ETV Bharat / bharat

ನಿಮಗೆ ಬೇಕಾದುದನ್ನು ಮಾಡಲು ನಾವು ಕೋಳಿ ಮರಿಗಳಲ್ಲ: ಕಿಶನ್ ರೆಡ್ಡಿ ಬುಲ್ಡೋಜರ್ ಹೇಳಿಕೆಗೆ ಓವೈಸಿ ತಿರುಗೇಟು - ತೆಲಂಗಾಣ ಬಿಜೆಪಿ ಅಧ್ಯಕ್ಷ ಜಿ ಕಿಶನ್ ರೆಡ್ಡಿ

ಬಿಜೆಪಿ ನಾಯಕ ಮತ್ತು ಕೇಂದ್ರ ಸಚಿವ ಜಿ ಕಿಶನ್ ರೆಡ್ಡಿಯ 'ಬಿಜೆಪಿ ಬುಲ್ಡೋಜರ್ ಸರ್ಕಾರ' ಹೇಳಿಕೆಗೆ ಹೈದರಾಬಾದ್ ಸಂಸದ ಅಸಾದುದ್ದೀನ್ ಓವೈಸಿ ತಿರುಗೇಟು ನೀಡಿದ್ದಾರೆ.

Asaduddin Owaisi
ಅಸಾದುದ್ದೀನ್ ಓವೈಸಿ
author img

By ANI

Published : Nov 18, 2023, 2:06 PM IST

ಹೈದರಾಬಾದ್: ತೆಲಂಗಾಣ ಬಿಜೆಪಿ ಅಧ್ಯಕ್ಷ ಮತ್ತು ಕೇಂದ್ರ ಸಚಿವ ಜಿ ಕಿಶನ್ ರೆಡ್ಡಿ ಅವರ "ಬುಲ್ಡೋಜರ್ ಸರ್ಕಾರ" ಹೇಳಿಕೆಗೆ ಆಲ್ ಇಂಡಿಯಾ ಮಜ್ಲಿಸ್- ಎ- ಇತ್ತೆಹಾದುಲ್ ಮುಸ್ಲಿಮೀನ್ ಮುಖ್ಯಸ್ಥ ಅಸಾದುದ್ದೀನ್ ಓವೈಸಿ ಶುಕ್ರವಾರ ತಿರುಗೇಟು ನೀಡಿದ್ದಾರೆ.

''ಈ ಬಾರಿಯ ತೆಲಂಗಾಣ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ಬುಲ್ಡೋಜರ್ ಸರ್ಕಾರ ಬರಲಿದೆ. ಈ ಸರ್ಕಾರವು ರಾಜ್ಯದಲ್ಲಿ ಚಾಲ್ತಿಯಲ್ಲಿರುವ ಅಪರಾಧ ಕೃತ್ಯಗಳನ್ನು ಮಟ್ಟ ಹಾಕಲಿದೆ'' ಎಂದು ರೆಡ್ಡಿ ಬುಧವಾರ ಹೇಳಿದ್ದರು. "ರಾಜ್ಯದಲ್ಲಿ ಅಕ್ರಮ ವಾಣಿಜ್ಯ ಸಂಕೀರ್ಣಗಳು ಮತ್ತು ಮದುವೆ ಮಂಟಪಗಳನ್ನು ನಿರ್ಮಿಸಲಾಗಿದೆ. ಈ ಜಮೀನು ಬಡ ಮುಸ್ಲಿಮರಿಗೆ ಸೇರಿದೆ. ತೆಲಂಗಾಣದಲ್ಲಿ ಬಿಜೆಪಿಯ ಬುಲ್ಡೋಜರ್ ಸರ್ಕಾರ ಅಧಿಕಾರಕ್ಕೆ ಬರಲಿದೆ. ಯೋಗಿ ಆದಿತ್ಯನಾಥ್ ನೇತೃತ್ವದ ಉತ್ತರ ಪ್ರದೇಶ ಸರ್ಕಾರದ ಮಾದರಿಯಲ್ಲಿಯೇ ಅಪರಾಧಿಗಳು ಮತ್ತು ರೌಡಿಗಳ ವಿರುದ್ಧ ಕ್ರಮ ಕೈಗೊಳ್ಳಲಾಗುವುದು'' ಎಂದು ರೆಡ್ಡಿ ಹೈದರಾಬಾದ್‌ನಲ್ಲಿ ಮಾಧ್ಯದವರೊಂದಿಗೆ ಮಾತನಾಡಿದ್ದರು.

ಬಿಜೆಪಿ ನಾಯಕ ರೆಡ್ಡಿ ಹೇಳಿಕೆಗೆ ಕಿಡಿ: ಬಿಜೆಪಿ ನಾಯಕ ರೆಡ್ಡಿ ಹೇಳಿಕೆಗೆ ಪ್ರತಿಕ್ರಿಯಿಸಿದ ಓವೈಸಿ, ''ತೆಲಂಗಾಣದಲ್ಲಿ ಬಿಜೆಪಿ ಅಧ್ಯಕ್ಷರು ಹಳೇ ನಗರದಲ್ಲಿನ ನಿವಾಸಗಳನ್ನು ಬುಲ್ಡೋಜರ್‌ಗಳಿಂದ ಕೆಡವುತ್ತೇವೆ ಎಂದು ಹೇಳುತ್ತಾರೆ. ಕಿಶನ್ ರೆಡ್ಡಿ ನೆನಪಿನಲ್ಲಿ ಇಟ್ಟುಕೊಳ್ಳಿ, ನಾವು ಹಾಗೆ ಸುಮ್ಮನೆ ಕುಳಿತಿಲ್ಲ. ನೀವು ಏನು ಬೇಕಾದರೂ ಮಾಡಲು ನಾವೇನು ಕೋಳಿ ಮರಿಗಳು ಅಲ್ಲ'' ಎಂದು ಕಿಡಿಕಾರಿದರು.

ಕಾಂಗ್ರೆಸ್ ವಿರುದ್ಧ ಓವೈಸಿ ಆರೋಪ: ''ಕಾಂಗ್ರೆಸ್ ಪಕ್ಷವು ತನ್ನ ಭರವಸೆಗಳನ್ನು ಈಡೇರಿಸದ ಇತಿಹಾಸವನ್ನು ಹೊಂದಿದೆ. ಹಳೆಯ ಪಕ್ಷವು ಜನರಿಗೆ ತುಂಬಾ ದ್ರೋಹ ಮಾಡುತ್ತಿದೆ'' ಎಂದು ಓವೈಸಿ ಗಂಭೀರ ಆರೋಪಿಸಿದರು.

''ಇದು ಚುನಾವಣಾ ಕಾಲ, ಅವರಿಗಿಷ್ಟ ಬಂದಂತೆ ಭರವಸೆಗಳನ್ನು ನೀಡುತ್ತಿದ್ದಾರೆ. ಅವೆಲ್ಲ ಯೋಜನೆ ಜಾರಿಯಾಗುತ್ತದೋ ಇಲ್ಲವೋ ಎಂಬುದು ಬೇರೆ ವಿಚಾರ. ಕರ್ನಾಟಕದಲ್ಲಿ ನೋಡಿ, ಭರವಸೆ ನೀಡಿದ ನಂತರ ಬಡ ಮಕ್ಕಳ ಸ್ಕಾಲರ್‌ಶಿಪ್‌ ಅನ್ನು ಕಡಿತಗೊಳಿಸಲಾಗಿದೆ. ರೈತರಿಗೆ ಸಮರ್ಪಕ ವಿದ್ಯುತ್​ ಸೌಲಭ್ಯ ನೀಡುತ್ತಿಲ್ಲ. ಕಾಂಗ್ರೆಸ್‌ ಪಕ್ಷ ನೀಡಿದ ಭರವಸೆಗಳು ಎಂದಿಗೂ ಈಡೇರುವುದಿಲ್ಲ. ಕಾಂಗ್ರೆಸ್​ನವರು ಜನರನ್ನು ಮೋಸ ಮಾಡಲು ಭರವಸೆ ನೀಡುತ್ತಾರೆ. ಇದರಿಂದ ಅವರ ಇತಿಹಾಸ ಏನು ಎಂಬುದು ತಿಳಿಯುತ್ತದೆ'' ಎಂದು ಸಂಸದ ಓವೈಸಿ ವಾಗ್ದಾಳಿ ನಡೆಸಿದ್ದಾರೆ.

ತೆಲಂಗಾಣದಲ್ಲಿ ನವೆಂಬರ್ 30 ರಂದು ವಿಧಾನಸಭಾ ಚುನಾವಣೆ ನಡೆಯಲಿದೆ. ಡಿಸೆಂಬರ್ 3 ರಂದು ಮತ ಎಣಿಕೆ ನಡೆಯಲಿದೆ. ರಾಜ್ಯವು ಬಿಜೆಪಿ, ಬಿಆರ್‌ಎಸ್ ಮತ್ತು ಕಾಂಗ್ರೆಸ್ ನಡುವೆ ತ್ರಿಕೋನ ಸ್ಪರ್ಧೆ ಏರ್ಪಟ್ಟಿದೆ.

ಇದನ್ನೂ ಓದಿ: ವೈದ್ಯಕೀಯ ಪವಾಡ: ಗರ್ಭದಲ್ಲೇ ಅವಳಿ ಮಕ್ಕಳ ಮೊದಲ ಭ್ರೂಣ ಸಾವು, 125 ದಿನದ ಬಳಿಕ ಜನಿಸಿದ ಎರಡನೇ ಶಿಶು

ETV Bharat Logo

Copyright © 2025 Ushodaya Enterprises Pvt. Ltd., All Rights Reserved.