ETV Bharat / bharat

ಜ್ಞಾನವಾಪಿ ಮಸೀದಿಯಲ್ಲಿ ಮುಂದುವರಿದ ಸರ್ವೆ ಕಾರ್ಯ..!

author img

By

Published : Aug 7, 2023, 10:35 AM IST

ವಾರಾಣಸಿ ಜಿಲ್ಲಾ ಕೋರ್ಟ್ ನಿರ್ದೇಶನದಂತೆ ಜ್ಞಾನವಾಪಿ ಸಂಕೀರ್ಣದಲ್ಲಿ ಎಎಸ್​ಐ ತಂಡ ಇಂದೂ ಕೂಡಾ ಸಮೀಕ್ಷಾ ಕಾರ್ಯವನ್ನು ಮುಂದುವರೆಸಿದೆ.

ASI scientific survey of Gyanvapi mosque complex
ಜ್ಞಾನವಾಪಿ ಮಸೀದಿಯಲ್ಲಿ ಮುಂದುವರಿದ ಸರ್ವೆ ಕಾರ್ಯ..!

ವಾರಾಣಸಿ (ಉತ್ತರ ಪ್ರದೇಶ) : ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆ ವಾರಾಣಸಿಯ ಜ್ಞಾನವಾಪಿ ಸಂಕೀರ್ಣದ ವೈಜ್ಞಾನಿಕ ಸಮೀಕ್ಷೆ ನಾಲ್ಕನೇ ದಿನಕ್ಕೆ ಕಾಲಿರಿಸಿದೆ. ಕಳೆದ ಮೂರು ದಿನಗಳಿಂದ ಜ್ಞಾನವಾಪಿಯಲ್ಲಿ ಸರ್ವೇ ನಡೆಸಿರುವ ಎಎಸ್​ಐ ತಂಡ ಇಂದೂ ಸರ್ವೆ ಕಾರ್ಯಕೈಗೊಂಡಿದೆ. ಸಾವನ್​ ಹಬ್ಬದ ಹಿನ್ನೆಲೆಯಲ್ಲಿ ಇಂದು ಸಮೀಕ್ಷೆ ಆರಂಭಿಸಲು ಸ್ವಲ್ಪ ವಿಳಂಬವಾಗಿದೆ ಎಂದು ಹಿಂದೂ ಪರ ವಕೀಲರು ತಿಳಿಸಿದ್ದಾರೆ.

ಈ ನಡುವೆ ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆ ನಡೆಸುತ್ತಿರುವ ಸಮೀಕ್ಷೆಗೆ ಅಂಜುಮನ್ ಇಂಟೆಝಾಮಿಯಾ ಸಮಿತಿ ಕೂಡ ಸಹಕಾರ ನೀಡುತ್ತಿದೆ ಎಂದು ಸರ್ವೇ ತಂಡದ ಸದಸ್ಯರು ಹೇಳಿದ್ದಾರೆ. ಇಂದು 'ಸಾವನ್' ತಿಂಗಳ ಐದನೇ ಸೋಮವಾರವಾಗಿರುವುದರಿಂದ ಸಮೀಕ್ಷೆ ಪ್ರಾರಂಭಕ್ಕೆ ಸ್ವಲ್ಪ ವಿಳಂಬವಾಗಬಹುದು," ಎಂದು ಹಿಂದೂ ಪರ ವಕೀಲ ಸುಧೀರ್ ತ್ರಿಪಾಠಿ ಹೇಳಿದ್ದಾರೆ.

ಈ ಪ್ರಕರಣದಲ್ಲಿ ಹಿಂದೂ ಪರ ವಾದ ಮಂಡಿಸಿದ ಮತ್ತೋರ್ವ ವಕೀಲ ಸುಭಾಷ್ ನಂದನ್ ಚತುರ್ವೇದಿ ಮಾತನಾಡಿ,'ಎಎಸ್‌ಐ ವ್ಯವಸ್ಥಿತವಾಗಿ ಮತ್ತು ವೈಜ್ಞಾನಿಕವಾಗಿ ಸಮೀಕ್ಷೆ ನಡೆಸುತ್ತಿದೆ. ಮಾಪನ ಕೆಲಸ ಮಾಡಲಾಗುತ್ತಿದೆ. ಇದಕ್ಕೆಲ್ಲ ಸ್ವಲ್ಪ ಸಮಯ ತೆಗೆದುಕೊಳ್ಳುತ್ತದೆ. ಸಂಪೂರ್ಣ ಸಮೀಕ್ಷೆಯ ಬಳಿಕವೇ ನ್ಯಾಯಾಲಯಕ್ಕೆ ವರದಿ ಸಲ್ಲಿಸುತ್ತೇವೆ ಎಂದು ಅವರು ಹೇಳಿದರು.

’’ಮುಸ್ಲಿಂ ಸಮಿತಿ ಕಡೆಯವರು ನ್ಯಾಯಾಲಯದ ಆದೇಶವನ್ನು ಅನುಸರಿಸಿದ್ದಾರೆ. ಮತ್ತು ಇದೇ ವೇಳೆ ಸಮೀಕ್ಷೆಗೆ ಸಂಪೂರ್ಣವಾಗಿ ಸಹಕಾರ ನೀಡುತ್ತಿದ್ದಾರೆ ಎಂದರು. “ಎಎಸ್‌ಐ ತನ್ನ ಕೆಲಸವನ್ನು ಸರಾಗವಾಗಿ ಮಾಡುತ್ತಿದೆ. ಅದಕ್ಕೆ ಯಾವುದೇ ಅಡ್ಡಿ ಆತಂಕಗಳು ಎದುರಾಗಿಲ್ಲ ಎಲ್ಲರ ಸಹಕಾರದೊಂದಿಗೆ ಸಮೀಕ್ಷೆ ಮುಂದವರೆದಿದೆ. ಎಲ್ಲ ಲಭ್ಯ ಆಧುನಿಕ ತಂತ್ರಗಳನ್ನು ಬಳಸಿ ಸಮೀಕ್ಷಾ ಕಾರ್ಯವನ್ನು ಮಾಡಲಾಗುತ್ತಿದೆ. ಮುಂದೆಯೂ ನ್ಯಾಯಾಲಯದ ಆದೇಶದಂತೆ ಕೆಲಸ ಮುಂದುವರಿಯಲಿದೆ ಎಂದು ಹಿಂದೂ ಪರ ವಕೀಲ ವಿಷ್ಣು ಶಂಕರ್ ಜೈನ್ ಹೇಳಿದ್ದಾರೆ. ವಾರಾಣಸಿಯಲ್ಲಿ ಭಾನುವಾರ ಸಮೀಕ್ಷೆಯ ಬಗ್ಗೆ ಅವರು ಮಾತನಾಡಿದರು.

ಮಸೀದಿ ಆವರಣದಲ್ಲಿ ಎಲ್ಲ ರೀತಿಯಲ್ಲೂ ತಪಾಸಣೆ ನಡೆಸಿ, ಸಮೀಕ್ಷೆಯನ್ನು ಕೈಗೊಳ್ಳಲಾಗಿದೆ ಎಂದು ವಕೀಲ ಸುಭಾಷ್ ನಂದನ್ ಚತುರ್ವೇದಿ ಹೇಳಿದ್ದಾರೆ. ಎಎಸ್‌ಐ ತನ್ನ ಕೆಲಸವನ್ನು ಸರಾಗವಾಗಿ ಮಾಡುತ್ತಿದೆ. ಅವರು ತಮ್ಮ ಅಗತ್ಯ ವಿಶ್ಲೇಷಣೆಗಳನ್ನು ಮಾಡುತ್ತಿದ್ದಾರೆ. ಮಸೀದಿಯ ಆವರಣದ ಮುಂದಿನ ಸಮೀಕ್ಷೆಯನ್ನು ನಡೆಸಲಾಗುತ್ತಿದೆ. ಎಲ್ಲ ಗೋರಿಗಳ ಛಾಯಾಗ್ರಹಣ, ಅಳತೆ ಮತ್ತು ಮ್ಯಾಪಿಂಗ್ ಮಾಡಲಾಗಿದೆ. ಇಡೀ ಕ್ಯಾಂಪಸ್‌ನಲ್ಲಿ ಅಧ್ಯಯನ ನಡೆಸಲಾಗುತ್ತಿದೆ. ಈ ಅಧ್ಯಯನಕ್ಕೆ ಜಿಡಿಪಿಆರ್ ಯಂತ್ರಗಳನ್ನು ಬಳಸಲಾಗಿದೆ ಎಂದು ಚತುರ್ವೇದಿ ಮಾಹಿತಿ ನೀಡಿದರು.

ಇದನ್ನು ಓದಿ: ಜ್ಞಾನವಾಪಿ ಮಸೀದಿ ವೈಜ್ಞಾನಿಕ ಸಮೀಕ್ಷೆ: ಎರಡನೇ ದಿನವೂ ಮುಂದುವರೆದ ಸರ್ವೆ ಕಾರ್ಯ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.