ETV Bharat / bharat

ಕಣ್ಮನದಲ್ಲಿ ಪ್ರಕೃತಿ ಸೌಂದರ್ಯ ತುಂಬಿಕೊಳ್ಳಲು ಈ ಪ್ರದೇಶಕ್ಕೆ ಭೇಟಿ ಕೊಡಿ...

ಸುಡು ಬಿಸಿಲಿಗೆ ಸುಸ್ತಾಗಿರುವ ಮಂದಿ ಪ್ರಕೃತಿ ನಡುವೆ ಕೊಂಚ ರಿಲ್ಯಾಕ್ಸ್ ಮಾಡೋಣ ಎಂದುಕೊಳ್ಳುತ್ತಿದ್ದಾರೆ. ಹಾಗಾದ್ರೆ ಕೆಲ ಪ್ರವಾಸಿ ತಾಣಗಳ ಮಾಹಿತಿ ಇಲ್ಲಿದೆ ನೋಡಿ..

Monsoon getaways
ಮಾನ್ಸೂನ್ ಪ್ರವಾಸಿ ತಾಣ
author img

By

Published : Jun 14, 2022, 8:44 PM IST

ಜಿಟಿ ಜಿಟಿ ಮಳೆ ಜೊತೆಗೆ ಕೊಂಚ ಚಳಿ. ಮೋಡಗಳ ಕಣ್ಣಾ ಮುಚ್ಚಾಲೆ ಆಟ, ಮನಸಿಗೆ ಹಿತ ನೀಡುವ ತಂಗಾಳಿ, ಹಾಲ್ನೊರೆಯಂತೆ ಹರಿಯುವ ಝರಿಗಳು. ಎಲ್ಲಿ ಕಣ್ಣಾಯಿಸಿದರೂ ಹಚ್ಚ ಹಸಿರು. ದೇವರು ಸೃಷ್ಟಿ ಮಾಡಿರೋ ಪ್ರಕೃತಿ ಸೊಬಗು ಸವಿಯೋದೇ ಒಂದು ಅದ್ಭುತ ಅನುಭವ.

ಮಳೆಗಾಲದಲ್ಲಿ ಅದೆಷ್ಟೋ ಪ್ರದೇಶಗಳು ತನ್ನ ಸೌಂದರ್ಯವನ್ನು ಹೆಚ್ಚಿಸಿಕೊಳ್ಳುತ್ತವೆ. ಪ್ರವಾಸಿಗರ ನೆಚ್ಚಿನ ತಾಣ, ಸಾಹಸಿಗಳ ಹಾಟ್‌ಸ್ಪಾಟ್ ಅಂತಾ ಕರೆಸಿಕೊಳ್ಳುವ ಅನೇಕ ಪ್ರವಾಸಿ ತಾಣಗಳು ಪ್ರವಾಸಿಗರನ್ನು ಕೈಬೀಸಿ ಕರೆಯುತ್ತಿವೆ. ಮಳೆಗಾಲ ಆರಂಭವಾಗಿದೆ. ಜೋರು ಮಳೆಯಿಲ್ಲದಿದ್ದರೂ ತಂಪು ವಾತಾವರಣ ಮನಸ್ಸಿಗೆ ಮುದ ನೀಡುವಂತಿದೆ. ಸುಡು ಬಿಸಿಲಿಗೆ ಸುಸ್ತಾಗಿರುವ ಮಂದಿ ಪ್ರಕೃತಿ ನಡುವೆ ಕೊಂಚ ರಿಲ್ಯಾಕ್ಸ್ ಮಾಡೋಣ ಎಂದುಕೊಳ್ಳುತ್ತಿದ್ದಾರೆ. ಹಾಗಾದ್ರೆ ಕೆಲ ಪ್ರವಾಸಿ ತಾಣಗಳ ಬಗ್ಗೆ ಹೇಳ್ತಿವಿ ನೋಡಿ..

ಮುಂಜೋಹ್ ಐಲ್ಯಾಂಡ್ ಹೌಸ್, ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳು: ತೆಂಗು, ವೀಳ್ಯದೆಲೆ, ಮಾವು, ಆಲದ ಮರಗಳು ಮತ್ತು ಹಲಸಿನ ಮರಗಳಿಂದ ಸುತ್ತುವರಿದ ರೆಸಾರ್ಟ್ ಅನ್ನು ಒಮ್ಮೆ ಕಲ್ಪಿಸಿಕೊಳ್ಳಿ. ಜೊತೆಗೆ ಮೂಲಸೌಕರ್ಯ, ಉತ್ತಮ ಕೊಠಡಿ ವ್ಯವಸ್ಥೆಯಿದ್ದರೆ ಇನ್ನೇನು ಬೇಕು. ಇದು ನೀವು ವಿಹಾರಕ್ಕೆ ಭೇಟಿ ನೀಡಲು ಬಯಸುವ ಸ್ಥಳದಂತೆ ತೋರುತ್ತಿದ್ದರೆ ಮತ್ತಿನ್ನೇಕೆ ಕಾಯುವಿಕೆ. ಮುಂಜೋಹ್ ಐಲ್ಯಾಂಡ್ ಹೌಸ್​ಗೆ ಭೇಟಿ ನೀಡಿ, ಆನಂದಿಸಿ.

ಸ್ಟರ್ಲಿಂಗ್, ಊಟಿ: ಊಟಿಯ ಪರ್ವತ ಶಿಖರಗಳ ನಡುವೆ ನೆಲೆಸಿರುವ ಫರ್ನ್ ಹಿಲ್ ದೂರದ ಪೈನ್ ಪ್ರಕೃತಿಯನ್ನು ಕುಳಿತಲ್ಲಿಂದಲೇ ಆನಂದಿಸಲು ಅವಕಾಶ ಮಾಡಿಕೊಡುತ್ತದೆ. ಇಲ್ಲಿನ ರೆಸಾರ್ಟ್ ಸುತ್ತಲೂ ಗಿಡಮರಗಳು ಆವರಿಸಿದ್ದು ಮನಸ್ಸಿಗೆ ಮುದ ನೀಡುತ್ತವೆ. ಇಲ್ಲಿ ಲೈಬ್ರರಿ, ಆಟವಾಡಲು ವ್ಯವಸ್ಥೆ ಸೇರಿದಂತೆ ನಿಮ್ಮ ದಿನವನ್ನು ನಿಮ್ಮವರೊಂದಿಗೆ ಉತ್ತಮವಾಗಿ ಕಳೆಯಲು ಬೇಕಾಗಿರುವ ವ್ಯವಸ್ಥೆಗಳು ಲಭ್ಯವಿದೆ.

ಸ್ಟೇವಿಸ್ಟಾ, ಲೋನಾವಲಾ: ಸ್ಟೇವಿಸ್ಟಾ ವನ್ನು ವಿವಿಧ ಈವೆಂಟ್‌ಗಳು, ಪಾರ್ಟಿಗಳು ಅಥವಾ ವಿಹಾರಗಳಿಗೆ ಬಾಡಿಗೆಗೆ ಅತ್ಯುತ್ತಮವಾದ ವಿಲ್ಲಾಗಳನ್ನು ನಿಮಗೆ ಒದಗಿಸಲು ಸಮರ್ಪಿಸಲಾಗಿದೆ. ಲೋನಾವಾಲಾ, ಮಹಾಬಲೇಶ್ವರ್, ಮನಾಲಿ, ಗೋವಾ ಮತ್ತು ಇತರ ಹಲವು ಸ್ಥಳಗಳಲ್ಲಿ ಸ್ಟೇವಿಸ್ಟಾ ಲಭ್ಯವಿದೆ.

ಫಝ್ಲಾನಿ ನೇಚರ್ಸ್ ನೆಸ್ಟ್, ಮಹಾರಾಷ್ಟ್ರ: ಮಹಾರಾಷ್ಟ್ರದಲ್ಲಿರುವ ಫಝ್ಲಾನಿ ನೇಚರ್ಸ್ ನೆಸ್ಟ್ ಪ್ರಕೃತಿಯೊಂದಿಗೆ ವಿಶ್ರಾಂತಿ ಪಡೆಯಲು, ಪ್ರಕೃತಿಯೊಂದಿಗೆ ಸಮಯ ಕಳೆಯಲು ಇರುವ ಉತ್ತಮ ಸ್ಥಳವಾಗಿದೆ. ಪ್ರಕೃತಿಚಿಕಿತ್ಸೆ/ನ್ಯಾಚುರೋಪಥಿ, ಆಯುರ್ವೇದ, ಯೋಗ, ಧ್ಯಾನ, ಆಧ್ಯಾತ್ಮಿಕ ಕಾರ್ಯಕ್ರಮಗಳು ಸೇರಿ ಕೆಲ ಚಟುವಟಿಕೆಗಳು ಇಲ್ಲಿ ಲಭ್ಯವಿದೆ. ನೀವು ಪ್ರಕೃತಿಗೆ ಹತ್ತಿರವಾಗಲು ಮತ್ತು ವಿಶ್ರಾಂತಿ ಪಡೆಯಲು ಬಯಸಿದರೆ ಇದು ನಿಮಗಾಗಿಯೇ ಹೇಳಿ ಮಾಡಿಸಿದಂತಹ ಸ್ಥಳವಾಗಿದೆ.

ಕ್ಲಬ್ ಮಹೀಂದ್ರ ಎಮರಾಲ್ಡ್ ಪಾಮ್ಸ್, ಗೋವಾ: ಗೋವಾ ಜನಪ್ರಿಯ ಪ್ರವಾಸಿ ತಾಣವಾಗಿದೆ. ಗೋವಾದ ಪೋರ್ಚುಗೀಸ್ ವಾಸ್ತುಶಿಲ್ಪ ಕಲೆಯಿಂದ ಪ್ರೇರಿತವಾಗಿ ಕ್ಲಬ್ ಮಹೀಂದ್ರಾ ರೆಸಾರ್ಟ್ ಅನ್ನು ರಚಿಸಲಾಗಿದೆ. ಜೀವನದಲ್ಲಿ ಒಮ್ಮೆಯಾದರೂ ಭೇಟಿ ಕೊಡಲೇಬೇಕಾದ ಸ್ಥಳಗಳಲ್ಲಿ ಇದು ಕೂಡ ಒಂದು.

ಇವು ಕೇವಲ ಮಳೆಗಾಲಕ್ಕೆ ಮಾತ್ರವಲ್ಲ, ಸರ್ವಕಾಲಕ್ಕೂ ಫೇಮಸ್ ಪ್ರವಾಸಿ ತಾಣ. ಆದರೆ ನೀವು ಸದ್ಯದ ತಂಪಿನ ವಾತಾವರಣದಲ್ಲಿ ಇಲ್ಲಿಗೆ ಭೇಟಿ ಕೊಟ್ಟರೆ ಪ್ರಕೃತಿ ಸೊಬಗಿನಲ್ಲಿ ಮುಳುಗಿ ಹೋಗುವುದಂತೂ ಖಂಡಿತ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.