ETV Bharat / bharat

ತಾಯಿ ಸಾವಿನ ಸುದ್ದಿ ಕೇಳುತ್ತಿದ್ದಂತೆ ಇಹಲೋಕ ತ್ಯಜಿಸಿದ ASI.. ಮದುವೆ ಮನೆಯಲ್ಲಿ ಸೂತಕ - ತಾಯಿ ಸಾವಿನ ಸುದ್ದಿ ಕೇಳುತ್ತಿದ್ದಂತೆ ಇಹಲೋಕ ತ್ಯಜಿಸಿದ ASI

ಆಂಧ್ರಪ್ರದೇಶದ ಅನಂತಪುರ ಜಿಲ್ಲೆಯ ಬುಕ್ಕರಾಯಸಮುದ್ರ ವಲಯದ ಕೊರ್ರಪಾಡು ಗ್ರಾಮದಲ್ಲಿ ASI ವೊಬ್ಬರು ತಾಯಿಯ ಸಾವಿನ ಸುದ್ದಿ ಕೇಳಿ ಕುಸಿದು ಬಿದ್ದು ಹಠಾತ್ ಸಾವನ್ನಪ್ಪಿದ್ದಾರೆ.

ASI
ASI
author img

By

Published : Nov 7, 2021, 11:34 AM IST

ಅನಂತಪುರ(ಆಂಧ್ರಪ್ರದೇಶ): ತಾಯಿಯ ಸಾವಿನ ಸುದ್ದಿ ಕೇಳಿ ಇದ್ದಕ್ಕಿದ್ದಂತೆ ಮಗ ಕುಸಿದು ಬಿದ್ದು ಸಾವನ್ನಪ್ಪಿರುವ ಹೃದಯ ವಿದ್ರಾವಕ ಘಟನೆ ಆಂಧ್ರಪ್ರದೇಶದ ಅನಂತಪುರ ಜಿಲ್ಲೆಯ ಬುಕ್ಕರಾಯಸಮುದ್ರ ವಲಯದ ಕೊರ್ರಪಾಡು ಗ್ರಾಮದಲ್ಲಿ ಶನಿವಾರ ಸಂಭವಿಸಿದೆ.

ಕೊರ್ರಪಾಡುವಿನ ವೆಂಕಟಸ್ವಾಮಿ (56) ಮೃತ ಮಗ. ಪಾಮಿರಾ ಪೊಲೀಸ್ ಠಾಣೆಯಲ್ಲಿ ASI ಆಗಿ ಕಾರ್ಯ ನಿರ್ವಹಿಸುತ್ತಿದ್ದರು. ಇವರಿಗೆ ಪತ್ನಿ, ಇಬ್ಬರು ಪುತ್ರಿಯರು ಹಾಗೂ ಒಬ್ಬ ಪುತ್ರ ಇದ್ದಾನೆ. ಈಗಾಗಲೇ ಇಬ್ಬರು ಹೆಣ್ಣು ಮಕ್ಕಳಿಗೆ ಮದುವೆಯಾಗಿದ್ದು, ಪುತ್ರ ಗೋವರ್ಧನ್‌ಗೆ ಶನಿವಾರವೇ ವಿವಾಹ ನೆರವೇರಿಸಲಾಗಿದೆ.

ವೆಂಕಟಸ್ವಾಮಿ ಅವರ ತಾಯಿ ಕೊನ್ನಮ್ಮಗೆ (70) ಆರೋಗ್ಯದಲ್ಲಿ ಏರುಪೇರಾದ ಹಿನ್ನೆಲೆ ಕಳೆದ ಮೂರು ದಿನಗಳಿಂದ ಅನಂತಪುರದ ಆಸ್ಪತ್ರೆಗೆ ದಾಖಲಿಸಲಾಗಿತ್ತು. ತಾಯಿಯ ಅನಾರೋಗ್ಯದ ಕುರಿತು ಚಿಂತಿತರಾಗಿದ್ದ ವೆಂಕಟಸ್ವಾಮಿ, ದಿಢೀರನೆ ಮಗನ ಮದುವೆ ಮಾಡಿಸಿದ್ದರು. ಮದುವೆ ಮುಗಿದ ಕೆಲವೇ ಗಂಟೆಗಳಲ್ಲಿ ಕೊನ್ನಮ್ಮ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದರು.

ಈ ಕುರಿತು ಸಂಬಂಧಿಕರು ದೂರವಾಣಿ ಮೂಲಕ ತಿಳಿಸಿದಾಗ ವೆಂಕಟಸ್ವಾಮಿ ತೀವ್ರ ಘಾಸಿಗೊಂಡು ಕೆಳಗೆ ಕುಸಿದು ಬಿದ್ದಿದ್ದರು. ಕೂಡಲೇ ಅವರನ್ನು ಆಸ್ಪತ್ರೆಗೆ ಸಾಗಿಸಲಾಯಿತಾದರೂ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ.

ತಾಯಿ-ಮಗ ಒಂದೇ ದಿನ ಇಹಲೋಕ ತ್ಯಜಿಸಿದ್ದರಿಂದ ಸಂಭ್ರಮದಿಂದ ಇರಬೇಕಿದ್ದ ಮದುವೆ ಮನೆಯಲ್ಲಿ ಸೂತಕ ಆವರಿಸಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.