ETV Bharat / bharat

ಮುಂಬೈ ಪೊಲೀಸ್ ಕಮಿಷನರ್ ಆಗಿ ಸಂಜಯ್ ಪಾಂಡೆ ನೇಮಕ

ಮುಂಬೈನ ನೂತನ ಪೊಲೀಸ್ ಕಮಿಷನರ್ ಆಗಿ ಸಂಜಯ್ ಪಾಂಡೆ ಅವರನ್ನು ನೇಮಕ ಮಾಡಲಾಗಿದೆ..

ಮುಂಬೈ ಪೊಲೀಸ್ ಕಮಿಷನರ್ ಆಗಿ ಸಂಜಯ್ ಪಾಂಡೆ ನೇಮಕ
ಮುಂಬೈ ಪೊಲೀಸ್ ಕಮಿಷನರ್ ಆಗಿ ಸಂಜಯ್ ಪಾಂಡೆ ನೇಮಕ
author img

By

Published : Feb 28, 2022, 4:44 PM IST

Updated : Feb 28, 2022, 4:58 PM IST

ಮುಂಬೈ: ಮುಂಬೈ ಪೊಲೀಸ್ ಕಮಿಷನರ್ ಆಗಿ ಸಂಜಯ್ ಪಾಂಡೆ ಅವರನ್ನು ನೇಮಕ ಮಾಡಿ ಸರ್ಕಾರ ಆದೇಶಿಸಿದೆ.

ಇನ್ನು ಮುಂಬೈ ಪೊಲೀಸ್ ಕಮಿಷನರ್​ ಆಗಿದ್ದ ಹೇಮಂತ್ ನಾಗರಾಳೆ ಅವರನ್ನು ಇಲ್ಲಿಂದ ಎತ್ತಂಗಡಿ ಮಾಡಿ ಮಹಾರಾಷ್ಟ್ರ ರಾಜ್ಯ ಭದ್ರತಾ ನಿಗಮದ ವ್ಯವಸ್ಥಾಪಕ ನಿರ್ದೇಶಕರಾಗಿ ನೇಮಕ ಮಾಡಲಾಗಿದೆ.

ಸಂಜಯ್ ಪಾಂಡೆ ಯಾರು?: ಸಂಜಯ್ ಪಾಂಡೆ ಐಐಟಿ ಕಾನ್ಪುರದಿಂದ ಐಟಿ ಕಂಪ್ಯೂಟರ್‌ನಲ್ಲಿ ಎಂಜಿನಿಯರಿಂಗ್ ಮಾಡಿದ್ದಾರೆ. 1986ರ ಬ್ಯಾಚ್‌ನ ಐಪಿಎಸ್‌ ಅಧಿಕಾರಿ. ಮೊದಲು ಎಸಿಪಿಯಾಗಿ ಪುಣೆ ನಗರದಲ್ಲಿ ಕಾರ್ಯನಿರ್ವಹಿಸಿದ ಇವರು, ಮುಂಬೈನಲ್ಲಿ ಡಿಸಿಪಿ ಶ್ರೇಣಿಯ ಅಧಿಕಾರಿಯಾಗಿ ಹೊರಹೊಮ್ಮಿದರು.

1992ರ ಮುಂಬೈ ಗಲಭೆಯ ಸಂದರ್ಭದಲ್ಲಿ ಧಾರಾವಿಯಲ್ಲಿ ಗಲಭೆ ನಿಯಂತ್ರಣ ಮತ್ತು ಸಾಮಾಜಿಕ ಏಕತೆಗಾಗಿ ಮೊಹಲ್ಲಾ ಸಮಿತಿಯನ್ನು ಮೊದಲ ಬಾರಿಗೆ ರಚಿಸಿದ ಕೀರ್ತಿ ಇವರದು. ಮುಂಬೈನಲ್ಲಿ 4 ಉನ್ನತ ಪೊಲೀಸ್ ಠಾಣೆಗಳನ್ನು ವಿಲೀನಗೊಳಿಸಿ ವಲಯ 8 ಅನ್ನು ರಚಿಸಿದ್ದರು. ಹಾಗೆ 1993ರಲ್ಲಿ ಶಿವಸೇನೆ ಕಾರ್ಯಕರ್ತರ ಗೂಂಡಾಗಿರಿಗೆ ಕಡಿವಾಣ ಹಾಕಿದ ಹಿನ್ನೆಲೆ ಶಿವಸೇನೆ ನಾಯಕರ ಕೆಂಗಣ್ಣಿಗೆ ಇವರು ಗುರಿಯಾಗಿದ್ದರು.

1995ರಲ್ಲಿ ನಾರ್ಕೋಟಿಕ್ಸ್ ವಿಭಾಗದ ಡಿಸಿಪಿಯಾಗಿ ನಗರದಲ್ಲಿ ಡ್ರಗ್ಸ್ ದಂಧೆಗೆ ಕಡಿವಾಣ ಹಾಕಿದ್ದರು. 1997ರಲ್ಲಿ ಆರ್ಥಿಕ ಅಪರಾಧ ವಿಭಾಗದಲ್ಲಿದ್ದಾಗ ಅಭ್ಯುದಯ ಬ್ಯಾಂಕ್ ಹಗರಣ, ಲೆದರ್ ಹಗರಣದ ತನಿಖೆ ನಡೆಸಿ ಭ್ರಷ್ಟಾಚಾರ ನಡೆದಿರುವುದನ್ನು ಬೆಳಕಿಗೆ ತಂದಿದ್ದರು. ಹಾಗೆ 1998ರಲ್ಲಿ ಹೆಚ್ಚಿನ ಅಧ್ಯಯನಕ್ಕಾಗಿ ಹಾರ್ವರ್ಡ್ ವಿಶ್ವವಿದ್ಯಾಲಯಕ್ಕೆ ಹೋಗಿ ಸ್ನಾತಕೋತ್ತರ ಅಧ್ಯಯನ ಮಾಡಿ ಬಂದಿದ್ದರು.

1999ರಲ್ಲಿ ಎಸ್‌ಪಿಜಿಯಲ್ಲಿದ್ದಾಗ, ಅವರನ್ನು ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರ ರಕ್ಷಣೆಗಾಗಿ ನಿಯೋಜಿಸಲಾಗಿತ್ತು.ಕಾಲಾ ನಂತರದಲ್ಲಿ 2001ರಲ್ಲಿ ಐಪಿಎಸ್‌ಗೆ ರಾಜೀನಾಮೆ ನೀಡಿದರೂ ರಾಜೀನಾಮೆ ಅಂಗೀಕಾರವಾಗಲಿಲ್ಲ. ಈ ವಿಷಯ ನ್ಯಾಯಾಲಯಕ್ಕೆ ಹೋಯಿತು.

2005ರಲ್ಲಿ ಮತ್ತೆ ಸೇವೆಗೆ ಬಂದ ಅವರು ಐಪಿಎಸ್ ವೃತ್ತಿಜೀವನದಲ್ಲಿ 20 ವರ್ಷಗಳನ್ನು ಪೂರೈಸಿದರು. ಇದಾದ ನಂತರ ಸ್ವಯಂ ನಿವೃತ್ತಿ ತೆಗೆದುಕೊಳ್ಳಲು ಬಯಸಿದ್ದರು. ಆದರೆ, ಈ ಅವಧಿಯಲ್ಲಿನ ನ್ಯಾಯಾಲಯದ ಹೋರಾಟದ ನಡುವೆ ಮತ್ತೇ 2011ರಲ್ಲಿ ಸೇವೆಗೆ ಮರಳಿದರು. ಈಗ ಮುಂಬೈನ್​ ಕಮಿಷನರ್​ ಆಗಿ ನೇಮಕಗೊಂಡಿದ್ದಾರೆ.

Last Updated : Feb 28, 2022, 4:58 PM IST

For All Latest Updates

TAGGED:

ETV Bharat Logo

Copyright © 2024 Ushodaya Enterprises Pvt. Ltd., All Rights Reserved.