ ನಡುವಿನ ಏಷ್ಯಾ ಕಪ್ ಪಂದ್ಯಕ್ಕಾಗಿ ಎರಡೂ ದೇಶಗಳ ಅಭಿಮಾನಿಗಳು ಕುತೂಹಲದಿಂದ ಕಾಯುತ್ತಿದ್ದಾರೆ. ಏಷ್ಯಾಕಪ್​ನಲ್ಲಿ ಇದುವರೆಗೆ ಭಾರತ ಮತ್ತು ಪಾಕಿಸ್ತಾನ 13 ಬಾರಿ ಮುಖಾಮುಖಿಯಾಗಿದ್ದು, ಭಾರತ ಏಳು ಬಾರಿ ಮತ್ತು ಪಾಕಿಸ್ತಾನ ಐದು ಬಾರಿ ಗೆಲುವು ಸಾಧಿಸಿದೆ. 2018ರಲ್ಲಿ ಎರಡೂ ಬಾರಿ ಟೀಂ ಇಂಡಿಯಾ ಗೆದ್ದಿತ್ತು. ಕಳೆದ ಐದು ಏಷ್ಯಾಕಪ್ ಪಂದ್ಯಗಳಲ್ಲಿ ಪಾಕಿಸ್ತಾನ ವಿರುದ್ಧ ಭಾರತ ನಾಲ್ಕು ಬಾರಿ ಗೆದ್ದಿದೆ. ಪ್ರಸ್ತುತ 16ನೇ ಆವೃತ್ತಿಯ ಏಷ್ಯಾಕಪ್ ಆಗಿದೆ.

ಇದನ್ನೂ ಓದಿ: 85.71 ಮೀ ಎಸೆದು 2 ನೇ ಸ್ಥಾನ ಪಡೆದ ನೀರಜ್​ ಚೋಪ್ರಾ... ಈ ಬಾರಿ ಕೈ ತಪ್ಪಿದ ಚಿನ್ನದ ಪಟ್ಟ

Last Updated : Sep 2, 2023, 8:49 AM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.