ಜೈಪುರ (ರಾಜಸ್ಥಾನ): 'ಘನತೆಯ ಜೀವನಕ್ಕಾಗಿ ವೃತ್ತಿ ತರಬೇತಿ' ಯೋಜನೆಯಡಿ ಜೈಪುರದ ವಿವಿಧ ಪ್ರದೇಶಗಳಲ್ಲಿದ್ದ 60 ಭಿಕ್ಷುಕರಿಗೆ ರಾಜಸ್ಥಾನ ಸರ್ಕಾರವು ಉದ್ಯೋಗ ಒದಗಿಸಿದೆ. ಈ ಮೂಲಕ ಯಾರೋ ನೀಡುವ ಭಿಕ್ಷೆ ನಂಬಿಕೊಂಡು ಬದುಕುತ್ತಿದ್ದವರು ಹೊಸ ಜೀವನಕ್ಕೆ ಕಾಲಿಟ್ಟಿದ್ದಾರೆ.
ರಾಜಸ್ಥಾನವನ್ನು ಭಿಕ್ಷುಕರಿಂದ ಮುಕ್ತಗೊಳಿಸುವುದು ಮತ್ತು ಅವರಿಗೆ ಹೊಸ ಜೀವನವನ್ನು ಒದಗಿಸುವುದು ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಅವರ ಕನಸಾಗಿದೆ. ಇದಕ್ಕಾಗಿ ರಾಜಸ್ಥಾನ ಕೌಶಲ್ಯ ಮತ್ತು ಜೀವನೋಪಾಯ ಅಭಿವೃದ್ಧಿ ನಿಗಮ (RSLDC) ಜಾರಿಗೆ ತಂದಿದ್ದ ಒಂದು ವರ್ಷದ ತರಬೇತಿ ಕಾರ್ಯಾಗಾರದಲ್ಲಿ ವಿವಿಧ ಪ್ರದೇಶಗಳ ಭಿಕ್ಷುಕರಿಗೆ ತರಬೇತಿ ನೀಡಲಾಗಿತ್ತು.
ಇದನ್ನೂ ಓದಿ: 15 ವರ್ಷ ವಯಸ್ಸು ಮೇಲ್ಪಟ್ಟ ಪತ್ನಿಯೊಂದಿಗಿನ ಲೈಂಗಿಕ ಕ್ರಿಯೆ ಅತ್ಯಾಚಾರವಲ್ಲ: ಅಲಹಾಬಾದ್ ಹೈಕೋರ್ಟ್
ಆರಂಭದಲ್ಲಿ ಅವರನ್ನು ಮಾನಸಿಕವಾಗಿ ತಯಾರು ಮಾಡಲು ಮತ್ತು ಗಳಿಸಲು ಏನನ್ನಾದರೂ ಕಲಿಯುವಂತೆ ಪ್ರೇರೇಪಿಸಲು 15-20 ದಿನಗಳನ್ನು ತೆಗೆದುಕೊಂಡಿದ್ದೆವು ಎಂದು ನಿಗಮದ ಅಧ್ಯಕ್ಷ ನೀರಜ್ ಕೆ. ಪವನ್ ಹೇಳಿದ್ದಾರೆ.
ಜೈಪುರದ ರೆಡ್ ಪೆಪ್ಪರ್ಸ್ ಎಂಬ ರೆಸ್ಟೋರೆಂಟ್‌ನಲ್ಲಿ 12 ಮಂದಿಗೆ ಕೆಲಸ ನೀಡಲಾಗಿದ್ದು, ಮೊದಮೊದಲು ಇವರಿಗೆ ತರಬೇತಿ ನೀಡಿವುದು ಬಹಳ ಕಷ್ಟಕರವಾಗಿತ್ತು. ಆದರೆ ಸ್ವಲ್ಪ ಸಮಯದ ಬಳಿಕ ಅವರು ಸುಧಾರಿಸಿದರು. ಇದೀಗ ಅವರೆಲ್ಲರೂ ಸಂತೋಷವಾಗಿದ್ದಾರೆ. ಭವಿಷ್ಯದಲ್ಲಿ ಇಂತಹ ಹೆಚ್ಚಿನ ಉದ್ಯೋಗಿಗಳನ್ನು ನಮ್ಮ ರೆಸ್ಟೋರೆಂಟ್‌ನಲ್ಲಿ ಇರಿಸಿಕೊಳ್ಳಲು ನಾನು ಬಯಸುತ್ತೇನೆ ಎಂದು ರೆಸ್ಟೋರೆಂಟ್ ಮಾಲೀಕ ರಾಜೀವ್ ಕಂಪಾನಿ ಹೇಳುತ್ತಾರೆ.