ಲಖನೌ(ಉತ್ತರ ಪ್ರದೇಶ): ಉತ್ತರ ಪ್ರದೇಶ ವಿಧಾನಸಭೆ ಚುನಾವಣೆಗೆ ಈಗಾಗಲೇ ಮುಹೂರ್ತ ಫಿಕ್ಸ್ ಆಗಿದ್ದು, 403 ಕ್ಷೇತ್ರಗಳಿಗೆ ಒಟ್ಟು 7 ಹಂತಗಳಲ್ಲಿ ಮತದಾನ ನಡೆಯಲಿದೆ. ಈಗಾಗಲೇ ಕಾಂಗ್ರೆಸ್ ಮೊದಲ ಹಂತದಲ್ಲಿ 125 ಅಭ್ಯರ್ಥಿಗಳಿಗೆ ಟಿಕೆಟ್ ಫೈನಲ್ ಮಾಡಿದ್ದು, ಅದರಲ್ಲಿ 'ಬಿಕಿನಿ ಗರ್ಲ್' ಖ್ಯಾತಿಯ ನಟಿಗೂ ಟಿಕೆಟ್ ನೀಡಿದ್ದಾರೆ.
ಕಾಂಗ್ರೆಸ್ ಇಂದು ರಿಲೀಸ್ ಮಾಡಿರುವ ಮೊದಲ ಲಿಸ್ಟ್ನಲ್ಲಿ 125 ಅಭ್ಯರ್ಥಿಗಳ ಪೈಕಿ 50 ಮಹಿಳೆಯರು ಟಿಕೆಟ್ ಪಡೆದುಕೊಂಡಿದ್ದಾರೆ. ಇವರ ಪೈಕಿ ಹಸ್ತೀನಾಪುರ್ ಕ್ಷೇತ್ರದಿಂದ ಅರ್ಚನಾ ಗೌತಮ್ ಸ್ಪರ್ಧೆ ಮಾಡಲಿದ್ದಾರೆ.
ನಟಿ, ರೂಪದರ್ಶಿಯೂ ಆಗಿರುವ ಅರ್ಚನಾ ಗೌತಮ್ 2014ರಲ್ಲಿ 'ಉತ್ತರ ಪ್ರದೇಶ ಸುಂದರಿ'ಯಾಗಿ ಹೊರಹೊಮ್ಮಿದ್ದು, ಇದಾದ ಬಳಿಕ ಮಿಸ್ ಬಿಕಿನಿ ಇಂಡಿಯಾ, ಮಿಸ್ ಬಿಕಿನಿ ಯೂನಿವರ್ಸ್ ಇಂಡಿಯಾ ವಿಜೇತೆಯಾಗಿ ಹೊರಹೊಮ್ಮಿದ್ದಾರೆ. 2018ರಲ್ಲಿ ಮಿಸ್ ಕಾಸ್ಮೋಸ್ ವರ್ಲ್ಡ್ನಲ್ಲಿ ಭಾರತವನ್ನು ಪ್ರತಿನಿಧಿಸಿದ್ದರು.
ಅರ್ಚನ್ ಗೌತಮ್ ಅವರು ಮೀರತ್ನ IIMTಯಿಂದ BJMCಯಲ್ಲಿ ಡಿಗ್ರಿ ಪಡೆದುಕೊಂಡಿದ್ದು, 2018ರಲ್ಲಿ ಮೋಸ್ಟ್ ಟ್ಯಾಲೆಂಟ್ ಶೀರ್ಷಿಕೆ ಗೆದ್ದಿದ್ದಾರೆ. 2015ರಲ್ಲಿ ಬಾಲಿವುಡ್ಗೆ ಪದಾರ್ಪಣೆ ಮಾಡಿರುವ ಇವರನ್ನು 'ಬಿಕಿನಿ ಗರ್ಲ್' ಎಂದೇ ಕರೆಯಲಾಗುತ್ತದೆ. ಇವರು ಗ್ರೇಟ್ ಗ್ರ್ಯಾಂಡ್ ಮಸ್ತಿ ಚಿತ್ರದಲ್ಲಿ ಹಾಟ್ ಹಾಟ್ ದೃಶ್ಯಗಳಲ್ಲಿ ಕಾಣಿಸಿಕೊಂಡಿದ್ದಾರೆ. ಇದಾದ ಬಳಿಕ ಶ್ರದ್ಧಾ ಕಪೂರ್ ಅವರ ಹಸೀನಾ ಪಾರ್ಕರ್, ಭಾರಾತ್ ಕಂಪನಿ ಚಿತ್ರಗಳಲ್ಲೂ ನಟಿಸಿದ್ದಾರೆ.
ಇದರ ಹೊರತಾಗಿ, ಅನೇಕ ಜಾಹೀರಾತುಗಳಲ್ಲಿಯೂ ಕಾಣಿಸಿಕೊಂಡಿರುವ ಇವರು, ಪಂಜಾಬಿ, ಹರಿಯಾನಿ ಸಾಂಗ್ಗಳಲ್ಲಿ ಅಭಿನಯಿಸಿದ್ದಾರೆ. 26 ವರ್ಷದ ಅರ್ಚನಾ ಗೌತಮ್ 2018ರಲ್ಲಿ ಡಾ.ರಾಧಾಕೃಷ್ಣನ್ ಸ್ಮಾರಕ ಪ್ರಶಸ್ತಿ ಸಹ ಪಡೆದುಕೊಂಡಿದ್ದಾರೆ.
2019ರಲ್ಲಿ ತರೆ ಕಂಡಿರುವ ಜಂಕ್ಷನ್ ವಾರಣಾಸಿ ಚಿತ್ರದಲ್ಲಿ ಐಟಂ ಸಾಂಗ್ನಲ್ಲಿ ಕಾಣಿಸಿಕೊಂಡಿರುವ ಅರ್ಚನಾ, ಅನೇಕ ಸಿರೀಸ್ಗಳಲ್ಲಿ ಕಾಣಿಸಿಕೊಂಡಿದ್ದಾರೆ.
ಉತ್ತರ ಪ್ರದೇಶ ವಿಧಾನಸಭೆ ಚುನಾವಣೆಯಲ್ಲಿ ಉನ್ನಾವೋ ರೇಪ್ ಸಂತ್ರಸ್ತೆ ತಾಯಿಗೂ ಟಿಕೆಟ್ ನೀಡಲಾಗಿದ್ದು, ಸೋನಭದ್ರ ಹತ್ಯಾಕಾಂಡದ ಸಂತ್ರಸ್ತೆ ಹಾಗು ಆಶಾ ಕಾರ್ಯಕರ್ತೆ ಪೂನಂ ಪಾಂಡೆಗೂ ಟಿಕೆಟ್ ಘೋಷಣೆ ಮಾಡಲಾಗಿದೆ.