ETV Bharat / bharat

ಸಿಬಿಐ ಸೋಗಿನಲ್ಲಿ ದರೋಡೆ ಮಾಡಿದ್ದ ಐವರು ಆರೋಪಿಗಳು ಅಂದರ್​.. 1 ಕೋಟಿ ರೂ. ಒಡಿಶಾ ಪೊಲೀಸರ ವಶ - ದರೋಡೆ ಪ್ರಕರಣ

Odisha police bust gang of robbers:ಸಿಬಿಐ ಅಧಿಕಾರಿಯಂತೆ ಮನೆಗೆ ಬಂದು ದರೋಡೆ ನಡೆಸಿದ್ದ ಆರೋಪಿಗಳಲ್ಲಿ 5 ಮಂದಿಯನ್ನು ಒಡಿಶಾ ಪೊಲೀಸರು ಬಂಧಿಸಿದ್ದಾರೆ.

ದರೋಡೆ
ದರೋಡೆ
author img

By ETV Bharat Karnataka Team

Published : Aug 28, 2023, 9:05 AM IST

ಭುವನೇಶ್ವರ(ಒಡಿಶಾ): ನಗರದಲ್ಲಿ ಒಡಿಶಾ ಪೊಲೀಸರು ಭರ್ಜರಿ ಭೇಟೆಯಾಡಿ 1.2 ಕೋಟಿ ರೂಪಾಯಿಗಳನ್ನು ವಶಪಡಿಸಿಕೊಂಡಿದ್ದಾರೆ. ಒಡಿಶಾದ ರಾಜಧಾನಿ ನಗರದಲ್ಲಿ ಪೊಲೀಸರು, ಸಿಬಿಐ ಅಧಿಕಾರಿಯಂತೆ ಸೋಗು ಹಾಕಿ ದರೋಡೆ ಮಾಡಿದ್ದ ಪಂಚ​ ದರೋಡೆಕೋರರನ್ನು ಬಂಧಿಸಿದ್ದಾರೆ.

ಈ ಕುರಿತು, ಉಪ ಪೊಲೀಸ್ ಆಯುಕ್ತ (ಡಿಸಿಪಿ) ಭುವನೇಶ್ವರ್ ಪ್ರತೀಕ್ ಸಿಂಗ್ ಮಾಹಿತಿ ನೀಡಿದ್ದಾರೆ. ಅವರ ನೀಡಿರುವ ಹೇಳಿಕೆ ಪ್ರಕಾರ, ಆಗಸ್ಟ್ 2 ರಂದು ಭುವನೇಶ್ವರದಲ್ಲಿರುವ ಮನೆಯೊಂದರ ಮೇಲೆ ದಾಳಿ ನಡೆಸಿದ ಪೊಲೀಸರು ಗ್ಯಾಂಗ್​ ದರೋಡೆಗೆ ಸಂಬಂಧಿಸಿ ಐವರನ್ನು ಭಾನುವಾರ ಬಂಧಿಸಿದ್ದಾರೆ. ಈ ಐವರು ಆರೋಪಿಗಳು ಸಿಬಿಐ ಏಜೆಂಟರಂತೆ ನಟಿಸಿ ಬಂದೂಕು ತೋರಿಸಿ ಹಣ ದೋಚಿದ್ದರು. ಆರೋಪಿಗಳನ್ನು ಹೇಮಂತ ಕುಮಾರ್ ಧೀರ್ (32), ಸನಾತನ್ ನಹಕ್ ಅಕಾ ಸನಾ (42), ಅರ್ಬಾಜ್ ಖಾನ್ ಅಕಾ ಬಿಟು (22), ಸಂಜಯ ಮಲ್ಲಿಕ್ ಅಕಾ ಕಾಲಿಯಾ (36) ಮತ್ತು ರಾಜಾ ಅಕಾ ಅಜ್ಮೀರ್ ಅಲ್ಲಿ (48) ಎಂದು ಗುರುತಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಇನ್ನು ದರೋಡೆ ಪ್ರಕರಣದ ಬಗ್ಗೆ ಮಾಹಿತಿ ನೀಡಿದ ಡಿಸಿಪಿ ಪ್ರತೀಕ್ ಸಿಂಗ್, ಆಗಸ್ಟ್ 2 ರಂದು ದೂರುದಾರ ಮತ್ತು ಅವರ ಮಗ ಮನೆಯಲ್ಲಿದ್ದರು, ರಾತ್ರಿ 8 ಗಂಟೆ ಸುಮಾರಿಗೆ ಅಧಿಕಾರಿಗಳಂತೆ ಉಡುಪು ಧರಿಸಿದ್ದ ಐವರು ಮನೆ ಬಾಗಿಲ ಬಳಿ ಬಂದರು. ಬಳಿಕ ಐವರು ಆರೋಪಿಗಳು ತಮ್ಮನ್ನು ಸಿಬಿಐ ಅಧಿಕಾರಿಗಳು ಎಂದು ಗುರುತಿಸಿಕೊಂಡರು. ಮನೆಯೊಳಗೆ ಪ್ರವೇಶಿಸಲು ನಕಲಿ ನ್ಯಾಯಾಲಯದ ಆದೇಶವನ್ನು ಹೊರತೆಗೆದು ತೋರಿಸಿದರು. ಮನೆ ಒಳಗೆ ಬಂದ ತಕ್ಷಣ ಆರೋಪಿಗಳು ತಂದೆ ಮತ್ತು ಮಗನ ಕೈಗಳನ್ನು ಕಟ್ಟಿ ಬಾಯಿಯನ್ನು ಬಿಗಿಗೊಳಿಸಿದರು. ನಂತರ ಮನೆಯಿಂದ ಸುಮಾರು 1.7 ಕೋಟಿ ರೂಪಾಯಿ ನಗದು ಮತ್ತು ಕೆಲವು ಚಿನ್ನಾಭರಣಗಳನ್ನು ದೋಚಿಕೊಂಡು ಹೋಗಿದ್ದಾರೆ ಎಂದು ಡಿಸಿಪಿ ಪ್ರತೀಕ್ ಸಿಂಗ್ ತಿಳಿಸಿದ್ದಾರೆ.

ಮರುದಿನ ಬೆಳಗ್ಗೆ (ಆಗಸ್ಟ್ 3) ದೂರು ಸ್ವೀಕರಿಸಿದ ಪೊಲೀಸರು ಪ್ರಕರಣವನ್ನು ಭೇದಿಸಲು ವಿಶೇಷ ತಂಡ ರಚಿಸಿದ್ದರು. ವಿಶೇಷ ದಳ ಮತ್ತು ಇನ್ಫೋಸಿಟಿ ಪೊಲೀಸರು ಜಂಟಿಯಾಗಿ ಕಳ್ಳರ ಪತ್ತೆಗೆ ಕಾರ್ಯನಿರ್ವಹಿಸಿದರು. ದರೋಡೆಯಾದ ಮನೆಯಲ್ಲಿ ತಪಾಸಣೆ ನಡೆಸಿದಾಗ ಮನೆಯಲ್ಲಿ ಚಾಲಕನಾಗಿ ಕೆಲಸ ಮಾಡುತ್ತಿದ್ದ ವ್ಯಕ್ತಿಯ ಬ್ಯಾಗ್ ಪತ್ತೆಯಾಗಿದೆ. ಆದರೆ, ಚಾಲಕ ಪರಾರಿಯಾಗಿದ್ದು, ಪೊಲೀಸರು ಆತನ ಮೊಬೈಲ್ ಫೋನ್ ದಾಖಲೆಗಳನ್ನು ಹುಡುಕಿ ಕೆಲವು ಶಂಕಿತರನ್ನು ಬಂಧಿಸಿದ್ದಾರೆ.

ದೀರ್ಘ ವಿಚಾರಣೆಯ ನಂತರ, ಪೊಲೀಸರು ಆರೋಪಿಗಳ ವಿರುದ್ಧ ಸಾಕ್ಷ್ಯಧಾರಗಳನ್ನು ಪಡೆದು ಮತ್ತು ಇವರ ಕಾರ್ಯವೈಖರಿಯ ಬಗ್ಗೆ ತಿಳಿದುಕೊಂಡರು. ಇನ್ನು ಪರಾರಿಯಾಗಿರುವ ಚಾಲಕನಿಗೆ ದೂರುದಾರರ ಮನೆಯಲ್ಲಿ ಅಪಾರ ಪ್ರಮಾಣದ ನಗದು ಚಿನ್ನಾಭರಣ ಇರುವುದು ತಿಳಿದಿತ್ತು. ಮನೆ ದರೋಡೆಗೆ ಸಂಚು ರೂಪಿಸಿ ತನ್ನ ಸಹಚರರನ್ನು ಸಂಪರ್ಕಿಸಿದ್ದ. ದರೋಡೆಯಲ್ಲಿ 9 ಜನರು ಭಾಗಿಯಾಗಿದ್ದರೆ, ಅವರಲ್ಲಿ ಐವರು (ಚಾಲಕನನ್ನು ಹೊರತುಪಡಿಸಿ) ದೂರುದಾರರ ಮನೆಗೆ ಪ್ರವೇಶಿಸಿದ್ದಾರೆ ಎಂದು ಡಿಸಿಪಿ ಹೇಳಿದ್ದಾರೆ. ಚಾಲಕ ಸೇರಿದಂತೆ ನಾಲ್ವರು ಆರೋಪಿಗಳಿಗೆ ತನಿಖೆ ನಡೆಸುತ್ತಿದ್ದೇವೆ. ಅವರಿಂದ ದರೋಡೆಯಾಗಿರುವ ಹಣ ವಸೂಲಿ ಮಾಡುವ ಪ್ರಯತ್ನ ನಡೆಯುತ್ತಿದೆ ಎಂದು ಡಿಸಿಪಿ ಸಿಂಗ್ ಹೇಳಿದ್ದಾರೆ. (ANI)

ಇದನ್ನೂ ಓದಿ: ಚಾಕು ತೋರಿಸಿ ದರೋಡೆ: ಆರೋಪಿಗಳನ್ನು ಹಿಡಿದು, ಥಳಿಸಿ ಪೊಲೀಸರಿಗೆ ಒಪ್ಪಿಸಿದ ಸ್ಥಳೀಯರು

ETV Bharat Logo

Copyright © 2025 Ushodaya Enterprises Pvt. Ltd., All Rights Reserved.