ETV Bharat / bharat

ಮೋದಿ ಬಳಿಕ ಸೋನಿಯಾ ಗಾಂಧಿ ಪ್ರಧಾನಿ: ಅರವಿಂದ್​ ಕೇಜ್ರಿವಾಲ್ ಹೊಸ ಬಾಂಬ್​

ಗುಜರಾತ್​ ವಿಧಾನಸಭೆ ಚುನಾವಣೆಯ ಸಮೀಪಿಸುತ್ತಿರುವ ಹಿನ್ನೆಲೆಯಲ್ಲಿ ಭರ್ಜರಿ ಪ್ರಚಾರ ನಡೆಸುತ್ತಿರುವ ದೆಹಲಿ ಸಿಎಂ, ಆಪ್​ ನಾಯಕ ಅರವಿಂದ್ ಕೇಜ್ರಿವಾಲ್​ ಬಿಜೆಪಿ ಮತ್ತು ಕಾಂಗ್ರೆಸ್​ ವಿರುದ್ಧ ಟೀಕಾ ಪ್ರಹಾರ ನಡೆಸುತ್ತಿದ್ದಾರೆ.

arvind-kejriwal
ಅರವಿಂದ್​ ಕೇಜ್ರಿವಾಲ್ ಹೊಸ ಬಾಂಬ್​
author img

By

Published : Sep 13, 2022, 5:37 PM IST

ಅಹ್ಮದಾಬಾದ್​(ಗುಜರಾತ್​): ಪ್ರಧಾನಿ ನರೇಂದ್ರ ಮೋದಿ ಅವರ ಬಳಿಕ ಸೋನಿಯಾ ಗಾಂಧಿ ಅವರನ್ನು ಪ್ರಧಾನಿ ಅಭ್ಯರ್ಥಿಯನ್ನಾಗಿ ಮಾಡಲು ಬಿಜೆಪಿ ಬಯಸಿದೆ ಎಂದು ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಹೇಳಿಕೆ ನೀಡಿದ್ದಾರೆ. ಗುಜರಾತ್​ ವಿಧಾನಸಭೆ ಚುನಾವಣೆಯ ಸಮೀಪಿಸುತ್ತಿರುವ ಹಿನ್ನೆಲೆಯಲ್ಲಿ ಪ್ರಚಾರ ಕಾರ್ಯ ಚುರುಕುಗೊಳಿಸಿರುವ ದೆಹಲಿ ಸಿಎಂ ಬಿಜೆಪಿ ಮತ್ತು ಕಾಂಗ್ರೆಸ್​ ವಿರುದ್ಧ ತೀವ್ರ ಟೀಕೆ ನಡೆಸುತ್ತಿದ್ದಾರೆ.

ಚುನಾವಣಾ ಪ್ರಚಾರದ ಭಾಗವಾಗಿ ಗುಜರಾತ್​ನ ಕೆಲ ಮನೆಗಳಿಗೆ ಭೇಟಿ ನೀಡಿದ ಕೇಜ್ರಿವಾಲ್​ ಜನರೊಂದಿಗೆ ಬೆರೆತು, ಅವರೊಂದಿಗೆ ಊಟ ಮಾಡಿದರು. ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿ, ನಾನು ಗುಜರಾತ್​ನಲ್ಲಿ ಕೆಲ ಕ್ಷೇತ್ರಗಳಿಗೆ ಭೇಟಿ ನೀಡಿದ್ದೇನೆ. ಆ ಭಾಗದ ಯಾವೊಬ್ಬ ಶಾಸಕರೂ ಕೂಡ ನನ್ನ ಹಾಗೆ ಮತ ಕೇಳಲು ಬರುವುದಿಲ್ಲ. ಇದು ಬಿಜೆಪಿಗರ ದುರಹಂಕಾರವನ್ನು ತೋರಿಸುತ್ತದೆ ಎಂದು ಟೀಕಿಸಿದರು.

ಬಿಜೆಪಿಯಲ್ಲಿ ದುರಹಂಕಾರದ ಜನರೇ ತುಂಬಿಕೊಂಡಿದ್ದಾರೆ. ಅವರಿಗೇಕೆ ನೀವು ಮತ ನೀಡಬೇಕು. ಅವರಂತೆ ನಾನು ದುರಹಂಕಾರಿಯಲ್ಲ. ನಾನು ಸಾಮಾನ್ಯ ಮನುಷ್ಯ. ಜನರ ನಡುವೆ ಬದುಕುತ್ತಿದ್ದೇವೆ. ನಾನು ಒಬ್ಬ ರಿಕ್ಷಾ ಡ್ರೈವರ್‌ನ ಮನೆಯಲ್ಲಿ ಊಟ ಮಾಡಿದ್ದೆ. ಆತನ ಸಂಕಷ್ಟಗಳನ್ನು ಅರಿಯಬಲ್ಲೆ. ಇದು ಬಿಜೆಪಿಗರಿಂದ ಸಾಧ್ಯವಿಲ್ಲ ಎಂದರು.

ಮೋದಿ ಬಳಿಕ ಸೋನಿಯಾ ಪ್ರಧಾನಿ: ಪ್ರಧಾನಿ ನರೇಂದ್ರ ಮೋದಿ ಅವರ ನಂತರ ಸೋನಿಯಾ ಗಾಂಧಿ ಅವರನ್ನು ಪ್ರಧಾನಿ ಅಭ್ಯರ್ಥಿಯನ್ನಾಗಿ ಮಾಡಲು ಬಿಜೆಪಿಯೇ ಯೋಜಿಸಿದೆ ಎಂಬ ಮಾತುಗಳು ಕೇಳಿ ಬರುತ್ತಿವೆ. ಬಿಜೆಪಿಗರೇ ಈ ಬಗ್ಗೆ ಹೇಳಿದ್ದಾರೆ. ಅವರನ್ನೂ ಈ ಬಗ್ಗೆ ಪ್ರಶ್ನಿಸಿ ನೋಡಿ ಎಂದು ಪತ್ರಕರ್ತರಿಗೇ ಮರು ಪ್ರಶ್ನೆ ಹಾಕಿದರು.

ಬಿಜೆಪಿಗರನ್ನು ಪ್ರಶ್ನಿಸಿ: ಮೋದಿಜಿ ನಂತರ ಸೋನಿಯಾ ಗಾಂಧಿ ಪ್ರಧಾನಿ ಅಭ್ಯರ್ಥಿ ಎಂಬ ಆರೋಪದ ಬಗ್ಗೆ ಪತ್ರಕರ್ತರ ಪ್ರಶ್ನೆಗಳಿಗೆ ಸಿಡಿಮಿಡಿಯಾದ ದೆಹಲಿ ಸಿಎಂ ಕೇಜ್ರಿವಾಲ್​, ನೀವು ಬಿಜೆಪಿ ಸಭೆಗೆ ಹೋದಾಗ ಈ ಪ್ರಶ್ನೆಗಳನ್ನು ಅವರ ಬಳಿಯೇ ಕೇಳಿ ತಿಳಿದುಕೊಳ್ಳಿ ಎಂದರು.

ಓದಿ: ಸರ್ಕಾರ ಕೆಡವಲು ಬಿಜೆಪಿಯಿಂದ ₹1375 ಕೋಟಿ ಆಫರ್​: ಪಂಜಾಬ್​ ಸಚಿವ ಗಂಭೀರ ಆರೋಪ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.