ETV Bharat / bharat

ವಿಶ್ವಕ್ಕೆ ಸಹಾಯ ಮಾಡಿದ ಭಾರತದ ನೆರವಿಗೆ ನಿಲ್ಲುವುದು ನಮ್ಮೆಲ್ಲರ ಕರ್ತವ್ಯ; ಪ್ರಿನ್ಸ್​ ಚಾರ್ಲ್ಸ್​

author img

By

Published : Apr 28, 2021, 9:06 PM IST

"ಭಾರತೀಯ ಸಮುದಾಯದ ಜನತೆಯ ಬೆಂಬಲದೊಂದಿಗೆ ಭಾರತದ ಸಹಾಯಕ್ಕಾಗಿ ಬ್ರಿಟಿಷ್ ಏಶಿಯನ್ ಟ್ರಸ್ಟ್​ ತುರ್ತು ನೆರವನ್ನು ಬೇಡುತ್ತಿದೆ. ಅನೇಕ ಜನರು, ಸಂಘ-ಸಂಸ್ಥೆಗಳು, ವ್ಯಾಪಾರೋದ್ಯಮಿಗಳು, ಟ್ರಸ್ಟ್​ಗಳು ಈ ಕೆಲಸದಲ್ಲಿ ಈಗಾಗಲೇ ನಮಗೆ ಕೈಜೋಡಿಸಿದ್ದಾರೆ. ನೆರವಿನ ಅತಿ ಅಗತ್ಯವಿರುವ ಭಾರತಕ್ಕೆ ನಾವು ಸಾಕಷ್ಟು ಸಹಾಯ ಮಾಡಲು ಸಾಧ್ಯವಾಗಲಿದೆ ಎಂದು ನಾವು ನಿರೀಕ್ಷಿಸುತ್ತೇವೆ." ಎಂದು ಪ್ರಿನ್ಸ್​ ತಿಳಿಸಿದ್ದಾರೆ.

As India helped others, so must we in their time of need, says Prince Charles in COVID-aid appeal
ವಿಶ್ವಕ್ಕೆ ಸಹಾಯ ಮಾಡಿದ ಭಾರತದ ನೆರವಿಗೆ ನಿಲ್ಲುವುದು ನಮ್ಮೆಲ್ಲರ ಕರ್ತವ್ಯ; ಪ್ರಿನ್ಸ್​ ಚಾರ್ಲ್ಸ್​

ಲಂಡನ್: ಅತಿ ಭೀಕರವಾದ ಕೋವಿಡ್​-19 ಎರಡನೇ ಅಲೆಗೆ ನಲುಗುತ್ತಿರುವ ಭಾರತದ ಬೆಂಬಲಕ್ಕೆ ನಿಲ್ಲುವಂತೆ ತನ್ನ ದೇಶದ ಜನತೆಗೆ ಬ್ರಿಟನ್ ಯುವರಾಜ ಪ್ರಿನ್ಸ್​ ಚಾರ್ಲ್ಸ್​ ಭಾವುಕವಾದ ಮನವಿ ಮಾಡಿದ್ದಾರೆ.

ಬ್ರಿಟಿಷ್​ ಸಾಮ್ರಾಜ್ಯದ ಕುಡಿಯಾದ 72 ವರ್ಷದ ಪ್ರಿನ್ಸ್​ ಚಾರ್ಲ್ಸ್​ ಭಾರತಕ್ಕೆ ತಾವು ಹಲವಾರು ಬಾರಿ ಭೇಟಿ ನೀಡಿದ್ದನ್ನು ಸ್ಮರಿಸಿದ್ದು, ಭಾರತದೆಡೆಗಿನ ತಮ್ಮ ಅಪಾರವಾದ ಪ್ರೀತಿಯನ್ನು ವ್ಯಕ್ತಪಡಿಸಿದ್ದಾರೆ. ಕೋವಿಡ್​ ನಿಂದ ಬಳಲುತ್ತಿರುವ ಭಾರತೀಯರ ಉತ್ತಮ ಆರೋಗ್ಯಕ್ಕಾಗಿ ನಾನು ಪ್ರಾರ್ಥಿಸುತ್ತೇನೆ ಎಂದು ಅವರು ಹೇಳಿದ್ದಾರೆ.

"ಕಳೆದ ಸುಮಾರು ಒಂದು ವರ್ಷದಿಂದ ಜಗತ್ತಿನ ಹಲವಾರು ರಾಷ್ಟ್ರಗಳಲ್ಲಿ ಕೋವಿಡ್​ ಅಲ್ಲೋಲ ಕಲ್ಲೋಲ ಸೃಷ್ಟಿಸಿದೆ. ಆದರೆ ಈ ವಾರ ಭಾರತದಲ್ಲಿನ ಕೋವಿಡ್​ ಭೀಕರತೆಯ ದೃಶ್ಯಗಳನ್ನು ನೋಡಿ ನನಗೆ ಆಘಾತವಾಗಿದೆ." ಎಂದು ಪ್ರಿನ್ಸ್​ ಹೇಳಿದ್ದಾರೆ ಎಂದು ಕ್ಲಾರೆನ್ಸ್​ ಹೌಸ್​ ಬಿಡುಗಡೆ ಮಾಡಿದ ಹೇಳಿಕೆಯಲ್ಲಿ ತಿಳಿಸಲಾಗಿದೆ.

"ಭಾರತೀಯ ಸಮುದಾಯದ ಜನತೆಯ ಬೆಂಬಲದೊಂದಿಗೆ ಭಾರತದ ಸಹಾಯಕ್ಕಾಗಿ ಬ್ರಿಟಿಷ್ ಏಶಿಯನ್ ಟ್ರಸ್ಟ್​ ತುರ್ತು ನೆರವನ್ನು ಬೇಡುತ್ತಿದೆ. ಅನೇಕ ಜನರು, ಸಂಘ-ಸಂಸ್ಥೆಗಳು, ವ್ಯಾಪಾರೋದ್ಯಮಿಗಳು, ಟ್ರಸ್ಟ್​ಗಳು ಈ ಕೆಲಸದಲ್ಲಿ ಈಗಾಗಲೇ ನಮಗೆ ಕೈಜೋಡಿಸಿದ್ದಾರೆ. ನೆರವಿನ ಅತಿ ಅಗತ್ಯವಿರುವ ಭಾರತಕ್ಕೆ ನಾವು ಸಾಕಷ್ಟು ಸಹಾಯ ಮಾಡಲು ಸಾಧ್ಯವಾಗಲಿದೆ ಎಂದು ನಾವು ನಿರೀಕ್ಷಿಸುತ್ತೇವೆ." ಎಂದು ಪ್ರಿನ್ಸ್​ ತಿಳಿಸಿದ್ದಾರೆ.

ಇತರ ಅನೇಕರಂತೆ ನಾನೂ ಸಹ ಭಾರತದೆಡೆಗೆ ಅಪಾರವಾದ ಪ್ರೀತಿಯನ್ನು ಹೊಂದಿದ್ದೇನೆ. ಭಾರತಕ್ಕೆ ನೀಡಿದ ಪ್ರತಿಯೊಂದು ಭೇಟಿಯನ್ನೂ ನಾನು ಆಸ್ವಾದಿಸಿದ್ದೇನೆ. ಕೋವಿಡ್​ ಸಮಯದಲ್ಲಿ ಭಾರತವು ಇತರ ಅನೇಕ ರಾಷ್ಟ್ರಗಳಿಗೆ ಸಹಾಯ ಮಾಡಿದೆ. ಆದರೆ ಈಗ ನಾವೆಲ್ಲ ಭಾರತದ ಸಹಾಯಕ್ಕೆ ನಿಲ್ಲುವ ಸಮಯ ಬಂದೊದಗಿದ್ದು, ಈ ಹೋರಾಟವನ್ನೂ ನಾವು ಗೆಲ್ಲಲಿದ್ದೇವೆ ಎಂದು ಚಾರ್ಲ್ಸ್​ ಆಶಾವಾದ ವ್ಯಕ್ತಪಡಿಸಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.