ETV Bharat / bharat

ಕೇರಳದಿಂದ ತಮಿಳುನಾಡಿಗೆ ನುಗ್ಗಿ ಅಟ್ಟಹಾಸ ಮೆರೆಯುತ್ತಿರುವ ಅರಿಕೊಂಬನ್​.. ವಿಡಿಯೋ ವೈರಲ್​!! - ಆನೆಯ ಚಲನವಲನದ ಮೇಲೆ ನಿರಂತರ ನಿಗಾ

ಕೇರಳ ಮತ್ತು ತಮಿಳುನಾಡು ಗಡಿಯಲ್ಲಿ ಅರಿಕೊಂಬನ್​ ಎಂಬ ಆನೆಯ ಉಪಟಳ ಹೆಚ್ಚಾಗಿದ್ದು, ಜನರಿಗೆ ತೊಂದರೆ ಕೊಡುತ್ತಿದೆ. ಈ ಬಗ್ಗೆ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ಸಖತ್​ ವೈರಲ್​ ಆಗುತ್ತಿದೆ.

Ari komban Elephant Invade and try to Attack  Elephant Invade and try to Attack Kambam Pepoles  Ari komban Elephant news  ಅಟ್ಟಹಾಸ ಮೆರೆಯುತ್ತಿರುವ ಅರಿಕೊಂಬನ್  ವಿಡಿಯೋ ಸಖತ್​ ವೈರಲ್  ಕೇರಳದಿಂದ ತಮಿಳುನಾಡಕ್ಕೆ ನುಗ್ಗಿ ಅಟ್ಟಹಾಸ  ಗಡಿಯಲ್ಲಿ ಅರಿಕೊಂಬನ್​ ಎಂಬ ಆನೆಯ ಉಪಟಳ  ಸಾಮಾಜಿಕ ಜಾಲತಾಣದಲ್ಲಿ ಸಖತ್​ ವೈರಲ್  ತಮಿಳುನಾಡಿನಲ್ಲಿ ಕೇರಳದ ಆನೆ ಅಟ್ಟಹಾಸ  ಕಾಡಿಗೆ ಬಿಡುವ ಮುನ್ನ ಕೊರಳಿಗೆ ಜಿಪಿಆರ್‌ಎಸ್‌  ಆನೆಯ ಚಲನವಲನದ ಮೇಲೆ ನಿರಂತರ ನಿಗಾ  ಮೇಘಮಲೈ ಪ್ರದೇಶದ ಚಹಾ ತೋಟದ ಕಾರ್ಮಿಕ
ಕೇರಳದಿಂದ ತಮಿಳುನಾಡಕ್ಕೆ ನುಗ್ಗಿ ಅಟ್ಟಹಾಸ ಮೆರೆಯುತ್ತಿರುವ ಅರಿಕೊಂಬನ್
author img

By

Published : May 27, 2023, 11:31 AM IST

Updated : May 27, 2023, 4:21 PM IST

ಕೇರಳದಿಂದ ತಮಿಳುನಾಡಕ್ಕೆ ನುಗ್ಗಿ ಅಟ್ಟಹಾಸ ಮೆರೆಯುತ್ತಿರುವ ಅರಿಕೊಂಬನ್​

ಥೇಣಿ, ತಮಿಳುನಾಡು: ತಮಿಳುನಾಡಿನಲ್ಲಿ ಕೇರಳದ ಆನೆ ಅಟ್ಟಹಾಸ ಮೆರೆಯುತ್ತಿದೆ. ಕಂಬಂ ಪೇಟೆಯೊಳಗೆ ಅಟ್ಟಹಾಸ ಮೆರೆದಿರುವ ಅರಿ ಕೊಂಬನ್ ಕಾಡಾನೆಯನ್ನು ಸೆರೆ ಹಿಡಿಯಲು ಅರಣ್ಯ ಇಲಾಖೆ ಹರಸಾಹಸ ಪಡುತ್ತಿದೆ. ಅರಿ ಕೊಂಬನ್ ಎಂಬ ಆನೆ ಬೀದಿಗಳಲ್ಲಿ ಸಂಚರಿಸಿ ಸಾರ್ವಜನಿಕರನ್ನು ಓಡಿಸುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಜನರ ಭಯಭೀತಗೊಂಡಿದ್ದಾರೆ.

ಕೇರಳ ರಾಜ್ಯದ ಮುನ್ನಾರ್ ಪ್ರದೇಶದಲ್ಲಿ ಅಟ್ಟಹಾಸ ಮೆರೆದಿದ್ದ ಅರಿ ಕೊಂಬನ್ ಎಂಬ ಆನೆಯನ್ನು ಕೆಲ ದಿನಗಳ ಹಿಂದೆ ಅರಣ್ಯ ಇಲಾಖೆ ಕುಮ್ಕಿ ಆನೆಯ ಸಹಾಯದಿಂದ ಸೆರೆ ಹಿಡಿದಿತ್ತು. ಬಳಿಕ ಅರಿ ಕೊಂಬನ್​​ನನ್ನು ಪೆರಿಯಾರ್ ಹುಲಿ ಅರಣ್ಯಧಾಮಕ್ಕೆ ಕರೆತರಲಾಗಿತ್ತು. ಈ ಪ್ರದೇಶ ತಮಿಳುನಾಡು ಮತ್ತು ಕೇರಳದ ಗಡಿಯಲ್ಲಿದೆ.

ಅರಣ್ಯ ಇಲಾಖೆ ಆನೆಯನ್ನು ಕಾಡಿಗೆ ಬಿಡುವ ಮುನ್ನ ಕೊರಳಿಗೆ ಜಿಪಿಆರ್‌ಎಸ್‌ ಅಳವಡಿಸಿ ಆನೆಯ ಚಲನವಲನದ ಮೇಲೆ ನಿರಂತರ ನಿಗಾ ಇರಿಸಿತ್ತು. ಪೆರಿಯಾರ್ ಅರಣ್ಯಧಾಮದಲ್ಲಿ ಬಿಡಲಾಗಿದ್ದ ಕಾಡು ಆನೆ ಅಲ್ಲಿಂದ ಹಲವು ಕಿಲೋಮೀಟರ್ ದೂರ ತಮಿಳುನಾಡು ಅರಣ್ಯ ಪ್ರದೇಶಕ್ಕೆ ತೆರಳಿದೆ.

Ari komban Elephant Invade and try to Attack  Elephant Invade and try to Attack Kambam Pepoles  Ari komban Elephant news  ಅಟ್ಟಹಾಸ ಮೆರೆಯುತ್ತಿರುವ ಅರಿಕೊಂಬನ್  ವಿಡಿಯೋ ಸಖತ್​ ವೈರಲ್  ಕೇರಳದಿಂದ ತಮಿಳುನಾಡಕ್ಕೆ ನುಗ್ಗಿ ಅಟ್ಟಹಾಸ  ಗಡಿಯಲ್ಲಿ ಅರಿಕೊಂಬನ್​ ಎಂಬ ಆನೆಯ ಉಪಟಳ  ಸಾಮಾಜಿಕ ಜಾಲತಾಣದಲ್ಲಿ ಸಖತ್​ ವೈರಲ್  ತಮಿಳುನಾಡಿನಲ್ಲಿ ಕೇರಳದ ಆನೆ ಅಟ್ಟಹಾಸ  ಕಾಡಿಗೆ ಬಿಡುವ ಮುನ್ನ ಕೊರಳಿಗೆ ಜಿಪಿಆರ್‌ಎಸ್‌  ಆನೆಯ ಚಲನವಲನದ ಮೇಲೆ ನಿರಂತರ ನಿಗಾ  ಮೇಘಮಲೈ ಪ್ರದೇಶದ ಚಹಾ ತೋಟದ ಕಾರ್ಮಿಕ
ಕೇರಳದಿಂದ ತಮಿಳುನಾಡಕ್ಕೆ ನುಗ್ಗಿ ಅಟ್ಟಹಾಸ ಮೆರೆಯುತ್ತಿರುವ ಅರಿಕೊಂಬನ್​

ಮೇಘಮಲೈ ಪ್ರದೇಶದ ಚಹಾ ತೋಟದ ಕಾರ್ಮಿಕರಿಗೆ ಆತಂಕ ಮೂಡಿಸಿದೆ. ಗುಲಾಬಿಯು ಲೋವರ್ ಕ್ಯಾಂಪ್ ಪ್ರದೇಶಕ್ಕೆ ಆನೆ ವಲಸೆ ಬಂದಿತು. ಕೂಡಲೂರು ಬಳಿ ಮಲೆನಾಡಿನ ಖಾಸಗಿ ತೆಂಗಿನ ತೋಟಕ್ಕೆ ನುಗ್ಗಿದ ಆನೆ ಕೃಷಿ ಬೆಳೆಗಳನ್ನು ನಾಶಪಡಿಸಿ ಆಶ್ರಯ ಪಡೆದಿತ್ತು.

ಇದನ್ನು ಕಂಡ ಆ ಭಾಗದ ರೈತರು ಅರಣ್ಯ ಇಲಾಖೆ ಹಾಗೂ ಪೊಲೀಸ್ ಇಲಾಖೆಗೆ ಮಾಹಿತಿ ನೀಡಿದ್ದರು. ಮಾಹಿತಿ ತಿಳಿದ ತಮಿಳುನಾಡು ಮತ್ತು ಕೇರಳ ಅರಣ್ಯ ಇಲಾಖೆ ಹಾಗೂ ಪೊಲೀಸರು ದೌಡಾಯಿಸಿ ಆನೆಗಳು ಓಡಾಡುವ ಪ್ರದೇಶಕ್ಕೆ ಸಾರ್ವಜನಿಕರು ಹಾಗೂ ಟೀ ತೋಟದ ಕಾರ್ಮಿಕರು ಬಾರದೆ ಆದೇಶ ಹೊರಡಿಸಿದ್ದರು. ಅಲ್ಲದೇ ಅಲ್ಲಿ ಕೆಲಸ ಮಾಡುತ್ತಿದ್ದ ಕಾರ್ಮಿಕರನ್ನು ಸ್ಥಳಾಂತರ ಮಾಡಿ ಆನೆಯ ಚಟುವಟಿಕೆಗಳ ಮೇಲೆ ತೀವ್ರ ನಿಗಾ ಇಡಲಾಗಿತ್ತು.

ಅರಿ ಕೊಂಬನ್ ಆನೆ ಏಕಾಏಕಿ ಕೃಷಿ ಗದ್ದೆಗೆ ನುಗ್ಗಿ ಬೇರೆಡೆಗೆ ತೆರಳದೆ ಅಲ್ಲೇ ಉಳಿದುಕೊಂಡಿರುವುದು ರೈತರಲ್ಲಿ ಭಯ ಮೂಡಿಸಿತ್ತು. ತಮಿಳುನಾಡು ಮತ್ತು ಕೇರಳ ರಾಜ್ಯಗಳ ಅರಣ್ಯ ಇಲಾಖೆ ಹಾಗೂ ಪೊಲೀಸರು ತೀವ್ರ ನಿಗಾ ವಹಿಸಿದ್ದು, ಆನೆಯನ್ನು ಕಾಡಿಗೆ ಓಡಿಸಲು ಪ್ರಯತ್ನಿಸುತ್ತಿದ್ದಾರೆ. ಈ ವೇಳೆ ಇಂದು (ಮೇ 27) ಬೆಳಗ್ಗೆ ಅರಿ ಕೊಂಬನ್ ಕಾಡಾನೆಯೊಂದು ಕಂಪಾಂ ನಗರಕ್ಕೆ ನುಗ್ಗಿ ಸಾರ್ವಜನಿಕರನ್ನು ಓಡಿಸಿದೆ. ಪಟ್ಟಣಕ್ಕೆ ನುಗ್ಗಿರುವ ಆನೆಯನ್ನು ಓಡಿಸುವ ಕಾರ್ಯದಲ್ಲಿ ಅರಣ್ಯ ಇಲಾಖೆ ನಿರತವಾಗಿದ್ದರೆ, ಪೊಲೀಸರು ವಾಹನಗಳಲ್ಲಿ ಹಾರ್ನ್ ಹಾಕುವ ಮೂಲಕ ಸಾರ್ವಜನಿಕರು ಮನೆಯಿಂದ ಹೊರಬರದಂತೆ ಎಚ್ಚರಿಕೆ ನೀಡುತ್ತಿದ್ದಾರೆ.

ಪೊಲೀಸರ ಎಚ್ಚರಿಕೆಯನ್ನು ಲೆಕ್ಕಿಸದೆ ರಸ್ತೆಯಲ್ಲಿ ನಿಂತಿದ್ದ ಜನರನ್ನು ಅರಿಕೊಂಬನ್ ಬೆನ್ನಟ್ಟಿದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್​ ಆಗ್ತಿದ್ದು, ಸಂಚಲನ ಮೂಡಿಸುತ್ತಿದೆ. ಕಂಪಾಂ ಪಟ್ಟಣದಲ್ಲಿ ಆನೆ ಓಡಾಡುತ್ತಿರುವ ಬಗ್ಗೆ ಅರಣ್ಯ ಇಲಾಖೆಗೆ ಮಾಹಿತಿ ನೀಡಲಾಗಿದ್ದು, ಅರಣ್ಯ ಇಲಾಖೆ ಆನೆಯನ್ನು ಮತ್ತೆ ಕಾಡಿಗೆ ಓಡಿಸುವ ಪ್ರಯತ್ನ ನಡೆಸುತ್ತಿದೆ.

ಓದಿ: ಅಕ್ಕಿ ಮೇಲೆ ಆಸೆ, ಪಡಿತರ ಅಂಗಡಿ ಮೇಲೆ ದಾಳಿ: ಇಡುಕ್ಕಿಯಲ್ಲಿ ಮಾಲೀಕ, ಸ್ಥಳೀಯರಿಗೆ ಸಂಕಷ್ಟ

Last Updated : May 27, 2023, 4:21 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.