ETV Bharat / bharat

ತಾಜ್ ಮಹಲ್​ಗೆ ಮಡ್​ಪ್ಯಾಕ್ ಚಿಕಿತ್ಸೆ.. ಇನ್ನಷ್ಟು ಹೊಳೆಯಲಿದೆ ಪ್ರೇಮ ಸೌಧ! - ASI to make Taj Mahal shine with mud pack treatment

ಕೊರೊನಾ ವೈರಸ್ ಹಿನ್ನೆಲೆ ಸ್ಮಾರಕ ತಾಣಗಳನ್ನು ಮುಚ್ಚಿರುವ ಹಿನ್ನೆಲೆ ಆರ್ಕಿಯಲಾಜಿಕಲ್ ಸರ್ವೆ ಆಫ್ ಇಂಡಿಯಾ (ಎಎಸ್ಐ) ಅವುಗಳ ಕಾರ್ಯನಿರ್ವಹಣೆಯ ಸುಧಾರಣೆಗೆ ಯೋಜನೆಗಳನ್ನು ಮಾಡಿದೆ. ಈ ಸಮಯದಲ್ಲಿ, ತಾಜ್ ಮಹಲ್​​ ಬೆಳಗಿಸಲು ಕೆಲಸ ನಡೆಯಲಿದೆ. ಮುಖ್ಯ ಗುಮ್ಮಟಕ್ಕೆ ಮಡ್‌ಪ್ಯಾಕ್ ಚಿಕಿತ್ಸೆ ನೀಡಲಾಗುತ್ತದೆ ಮತ್ತು ಇದರಿಂದಾಗಿ ತಾಜ್ ಮಹಲ್ ಮುಂಬರುವ ದಿನಗಳಲ್ಲಿ ಇನ್ನಷ್ಟು ಹೊಳೆಯಲಿದೆ.

Taj Mahal
Taj Mahal
author img

By

Published : Apr 20, 2021, 6:02 AM IST

ಆಗ್ರಾ (ಉತ್ತರ ಪ್ರದೇಶ): ಕೊರೊನಾ ಸೋಂಕು ಹೆಚ್ಚಾದ ಹಿನ್ನೆಲೆಯಲ್ಲಿ, ತಾಜ್ ಮಹಲ್ ಮತ್ತು ಆಗ್ರಾದ ಕೆಂಪು ಕೋಟೆ ಸೇರಿದಂತೆ ದೇಶದ ಹಲವಾರು ಸ್ಮಾರಕ ತಾಣಗಳನ್ನು ಮೇ 15ರವರೆಗೆ ಪ್ರವಾಸಿಗರಿಗೆ ಮುಚ್ಚಲಾಗಿದೆ. ಈ ಅವಕಾಶದ ಲಾಭ ಮಾಡಿಕೊಳ್ಳಲು ಎಎಸ್ಐ ಯೋಜನೆಯೊಂದನ್ನು ಹಾಕಿಕೊಂಡಿದೆ.

ಈ ಸಮಯದಲ್ಲಿ, ತಾಜ್ ಮಹಲ್ ಸಂಕೀರ್ಣದ ರಾಯಲ್ ಗೇಟ್ ಬಳಿ ಸವೆದು ಹೋಗಿರುವ ಕಲ್ಲು ಬದಲಾಯಿಸಲಾಗುವುದು ಮತ್ತು ತಾಜ್ ಮಹಲ್ ಗೋಪುರದ ಸಂರಕ್ಷಣೆಗಾಗಿ ಕೂಡಾ ಕೆಲಸ ಮಾಡಲಾಗುವುದು. ತಾಜ್‌ಮಹಲ್‌ನ ಮುಖ್ಯ ಗುಮ್ಮಟ ಬೆಳಗಿಸಲು, ಮಡ್‌ಪ್ಯಾಕ್ ಸಂಸ್ಕರಣೆಗೆ ಕ್ರಿಯಾ ಯೋಜನೆ ಹಾಕಿಕೊಳ್ಳಲಾಗಿದೆ. ಇದೆಲ್ಲದರ ನಂತರ ತಾಜ್ ಮಹಲ್ ಪ್ರವಾಸಿಗರಿಗೆ ಮತ್ತೆ ತೆರೆದಾಗ, ತಾಜ್​ಮಹಲ್​ನ ಸುಂದರ ನೋಟವು ಮೋಡಿ ಮಾಡುವಂತಿರಲಿದೆ.

Taj Mahal
ತಾಜ್ ಮಹಲ್

ಮೇ 15ರವರೆಗೆ ಬಂದ್:

ಕೊರೊನಾ ಪ್ರಕರಣಗಳು ಹೆಚ್ಚಾಗುತ್ತಿರುವ ಹಿನ್ನೆಲೆ ತಾಜ್ ಮಹಲ್ ಮತ್ತು ಆಗ್ರಾ ಕೋಟೆ ಸೇರಿದಂತೆ ಇತರ ಸ್ಮಾರಕಗಳನ್ನು ಮೇ 15ರವರೆಗೆ ಮುಚ್ಚಲಾಗಿದೆ. ಈ ಹಿಂದೆ ಮಾರ್ಚ್ 17, 2020ರಂದು ತಾಜ್ ಮಹಲ್ ಸೇರಿದಂತೆ ದೇಶದ ಎಲ್ಲಾ ಸ್ಮಾರಕಗಳನ್ನು ಮುಚ್ಚಲಾಗಿತ್ತು. ನಂತರ 188 ದಿನಗಳ ಲಾಕ್‌ಡೌನ್ ಬಳಿಕ ತಾಜ್ ಮಹಲ್​ ಅನ್ನು ಸೆಪ್ಟೆಂಬರ್ 21, 2020ರಂದು ಮತ್ತೆ ತೆರೆಯಲಾಗಿತ್ತು.

Taj Mahal
ತಾಜ್ ಮಹಲ್

ರಾಯಲ್ ಗೇಟ್​ನ ಕಲ್ಲುಗಳ ಬದಲಾವಣೆ:

ಎಎಸ್‌ಐ ಅಧೀಕ್ಷಕ ಪುರಾತತ್ವ ಶಾಸ್ತ್ರಜ್ಞ ವಸಂತ್ ಕುಮಾರ್ ಸ್ವರ್ಣಕರ್ ಅವರು, ತಾಜ್ ಮಹಲ್​ ಅನ್ನು ಮುಚ್ಚಿದ ಸಮಯದಲ್ಲಿ ರಾಯಲ್ ಗೇಟ್‌ನ ಸವೆದು ಹೋಗಿರುವ ಕಲ್ಲುಗಳನ್ನು ಬದಲಾಯಿಸುವ ಕೆಲಸ ಮಾಡಲಾಗುವುದು ಎಂದು ಹೇಳಿದ್ದಾರೆ. ಇದಕ್ಕಾಗಿ ಸುಮಾರು 19 ಲಕ್ಷ ರೂ ಖರ್ಚಾಗಲಿದೆ. ಇದರೊಂದಿಗೆ, ತಾಜ್ ಮಹಲ್​ನ ನೈಋತ್ಯ ಗೋಪುರದ ಸಂರಕ್ಷಣೆಯ ಕಾರ್ಯವೂ ಪ್ರಗತಿಯಲ್ಲಿದೆ.

Taj Mahal
ತಾಜ್ ಮಹಲ್ ಗೇಟ್

ನಾಲ್ಕು ಗೋಪುರಗಳ ಸೌಂದರ್ಯ ಹೆಚ್ಚಳ:

ತಾಜ್ ಮಹಲ್ ನಿರ್ಮಾಣದ ಸಮಯದಲ್ಲಿ ನಾಲ್ಕು ಗೋಪುರಗಳನ್ನು ಅದರ ನಾಲ್ಕು ಮೂಲೆಗಳಲ್ಲಿ ನಿರ್ಮಿಸಲಾಗಿದೆ. ಪ್ರತಿ ಗೋಪುರದ ನೆಲದಿಂದ 42.95 ಮೀಟರ್ ಅಥವಾ 140.91 ಅಡಿ ಎತ್ತರದಲ್ಲಿದೆ. ತಾಜ್‌ಮಹಲ್‌ನಲ್ಲಿ ಬಳಸಿದ ಅಮೃತಶಿಲೆಯನ್ನು ಈ ಗೋಪುರಗಳಲ್ಲಿಯೂ ಬಳಸಲಾಗಿದೆ. ಈ ಗೋಪುರಗಳು ತಾಜ್‌ಮಹಲ್‌ನ ಸೌಂದರ್ಯವನ್ನು ಇನ್ನಷ್ಟು ಹೆಚ್ಚಿಸುತ್ತವೆ. ತಾಜ್‌ಮಹಲ್‌ನ ನೈಋತ್ಯ ಗೋಪುರದ ಸಂರಕ್ಷಣೆ ಕಾರ್ಯವೂ ನಡೆಯುತ್ತಿದೆ ಎಂದು ಸ್ವರ್ಣಕರ್ ಮಾಹಿತಿ ನೀಡಿದ್ದಾರೆ. ಕಲ್ಲುಗಳು ಮತ್ತು ಗೋಪುರದ ಹೊರಭಾಗದಲ್ಲಿರುವ ಮೊಸಾಯಿಕ್ ಅನ್ನು ಸಹ ಬದಲಾಯಿಸಲಾಗುತ್ತದೆ.

Taj Mahal
ದುರಸ್ತಿ ಕಾರ್ಯ

ಗೋಪುರಗಳ ದುರಸ್ತಿಗೆ 23 ಲಕ್ಷ ವೆಚ್ಚ:

ಗೋಪುರಗಳ ಸಂರಕ್ಷಣಾ ಕಾರ್ಯದಲ್ಲಿ ಸುಮಾರು 23 ಲಕ್ಷ ರೂ ಖರ್ಚಾಗಲಿದೆ. ಈ ಕೆಲಸದಲ್ಲಿ ಗೋಪುರದ ನಾಶವಾದ ಕಲ್ಲುಗಳು ಹಾಗೂ ಬಣ್ಣ ಬದಲಾದ ಕಲ್ಲುಗಳನ್ನು ಬದಲಾಯಿಸಲಾಗುತ್ತದೆ. ಈ ಸಂದರ್ಭದಲ್ಲಿ ತಾಜ್‌ಮಹಲ್‌ನ ನೈಋತ್ಯ ಗೋಪುರದ ಸಂರಕ್ಷಣಾ ಕಾರ್ಯವನ್ನು ವೇಗವಾಗಿ ಪೂರ್ಣಗೊಳಿಸುವ ಗುರಿ ಹೊಂದಲಾಗಿದೆ.

ಮುಖ್ಯ ಗುಮ್ಮಟಕ್ಕೆ ಮಡ್‌ಪ್ಯಾಕ್ ಚಿಕಿತ್ಸೆ:

ತಾಜ್‌ಮಹಲ್‌ನ ಮುಖ್ಯ ಗುಮ್ಮಟಕ್ಕೆ ಮಡ್‌ಪ್ಯಾಕ್ ಸಂಸ್ಕರಣೆಯ ಮೂಲಕ ಅಂದ ಹೆಚ್ಚಿಸುವ ಕಾರ್ಯ ಮಾಡಲಾಗುತ್ತದೆ. ಮಡ್‌ಪ್ಯಾಕ್ ಚಿಕಿತ್ಸೆಯನ್ನು ಸಮಯಕ್ಕೆ ಸರಿಯಾಗಿ ಪೂರ್ಣಗೊಳಿಸಿದರೆ ಪ್ರವಾಸಿಗರಿಗೆ ಇನ್ನೂ ಸುಂದರವಾದ ತಾಜ್ ಮಹಲ್​ ಅನ್ನು ನೋಡಲು ಅವಕಾಶವಿದೆ ಎಂದು ಪುರಾತತ್ವ ಶಾಸ್ತ್ರಜ್ಞರು ತಿಳಿಸಿದ್ದಾರೆ. ಹೆಚ್ಚುತ್ತಿರುವ ಕೊರೊನಾ ಸೋಂಕುಗಳ ನಡುವೆ ತರಬೇತಿ ಪಡೆದ ಕಾರ್ಮಿಕರ ಕೊರತೆ ಮತ್ತು ಪರಿಸ್ಥಿತಿಯನ್ನು ನಿಭಾಯಿಸಲು ಪ್ರಯತ್ನಗಳು ನಡೆಯುತ್ತಿವೆ ಎಂದು ಎಎಸ್ಐ ತಿಳಿಸಿದೆ.

Taj Mahal
ದುರಸ್ತಿ ಕಾರ್ಯ

ಮಡ್‌ಪ್ಯಾಕ್ ಚಿಕಿತ್ಸೆ ಎಂದರೇನು?

ಮಡ್‌ಪ್ಯಾಕ್ ಚಿಕಿತ್ಸೆ ಎಂದರೆ ಮಣ್ಣಿನ ಲೇಪನವಾಗಿದೆ. ಈ ಪೇಸ್ಟ್ ಅನ್ನು ಕಲ್ಲಿನ ಮೇಲೆ ಹಚ್ಚಿ ನಂತರ ನೀರಿನಿಂದ ತೊಳೆಯಲಾಗುತ್ತದೆ. ಈ ರೀತಿಯ ಶುಚಿಗೊಳಿಸುವಾಗ ಯಾವುದೇ ರಾಸಾಯನಿಕವನ್ನು ಬಳಸಲಾಗುವುದಿಲ್ಲ ಮತ್ತು ಇದು ಕಲ್ಲಿಗೆ ಯಾವುದೇ ಹಾನಿಯನ್ನುಂಟುಮಾಡುವುದಿಲ್ಲ. ಈ ಚಿಕಿತ್ಸೆಯ ನಂತರ ತಾಜ್ ಮಹಲ್ ಇನ್ನಷ್ಟು ಪ್ರಜ್ವಲಿಸಲಿದೆ. ತಾಜ್‌ಮಹಲ್‌ಗೆ ಈ ಮೊದಲು ಕೂಡಾ ಮಡ್‌ಪ್ಯಾಕ್ ಚಿಕಿತ್ಸೆ ನೀಡಲಾಗಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.