ನವದಹೆಲಿ : ಡಿಸೆಂಬರ್ 9ರಂದು ದೆಹಲಿಯ ರೋಹಿಣಿ ಕೋರ್ಟ್ನಲ್ಲಿ ಸಂಭವಿಸಿದ ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧಿಯಾಗಿದ್ದ ಡಿಆರ್‌ಡಿಒ (DRDO) ವಿಜ್ಞಾನಿ ಆತ್ಮಹತ್ಯೆಗೆ ಯತ್ನಿಸಿದ್ದು, ಆತನನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ ಎಂದು ಮೂಲಗಳು ತಿಳಿಸಿವೆ.
ಭರತ್ ಭೂಷಣ್ ಕಟಾರಿಯಾ ಎಂಬ ಡಿಆರ್‌ಡಿಒ ವಿಜ್ಞಾನಿಯನ್ನು ದೆಹಲಿಯ ಪೊಲೀಸ್ನ ವಿಶೇಷ ವಿಭಾಗ ಬಂಧಿಸಿದ್ದು, ಪೊಲೀಸ್ ಕಸ್ಟಡಿಯಲ್ಲಿದ್ದಾಗಲೇ ಆತ ವಿಷಕಾರಿ ಪದಾರ್ಥವೊಂದನ್ನು ಸೇವಿಸಿದ್ದಾನೆ.
ಆತನನ್ನು ದೆಹಲಿಯ ಏಮ್ಸ್ಗೆ ರವಾನಿಸಿ, ಚಿಕಿತ್ಸೆ ನೀಡಲಾಗುತ್ತಿದೆ ಎಂದು ಮೂಲಗಳು ಮಾಹಿತಿ ನೀಡಿವೆ. ಆದರೆ, ಈವರೆಗೂ ಅಧಿಕೃತ ಮಾಹಿತಿ ಹೊರ ಬಿದ್ದಿಲ್ಲ.
ಡಿಸೆಂಬರ್ 9ರಂದು ನಡೆದ ರೋಹಿಣಿ ಕೋರ್ಟ್ ಸ್ಫೋಟದಲ್ಲಿ ನಾಲ್ವರು ಗಾಯಗೊಂಡಿದ್ದರು. ವಕೀಲನೊಬ್ಬನೊಂದಿಗೆ ಜಗಳವಾಡಿದ್ದ ಡಿಆರ್‌ಡಿಒ ವಿಜ್ಞಾನಿ ತಾವೇ ಬಾಂಬ್ ತಯಾರಿಸಿ, ಅದನ್ನು ಕೋರ್ಟ್ನ 102ನೇ ನಂಬರ್ನ ಕೊಠಡಿಯಲ್ಲಿ ಇರಿಸಿದ್ದನು ಎಂದು ನಂತರ ತಿಳಿದು ಬಂದಿತ್ತು.
ಇದನ್ನೂ ಓದಿ: Jammu Terrorists : ಅಪರಿಚಿತರಿಂದ ಪುಲ್ವಾಮಾದಲ್ಲಿ ಗುಂಡಿನ ದಾಳಿ, ಪೊಲೀಸ್ಗೆ ಗಾಯ