ಕೋವಿಡ್ ಸಾಂಕ್ರಾಮಿಕ ರೋಗದಿಂದಾಗಿ ಎರಡು ವರ್ಷಗಳ ವಿರಾಮದ ನಂತರ ಜೂನ್ 30ರಿಂದ ವಾರ್ಷಿಕ ಅಮರನಾಥ ಯಾತ್ರೆ ಪ್ರಾರಂಭವಾಗಿದೆ. ನಿನ್ನೆ ಜಮ್ಮು ಮತ್ತು ಕಾಶ್ಮೀರದ ಬ್ರಾರಿಮಾರ್ಗ್ ಬಳಿ ಭಾರಿ ಭೂಕುಸಿತ ಸಂಭವಿಸಿತ್ತು. ಇದರಿಂದ ಹಾನಿಗೊಳಗಾದ ಎರಡು ಸೇತುವೆಗಳನ್ನು ಸೇನೆಯು ಅತ್ಯಂತ ತ್ವರಿತವಾಗಿ ಮರುನಿರ್ಮಾಣ ಮಾಡಿದೆ.
"ಜುಲೈ 01ರಂದು ಬಾಲ್ಟಾಲ್ ಆಕ್ಸಿಸ್‌ನಲ್ಲಿನ ಬ್ರಾರಿಮಾರ್ಗ್ ಬಳಿ 02 ಸೇತುವೆಗಳು ಭೂಕುಸಿತದಿಂದ ಹಾನಿಗೊಳಗಾಗಿದ್ದವು. ಸೇನೆಯು ರಾತ್ರಿಯಿಡೀ ಕಾರ್ಯನಿರ್ವಹಿಸಿ ಸೇತುವೆಗಳನ್ನು ಪುನರ್ ನಿರ್ಮಿಸಿದೆ. ಇದರಿಂದ ಅಮರನಾಥ ಯಾತ್ರಿಕರು ನಾಲ್ಕು ಗಂಟೆಗಳ ಕಾಲ ಹೆಚ್ಚು ಸುತ್ತು ಹಾಕುವುದನ್ನು ತಪ್ಪಿಸಿ, ಸುಲಭ ಮಾಡಿಕೊಡಲಾಗಿದೆ" ಎಂದು ಸೇನಾಧಿಕಾರಿಗಳು ತಿಳಿಸಿದ್ದಾರೆ.
-
"#Chinarwarriors to the Rescue - #AmarnathYatra."
— Chinar Corps🍁 - Indian Army (@ChinarcorpsIA) July 2, 2022 " class="align-text-top noRightClick twitterSection" data="
On 01 Jul, 02 bridges near Brarimarg on #Baltal Axis were damaged by landslides. #ChinarCorps mobilised assets & reconstructed the bridges overnight for resumption of route & avoiding an over 4 hour detour by #Yatris.@adgpi https://t.co/AwdxMAyKSs pic.twitter.com/DUQnjWAHTG
">"#Chinarwarriors to the Rescue - #AmarnathYatra."
— Chinar Corps🍁 - Indian Army (@ChinarcorpsIA) July 2, 2022
On 01 Jul, 02 bridges near Brarimarg on #Baltal Axis were damaged by landslides. #ChinarCorps mobilised assets & reconstructed the bridges overnight for resumption of route & avoiding an over 4 hour detour by #Yatris.@adgpi https://t.co/AwdxMAyKSs pic.twitter.com/DUQnjWAHTG"#Chinarwarriors to the Rescue - #AmarnathYatra."
— Chinar Corps🍁 - Indian Army (@ChinarcorpsIA) July 2, 2022
On 01 Jul, 02 bridges near Brarimarg on #Baltal Axis were damaged by landslides. #ChinarCorps mobilised assets & reconstructed the bridges overnight for resumption of route & avoiding an over 4 hour detour by #Yatris.@adgpi https://t.co/AwdxMAyKSs pic.twitter.com/DUQnjWAHTG
ಅಮರನಾಥ ಯಾತ್ರೆ ಪ್ರಾರಂಭವಾಗಿರುವ ಹಿನ್ನೆಲೆಯಲ್ಲಿ ಕಟ್ಟುನಿಟ್ಟಿನ ಭದ್ರತಾ ವ್ಯವಸ್ಥೆಯನ್ನು ಕೈಗೊಳ್ಳಲಾಗಿದೆ. ಯಾತ್ರೆಯನ್ನು ಶಾಂತಿಯುತವಾಗಿ ನಡೆಸಲು, ಕಾನೂನು ಸುವ್ಯವಸ್ಥೆಗೆ ಧಕ್ಕೆಯಾಗದಂತೆ ನೋಡಿಕೊಳ್ಳಲು ಮತ್ತು ಬಾಂಬ್ ಬೆದರಿಕೆ ಎದುರಿಸಲು ಸಿಆರ್ಪಿಎಫ್ ಯೋಧರು ತೀವ್ರ ಕಟ್ಟೆಚ್ಚರ ವಹಿಸಿದ್ದಾರೆ. ಇದಕ್ಕೆ ಬೇಕಾದ ಸೂಕ್ತ ಕ್ರಮಗಳನ್ನೂ ಕೈಗೊಳ್ಳಲಾಗಿದೆ.
ಇದನ್ನೂ ಓದಿ: ಅಮರನಾಥ ಯಾತ್ರೆ: ಜಮ್ಮು ಬೇಸ್ ಕ್ಯಾಂಪ್ ತಲುಪಿದ ಭಕ್ತರ ತಂಡಕ್ಕೆ ಹಸಿರು ನಿಶಾನೆ ತೋರಿದ ಮನೋಜ್ ಸಿನ್ಹಾ