ETV Bharat / bharat

ಶಿಕ್ಷಕರ ನೇಮಕಾತಿ ಹಗರಣ ಆರೋಪಿ, ನಟಿ ಅರ್ಪಿತಾ ಮುಖರ್ಜಿಗೆ ಒಂಟಿತನದ ಕಾಟವಂತೆ! - ETV bharat kannada news

ಪಶ್ಚಿಮ ಬಂಗಾಳ ಶಿಕ್ಷಕರ ನೇಮಕಾತಿ ಹಗರಣದಲ್ಲಿ ಆರೋಪಿಯಾಗಿ ಜೈಲು ಪಾಲಾಗಿರುವ ನಟಿ ಅರ್ಪಿತಾಗೆ ಜೈಲಿನಲ್ಲಿ ಒಂಟಿತನ ಕಾಡುತ್ತಿದೆಯಂತೆ. ತಾಯಿ ಒಮ್ಮೆಯೂ ನೋಡಲು ಬಾರದಿರುವುದು ಆಕೆಯನ್ನು ಮಾನಸಿಕವಾಗಿ ಕುಗ್ಗಿಸಿದೆ.

arpita-mukherjee
ಶಿಕ್ಷಕರ ನೇಮಕಾತಿ ಹಗರಣ ಆರೋಪಿ
author img

By

Published : Sep 3, 2022, 7:57 PM IST

ಕೋಲ್ಕತ್ತಾ: ಶಿಕ್ಷಕರ ನೇಮಕಾತಿಯಲ್ಲಿ ಹಗರಣ ನಡೆಸಿ ಜೈಲು ಪಾಲಾಗಿರುವ ಪಶ್ಚಿಮ ಬಂಗಾಳದ ಮಾಜಿ ಶಿಕ್ಷಣ ಸಚಿವ ಪಾರ್ಥ ಚಟರ್ಜಿ ಅವರ ಪರಮಾಪ್ತೆ, ನಟಿ ಅರ್ಪಿತಾ ಮುಖರ್ಜಿಗೆ ಜೈಲಿನಲ್ಲಿ ಒಂಟಿತನ ಕಾಡುತ್ತಿದೆಯಂತೆ. ನಾಲ್ಕು ಗೋಡೆಗಳ ನಡುವಿನ ಏಕತಾನತೆ ಅವರನ್ನು ಮಾನಸಿಕವಾಗಿ ಕುಗ್ಗಿಸಿದೆ. ಇದರಿಂದ ನಟಿ ಅನಾರೋಗ್ಯಕ್ಕೀಡಾಗುತ್ತಿದ್ದಾರೆ ಎಂದು ಜಾರಿ ನಿರ್ದೇಶನಾಲಯದ ಮೂಲಗಳು ತಿಳಿಸಿವೆ.

ಶಾಲಾ ಶಿಕ್ಷಕರ ನೇಮಕಾತಿ ಹಗರಣದಲ್ಲಿ ಮಾಜಿ ಶಿಕ್ಷಣ ಸಚಿವ ಪಾರ್ಥ ಚಟರ್ಜಿ ಅವರನ್ನು ಜಾರಿ ನಿರ್ದೇಶನಾಲಯ ಬಂಧಿಸಿದೆ. ಅಲ್ಲದೇ, ಅವರ ಆಪ್ತೆ ಅರ್ಪಿತಾ ಮುಖರ್ಜಿ ಮನೆಯಲ್ಲಿ ಕೋಟ್ಯಂತರ ರೂಪಾಯಿ ಹಣ ಸಿಕ್ಕಿದ್ದು, ಅವರನ್ನೂ ಇಡಿ ವಶಕ್ಕೆ ಪಡೆದಿದೆ. ಅರ್ಪಿತಾರನ್ನು ನ್ಯಾಯಾಂಗ ಬಂಧನಕ್ಕೆ ನೀಡಲಾಗಿದ್ದು, ಅಂದಿನಿಂದ ನಟಿ ಅಲಿಪೋರ್ ಮಹಿಳಾ ಸಾಂತ್ವನ ಕೇಂದ್ರದಲ್ಲಿದ್ದಾರೆ.

ಆರಂಭದಲ್ಲಿ ಅರ್ಪಿತಾ ಅವರನ್ನು ಭೇಟಿಯಾಗಲು ಆಕೆಯ ಸ್ನೇಹಿತರು ಸಾಂತ್ವನ ಕೇಂದ್ರಕ್ಕೆ ಬರುತ್ತಿದ್ದರು. ಬಳಿಕ ಅವರೂ ಕೂಡ ಭೇಟಿ ತಪ್ಪಿಸಿದ್ದು, ಇದರಿಂದ ಅರ್ಪಿತಾ ತನ್ನೆಲ್ಲಾ ಸಮಯವನ್ನು ಜೈಲಿನಲ್ಲಿ ಏಕಾಂಗಿಯಾಗಿ ಕಳೆಯಬೇಕಾಗಿದೆ.

ಅರ್ಪಿತಾಗೆ ಒಗ್ಗಿದ ಜೈಲೂಟ: ಮೊದಮೊದಲು ಆರೋಪಿ ಅರ್ಪಿತಾ ಜೈಲು ಊಟದ ಬಗ್ಗೆ ತಗಾದೆ ತೆಗೆಯುತ್ತಿದ್ದಳು. ಹೊರಗಡೆಯಿಂದ ಊಟ ನೀಡಲು ಬೇಡಿಕೆ ಇಡುತ್ತಿದ್ದಳು. ಇದಕ್ಕೆ ಅನುಮತಿ ಇಲ್ಲದ ಕಾರಣ ಜೈಲಿನ ಊಟಕ್ಕೆ ಆಕೆ ಈಗ ಒಗ್ಗಿಕೊಂಡಿದ್ದಾಳಂತೆ.

ಮಗಳಿಂದ ತಾಯಿ ದೂರ: ಇನ್ನು ಅರ್ಪಿತಾರನ್ನು ಇನ್ನಷ್ಟು ನೋಯಿಸಿದ ಸಂಗತಿ ಅಂದರೆ, ಅವರ ತಾಯಿ ಒಮ್ಮೆಯೂ ಅವರನ್ನು ಭೇಟಿ ಮಾಡಲು ಬಾರದಿರುವುದು. ಜೈಲು ಸೇರಿದ ಬಳಿಕ ಅರ್ಪಿತಾರ ತಾಯಿ ಈವರೆಗೂ ಮಾತನಾಡಿಸಲು ಬಂದಿಲ್ಲ. ಇದು ಆಕೆಯನ್ನು ಇನ್ನಷ್ಟು ಕಂಗೆಡಿಸಿದೆ. ವಕೀಲರ ಮೂಲಕ ತಾಯಿಯನ್ನು ಕರೆತರಲು ಹೇಳಿದರೂ ಇದನ್ನು ಅವರ ತಾಯಿ ಒಪ್ಪಿಕೊಳ್ಳುತ್ತಿಲ್ಲ. ಇದರಿಂದ ಒಂಟಿತನ ಅರ್ಪಿತಾ ಮುಖರ್ಜಿಯ ಏಕೈಕ ಸಂಗಾತಿಯಾಗಿ ಉಳಿದಿದೆ.

ಓದಿ: ಕಾಂಗ್ರೆಸ್​ನ ವಿಧಾನಸಭಾ ಟಿಕೆಟ್​ ಕೇಳಿದ​ ಅದೇ ಪಕ್ಷದ ಕಚೇರಿಯಲ್ಲಿ ಚಹಾ ಮಾರುತ್ತಿರುವ ವ್ಯಕ್ತಿ!

ETV Bharat Logo

Copyright © 2024 Ushodaya Enterprises Pvt. Ltd., All Rights Reserved.