ETV Bharat / bharat

ಹೆಲಿಕಾಪ್ಟರ್ ಅಪಘಾತದಲ್ಲಿ CDS ರಾವತ್ ಸೇರಿ 13 ಜನ ಸಾವು: ಯುಎಸ್, ರಷ್ಯಾ, ಪಾಕ್ ಇತರೆಡೆಗಳಿಂದ ಸಂತಾಪ - ಜನರಲ್ ಬಿಪಿನ್ ರಾವತ್

ತಮಿಳುನಾಡಿನ ನೀಲಗಿರಿಯ ಕುನೂರಿನಲ್ಲಿ ಸಂಭವಿಸಿದ ಹೆಲಿಕಾಪ್ಟರ್ ಅಪಘಾತದ ಬಗ್ಗೆ ಅಮೆರಿಕ, ರಷ್ಯಾ, ನೇಪಾಳ ಮತ್ತು ಪಾಕಿಸ್ತಾನ ಸೇರಿದಂತೆ ವಿವಿಧ ದೇಶಗಳು ದುಃಖ ವ್ಯಕ್ತಪಡಿಸಿವೆ.

Army helicopter crash
ಹೆಲಿಕಾಪ್ಟರ್ ಅಪಘಾತ
author img

By

Published : Dec 9, 2021, 4:57 AM IST

Updated : Dec 9, 2021, 5:41 AM IST

ಚೆನ್ನೈ: ಭಾರತದ ಮೊದಲ ರಕ್ಷಣಾ ಪಡೆ ಮುಖ್ಯಸ್ಥ ಜನರಲ್ ಬಿಪಿನ್ ರಾವತ್ ಸೇರಿದಂತೆ 13 ಮಂದಿ ತಮಿಳುನಾಡಿನ ನೀಲಗಿರಿಯ ಕುನೂರಿನಲ್ಲಿ ಸಂಭವಿಸಿದ ಹೆಲಿಕಾಪ್ಟರ್ ಅಪಘಾತದಲ್ಲಿ ಸಾವನ್ನಪ್ಪಿದ್ದಾರೆ. ದುರಂತಕ್ಕೆ ಅಮೆರಿಕ, ರಷ್ಯಾ ಮತ್ತು ಪಾಕಿಸ್ತಾನ ಸೇರಿದಂತೆ ವಿವಿಧ ದೇಶಗಳಿಂದ ಸಂತಾಪ ವ್ಯಕ್ತವಾಗಿದೆ.

ಯುಎಸ್ ರಾಯಭಾರ ಕಚೇರಿಯು ಹೆಲಿಕಾಪ್ಟರ್ ಅಪಘಾತದಲ್ಲಿ ಸಾವನ್ನಪ್ಪಿದವರ ಕುಟುಂಬಗಳಿಗೆ ತೀವ್ರ ಸಂತಾಪವನ್ನು ವ್ಯಕ್ತಪಡಿಸಿದೆ. ಭಾರತದ ಮೊದಲ ಸಿಡಿಎಸ್ ಆಗಿ ಜನರಲ್ ರಾವತ್ ಭಾರತೀಯ ಸೇನೆಯಲ್ಲಿ ಐತಿಹಾಸಿಕ ಪರಿವರ್ತನೆಗೆ ಕಾರಣರಾಗಿದ್ದರು. ಅಲ್ಲದೆ ಅವರು ಅಮೆರಿಕದ ಉತ್ತಮ ಸ್ನೇಹಿತ ಮತ್ತು ಪಾಲುದಾರರಾಗಿದ್ದರು. ಯುಎಸ್ ಸೇನೆಯೊಂದಿಗೆ ಭಾರತದ ರಕ್ಷಣಾ ಸಹಕಾರದ ವಿಸ್ತರಣೆಯ ಪ್ರಮುಖ ಮೇಲ್ವಿಚಾರಣೆ ನೋಡಿಕೊಳ್ಳುತ್ತಿದ್ದರು ಎಂದು ಹೇಳಿದೆ.

ರಾವತ್ ಅವರ ಕುಟುಂಬಕ್ಕೆ ಮತ್ತು ಅಪಘಾತದಲ್ಲಿ ಮೃತರಾದ ಇತರರ ಕುಟುಂಬಗಳಿಗೂ ಕೂಡ ನಮ್ಮ ಕಡೆಯಿಂದ ತೀವ್ರ ಸಂತಾಪವಿದೆ. ರಾವತ್ ಅವರು ಅಮೆರಿಕ ಹಾಗೂ ಭಾರತ ರಕ್ಷಣಾ ಪಾಲುದಾರಿಕೆಯಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ ಎಂದು ಯುಎಸ್ ರಕ್ಷಣಾ ಕಾರ್ಯದರ್ಶಿ ಲಾಯ್ಡ್ ಜೆ ಆಸ್ಟಿನ್ ಹೇಳಿದ್ದಾರೆ. ಅಲ್ಲದೆ ಯುಎಸ್​​ ಚೇರ್ಮನ್ ಆಫ್ ಸ್ಟಾಫ್ ಜಂಟಿ ಮುಖ್ಯಸ್ಥ ಜನರಲ್ ಮಾರ್ಕ್ ಮಿಲ್ಲಿ ಅವರು, ಹೆಲಿಕಾಪ್ಟರ್​ ಅಪಘಾತದಲ್ಲಿ ಮಡಿದ ಸಿಡಿಎಸ್ ಜನರಲ್ ಬಿಪಿನ್ ರಾವತ್ ಮತ್ತು ಇತರರ ಸಾವಿನಿಂದ ನಾವು ತೀವ್ರ ದುಃಖಿತರಾಗಿದ್ದೇವೆ. ರಾವತ್​ ಭಾರತೀಯ ಸೇನೆಯೊಂದಿಗೆ ನಮ್ಮ ಸಂಬಂಧವನ್ನು ಬಲಪಡಿಸಿದ್ದರು ಎಂದು ತಿಳಿಸಿದ್ದಾರೆ.

'ರಷ್ಯಾ ಅತ್ಯಂತ ಆತ್ಮೀಯ ಸ್ನೇಹಿತನನ್ನು ಕಳೆದುಕೊಂಡಿದೆ':

ಸಿಡಿಎಸ್ ರಾವತ್ ಅವರ ನಿಧನದ ಬಗ್ಗೆ ತೀವ್ರ ವಿಷಾದ ವ್ಯಕ್ತಪಡಿಸಿದ ರಷ್ಯಾದ ರಾಯಭಾರಿ ನಿಕೊಲಾಯ್ ಕುಡಾಶೇವ್, ಮಾಸ್ಕೋ "ಅತ್ಯಂತ ಆತ್ಮೀಯ ಸ್ನೇಹಿತನನ್ನು" ಕಳೆದುಕೊಂಡಿದೆ ಎಂದು ಹೇಳಿದ್ದಾರೆ. ಭಾರತ ಮತ್ತು ರಷ್ಯಾ ದ್ವಿಪಕ್ಷೀಯ ವಿಶೇಷ ಮತ್ತು ವ್ಯೂಹಾತ್ಮಕ ಪಾಲುದಾರಿಕೆಯನ್ನು ಉತ್ತೇಜಿಸುವಲ್ಲಿ ರಾವತ್ ಬಹುದೊಡ್ಡ ಪಾತ್ರ ವಹಿಸಿದ್ದಾರೆ ಎಂದು ಟ್ವೀಟ್​ ಮಾಡಿದ್ದಾರೆ. ಹೆಲಿಕಾಪ್ಟರ್ ಅಪಘಾತದಲ್ಲಿ ಜನರಲ್ ಬಿಪಿನ್ ರಾವತ್, ಅವರ ಪತ್ನಿ ಮಧುಲಿಕಾ ರಾವತ್ ಮತ್ತು ಇತರ ಅಧಿಕಾರಿಗಳ ದುಃಖಕರ ನಿಧನದ ಬಗ್ಗೆ ವಿಷಾದ ವ್ಯಕ್ತಪಡಿಸುತ್ತೇವೆ ಎಂದು ಹೇಳಿದ್ದಾರೆ

ಜನರಲ್ ರಾವತ್ ಮತ್ತು ಇತರರ ದುರಂತ ಸಾವಿನ ಬಗ್ಗೆ ಪಾಕಿಸ್ತಾನದ ಉನ್ನತ ಮಿಲಿಟರಿ ಅಧಿಕಾರಿಗಳು ಸಂತಾಪ ವ್ಯಕ್ತಪಡಿಸಿದ್ದಾರೆ. ಪಾಕ್​ ಸೇನೆಯ ಜನರಲ್ ನದೀಮ್ ರಜಾ ಮತ್ತು ಆರ್ಮಿ ಸ್ಟಾಫ್ ಮುಖ್ಯಸ್ಥ (ಸಿಒಎಎಸ್) ಜನರಲ್ ಕಮರ್ ಜಾವೇದ್ ಬಾಜ್ವಾ ಅವರು ಸಂತಾಪ ವ್ಯಕ್ತಪಡಿಸಿದ್ದಾರೆ. ದುರಂತಕ್ಕೆ ನೇಪಾಳ ಪ್ರಧಾನಿ ಶೇರ್ ಬಹದ್ದೂರ್ ದೇವುಬಾ ಸಂತಾಪ ಸೂಚಿಸಿದ್ದಾರೆ.

ಅಲ್ಲದೆ ಕ್ರಿಕೆಟ್​ ದೇವರು ಸಚಿನ್ ತೆಂಡೂಲ್ಕರ್, ಕ್ರಿಕೆಟಿಗರಾದ ವಿರಾಟ್​ ಕೊಹ್ಲಿ, ರೋಹಿತ್​ ಶರ್ಮಾ, ಬಾಲಿವುಡ್​ ತಾರೆಯರು ಸೇರಿದಂತೆ ದೇಶಾದ್ಯಂತ ಹೆಲಿಕಾಪ್ಟರ್​ ದುರಂತದ ಬಗ್ಗೆ ದುಃಖ ವ್ಯಕ್ತವಾಗಿದೆ.

ಇದನ್ನೂ ಓದಿ: ಸೇನಾ ಹೆಲಿಕಾಪ್ಟರ್​​​​ ಪತನ: ಕೇವಲ 27 ವರ್ಷದ ಲ್ಯಾನ್ಸ್​​​​ ನಾಯ್ಕ್ ಸಾಯಿ ತೇಜ್ ವಿಧಿವಶ​!

Last Updated : Dec 9, 2021, 5:41 AM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.