ETV Bharat / bharat

Margadarshi ಚಿಟ್​ಫಂಡ್​ ಪ್ರಕರಣಗಳ ವಾದ-ಪ್ರತಿವಾದ ಪೂರ್ಣ.. ಮಧ್ಯಂತರ ಆದೇಶ ಕಾಯ್ದಿರಿಸಿದ ಆಂಧ್ರಪ್ರದೇಶ ಹೈಕೋರ್ಟ್​ - ಮಾರ್ಗದರ್ಶಿ ಚಿಟ್​​ಫಂಡ್​ ವಿರುದ್ಧದ ಪ್ರಕರಣಗಳ ವಿಚಾರಣೆ

ಮಾರ್ಗದರ್ಶಿ ಚಿಟ್​ಫಂಡ್​ ವಿರುದ್ಧ ಕೇಳಿಬಂದ ಆರೋಪಗಳ ಅರ್ಜಿ ವಿಚಾರಣೆ ಪೂರ್ತಿಗೊಳಿಸಿದ ಆಂಧ್ರಪ್ರದೇಶ ಹೈಕೋರ್ಟ್​ ತೀರ್ಪನ್ನು ಕಾಯ್ದಿರಿಸಿದೆ. ಕಂಪನಿ ಮೇಲಿನ ಇನ್ನೊಂದು ಪ್ರಕರಣವನ್ನು ಇಂದು ವಿಚಾರಣೆ ನಡೆಸಲಿದೆ. ಅದಾದ ಬಳಿಕ ತೀರ್ಪು ಪ್ರಕಟಿಸುವ ಸಾಧ್ಯತೆ ಇದೆ.

ಮಾರ್ಗದರ್ಶಿ ಚಿಟ್​ಫಂಡ್
ಮಾರ್ಗದರ್ಶಿ ಚಿಟ್​ಫಂಡ್
author img

By

Published : Aug 10, 2023, 12:40 PM IST

ಅಮರಾವತಿ: ಮಾರ್ಗದರ್ಶಿ ಚಿಟ್​​ಫಂಡ್​ ವಿರುದ್ಧದ ಪ್ರಕರಣಗಳ ವಿಚಾರಣೆ ನಡೆಸಿದ ಆಂಧ್ರಪ್ರದೇಶ ಹೈಕೋರ್ಟ್​ ಮಧ್ಯಂತರ ತೀರ್ಪನ್ನು ಕಾಯ್ದಿರಿಸಿದೆ. ಅಲ್ಲದೇ ಇದಕ್ಕೆ ಸಂಬಂಧಿಸಿದ ಇನ್ನೊಂದು ಪ್ರಕರಣವನ್ನು ಇಂದು(ಗುರುವಾರ) ವಿಚಾರಣೆಗೆ ಕೈಗೆತ್ತಿಕೊಳ್ಳಲಿದೆ. ಇದಾದ ಬಳಿಕ ಎರಡೂ ಪ್ರಕರಣಗಳ ತೀರ್ಪು ಪ್ರಕಟಿಸಲಾಗುವುದು ಎಂದು ನ್ಯಾಯಪೀಠ ಹೇಳಿದೆ.

ಗುಂಟೂರು ಮತ್ತು ಕೃಷ್ಣಾ ಜಿಲ್ಲೆಗಳ ಚಿಟ್​ಫಂಡ್​ ಗ್ರೂಪ್‌ಗಳಿಗೆ ಸಂಬಂಧಿಸಿದ ಅರ್ಜಿಗಳ ವಾದ- ಪ್ರತಿವಾದಗಳು ಮುಕ್ತಾಯವಾಗಿವೆ. ಮಧ್ಯಂತರ ಆದೇಶದ ತೀರ್ಪನ್ನು ಮುಂದೂಡುತ್ತಿರುವುದಾಗಿ ನ್ಯಾಯಮೂರ್ತಿಗಳು ಪ್ರಕಟಿಸಿದರು. ಪ್ರಕಾಶಂ ಜಿಲ್ಲೆಯ ಚಿಟ್ ಗ್ರೂಪ್‌ಗಳಿಗೆ ಸಂಬಂಧಿಸಿದಂತೆ ದಾಖಲಾಗಿರುವ ಮತ್ತೊಂದು ಮೊಕದ್ದಮೆಯ ವಿಚಾರಣೆಯನ್ನು ಗುರುವಾರ ನಡೆಸಲಿದೆ. ಈ ಅರ್ಜಿಯ ವಿಚಾರಣೆಯ ಬಳಿಕ ಆದೇಶ ನೀಡಲಾಗುವುದು ಎಂದು ನ್ಯಾಯಮೂರ್ತಿ ಎನ್ ಜಯಸೂರ್ಯ ಅವರಿದ್ದ ಪೀಠ ಹೇಳಿದೆ.

ಸರ್ಕಾರದ ಪರವಾಗಿ ವಾದ ಮಂಡಿಸಿದ ಅಡ್ವೋಕೇಟ್​ ಜನರಲ್​ ಶ್ರೀರಾಮ್​ ಅವರು, ಚಿಟ್​ಫಂಡ್​ ಗುಂಪುಗಳಲ್ಲಿ ಅವ್ಯವಹಾರ ಆರೋಪ ಕೇಳಿಬಂದ ಹಿನ್ನೆಲೆಯಲ್ಲಿ ವ್ಯವಹಾರಕ್ಕೆ ತಡೆ ನೀಡಲಾಗಿತ್ತು. ಬಳಿಕ ಆಕ್ಷೇಪಣಾ ಅರ್ಜಿಗಳನ್ನು ಕೋರಲಾಗಿತ್ತು. ಇದರ ಆಧಾರದ ಮೇಲೆ ಸಾರ್ವಜನಿಕ ನೋಟಿಸ್​ ಹೊರಡಿಸಲಾಗಿತ್ತು. ಅಲ್ಲದೇ, ಇಂತಹ ಪ್ರಕರಣದಲ್ಲಿ ಸುಮೋಟೋ ಕೇಸ್​ ದಾಖಲಿಸಿಕೊಂಡು ವಿಚಾರಣೆ ನಡೆಸುವ ಅಧಿಕಾರ ಚಿಟ್​ ರಿಜಿಸ್ಟ್ರಾರ್​ಗೆ ಇದೆ ಎಂದು ವಾದಿಸಿದ್ದರು.

2008 ರಲ್ಲಿ ಹೊರಡಿಸಲಾದ ಅಧಿಸೂಚನೆಯ ಪ್ರಕಾರ, ಸಹಾಯಕ ಮತ್ತು ಉಪ ನೋಂದಣಾಧಿಕಾರಿಗಳಿಗೆ ಇಂತಹ ಅಧಿಕಾರವನ್ನು ನೀಡಲಾಗಿದೆ. ಚಿಟ್‌ಫಂಡ್ ಕಾಯಿದೆಯ ಸೆಕ್ಷನ್ 48(ಎಚ್) ಅಡಿಯಲ್ಲಿ ಉಪ ನೋಂದಣಾಧಿಕಾರಿಯು ಚಿಟ್​ ಗುಂಪುಗಳ ಮೇಲೆ ಕ್ರಮ ಜರುಗಿಸುವ ಸ್ವಯಂಪ್ರೇರಿತ ಅಧಿಕಾರವನ್ನು ಹೊಂದಿರುತ್ತಾರೆ. ಅವರು ನೀಡಿದ ಶೋಕಾಸ್ ನೋಟಿಸ್ ಅನ್ನು ಪ್ರಶ್ನಿಸುವಂತಿಲ್ಲ. ಹೀಗಾಗಿ ಮಧ್ಯಂತರ ಆದೇಶದ ಅಗತ್ಯವಿಲ್ಲ ಎಂದು ಎಜಿ ವಾದಿಸಿದರು.

ಆರೋಪವಿಲ್ಲದಿದ್ದರೆ ವಿಚಾರಣೆ ಯಾಕೆ?: ಮಾರ್ಗದರ್ಶಿ ಚಿಟ್‌ಫಂಡ್ ಕಂಪನಿ ಪರವಾಗಿ ಹಿರಿಯ ವಕೀಲರಾದ ನಾಗಮುತ್ತು ಮತ್ತು ದಮ್ಮಲಪತಿ ಶ್ರೀನಿವಾಸ್ ಅವರು ವಾದ ಮಂಡಿಸಿ, ಸಹಾಯಕ ನೋಂದಣಾಧಿಕಾರಿ ಮತ್ತು ಉಪ ನೋಂದಣಾಧಿಕಾರಿಗಳು ಪ್ರತ್ಯೇಕವಾಗಿ ವಿಚಾರಣೆ ನಡೆಸಬೇಕು. ಸಹಾಯಕ ನೋಂದಣಾಧಿಕಾರಿಗಳು ನಡೆಸಿದ ತನಿಖೆಯಲ್ಲಿ ಉಪ ನೋಂದಣಾಧಿಕಾರಿಗಳು ಕ್ರಮ ಜರುಗಿಸುವುದು ಕಾನೂನು ರೀತ್ಯಾ ಸರಿಯಲ್ಲ. ಇದು ಒಬ್ಬ ಜಡ್ಜ್​​ ವಿಚಾರಣೆ ನಡೆಸಿ, ಇನ್ನೊಬ್ಬ ಜಡ್ಜ್​ ತೀರ್ಪು ನೀಡಿದಂತಾಗುತ್ತದೆ ಎಂದು ವಾದ ಮಂಡಿಸಿದರು.

ಮಾರ್ಗದರ್ಶಿ ಚಿಟ್ ಕಂಪನಿ ವಿರುದ್ಧ ಯಾವುದೇ ಅವ್ಯವಹಾರ ಆರೋಪವಿಲ್ಲ. ಹೀಗಿದ್ದರೂ ಚಿಟ್​ ಗ್ರೂಪ್​ಗಳ ಮೇಲೆ ತಡೆ ನೀಡುವ ಅಧಿಕಾರವಿಲ್ಲ. ಚಿಟ್​ ಗ್ರೂಪ್​ಗಳ ಮೇಲೆ ಆಕ್ಷೇಪಣೆ ಸಲ್ಲಿಸುವ ಗಡುವು ಇದೇ 14ಕ್ಕೆ ಕೊನೆಗೊಳ್ಳುತ್ತಿರುವ ಕಾರಣ ಸರ್ಕಾರ ಹೊರಡಿಸಿರುವ ‘ಸಾರ್ವಜನಿಕ ನೋಟಿಸ್​’ ಅನ್ನು ಅಮಾನತುಗೊಳಿಸುವಂತೆ ಮನವಿ ಮಾಡಲಾಗಿದೆ.

ಇದರ ಆಧಾರದ ಮೇಲೆ ಅಧಿಕಾರಿಗಳು ಮುಂದಿನ ಕ್ರಮ ಕೈಗೊಳ್ಳದಂತೆ ಮಧ್ಯಂತರ ಆದೇಶ ನೀಡಬೇಕೆಂದು ಕೋರಿದರು. ವಾದ- ಪ್ರತಿವಾದ ಆಲಿಸಿದ ಬಳಿಕ ನ್ಯಾಯಮೂರ್ತಿ ನ್ಯಾಯಮೂರ್ತಿ ಎನ್.ಜಯಸೂರ್ಯ ಅವರು ತೀರ್ಪು ಕಾಯ್ದಿರಿಸಿದರು.

ಇದನ್ನೂ ಓದಿ: Margadarsi Chit Fund: ನೋಟಿಸ್​ ಕೊಡದೇ ಹೇಗೆ ಕ್ರಮ ತೆಗೆದುಕೊಳ್ಳುತ್ತೀರಿ?

ETV Bharat Logo

Copyright © 2025 Ushodaya Enterprises Pvt. Ltd., All Rights Reserved.