ವಾರಾಣಸಿ(ಉತ್ತರ ಪ್ರದೇಶ): ಮೊಬೈಲ್ ಕಳೆದು ಹೋದರೆ ಅಥವಾ ಕಳ್ಳತನವಾದರೆ ಸಿಮ್ ಬ್ಲಾಕ್ ಮಾಡಿಸಿ, ಸುಮ್ಮನಾಗಿ ಬಿಡುತ್ತೇವೆ. ಆದರೆ, ವಾರಣಾಸಿಯ ಇಬ್ಬರು ಯುವಕರು ಕಂಡು ಹಿಡಿದಿರುವ ಆ್ಯಪ್ನಿಂದ ನಾವು ಕಳೆದುಕೊಂಡಿರುವ ಫೋನ್ ವಾಪಸ್ ಪಡೆದುಕೊಳ್ಳಬಹುದಾಗಿದೆ. ಅದಕ್ಕೋಸ್ಕರ ಕಳೆದ ಒಂದು ವರ್ಷದಿಂದ ಅವರು ಶ್ರಮಪಟ್ಟಿದ್ದಾರೆ.
ಕಾಶಿಯ ಇಬ್ಬರು ಇಂಜಿನಿಯರಿಂಗ್ ವಿದ್ಯಾರ್ಥಿಗಳು ಕಳೆದ ಹೋದ ಮೊಬೈಲ್ ಫೋನ್ ಪತ್ತೆ ಹಚ್ಚುವ ಆ್ಯಪ್ ಕಂಡು ಹಿಡಿದ್ದಾರೆ. scant.9 CMS ANTI THEFT ಎಂಬ ಆ್ಯಪ್ ಹುಟ್ಟುಹಾಕಿದ್ದಾರೆ. ಈ ಅಪ್ಲಿಕೇಶನ್ ವಿಶೇಷವೆಂದರೆ ಕಳ್ಳತನವಾದ ಮೊಬೈಲ್ ಆಫ್ ಮಾಡಲು ಸಾಧ್ಯವಾಗುವುದಿಲ್ಲ. ಹೀಗಾಗಿ, ಫೋನ್ ಇರುವ ಸ್ಥಳವನ್ನ ಸುಲಭವಾಗಿ ಕಂಡು ಹಿಡಿಯಬಹುದಾಗಿದೆ. ಈ ಅಪ್ಲಿಕೇಶನ್ ಮೂಲಕ ಮಹಿಳೆಯರ ಸುರಕ್ಷತೆಗೂ ಒತ್ತು ನೀಡಲಾಗಿದ್ದು, ತೊಂದರೆಗೆ ಒಳಗಾದಾಗ ಅಪ್ಲಿಕೇಶನ್ ಸಹಾಯದಿಂದ ನಿಖರ ಸ್ಥಳದ ಮಾಹಿತಿ ಗೊತ್ತಾಗಲಿದೆ. ಇದರಲ್ಲಿ ಪವರ್ ಬಟನ್ ನೀಡಲಾಗಿದ್ದು, ಏಕಕಾಲಕ್ಕೆ 100ಕ್ಕೂ ಹೆಚ್ಚು ಜನರು ತುರ್ತು ಸೇವೆಗೊಳಗಾಗ ಬಹುದಾಗಿದೆ.
ಇದನ್ನೂ ಓದಿ: ಮೋದಿ ಜೊತೆ ವೇದಿಕೆ ಹಂಚಿಕೊಂಡ ಸ್ಟಾಲಿನ್.. ಹಿಂದಿಯಂತೆ ತಮಿಳು ಅಧಿಕೃತ ಭಾಷೆ ಮಾಡಲು ಒತ್ತಾಯ
ಅಭಿಷೇಕ್ ಮತ್ತು ಮೊಹಮ್ಮದ್ ವಿದೇಶದಲ್ಲಿ ವ್ಯಾಸಂಗ ಮಾಡಿ, ಭಾರತಕ್ಕೆ ವಾಪಸ್ ಆಗಿದ್ದು, ಕಳೆದು ಒಂದು ವರ್ಷದಿಂದ ಕಠಿಣ ಪರಿಶ್ರಮದಿಂದ ಈ ಅಪ್ಲಿಕೇಶನ್ ಸಿದ್ಧಪಡಿಸಿದ್ದಾರೆ. ಇದರ ಬಗ್ಗೆ ಅಭಿಷೇಕ್ ವಿವರಣೆ ನೀಡಿದ್ದು, ಮೊಬೈಲ್ ಕಳ್ಳತನವಾದ ಬಳಿಕ, ಕದ್ದ ಮೊಬೈಲ್ ಎಲ್ಲಿದೆ ಎಂಬುದರ ಬಗ್ಗೆ ಸರಿಯಾದ ಮಾಹಿತಿ ನೀಡುತ್ತದೆ. ಈ ಅಪ್ಲಿಕೇಶನ್‌ನ ದೊಡ್ಡ ವೈಶಿಷ್ಟ್ಯವೆಂದರೆ ಫೋನ್ ಆಫ್ ಆಗಲು ಬಿಡುವುದಿಲ್ಲ. ಈ ಅಪ್ಲಿಕೇಶನ್ ಆಂಡ್ರಾಯ್ಡ್ ಫೋನ್‌ಗಳಲ್ಲಿ ಕಾರ್ಯನಿರ್ವಹಿಸುತ್ತದೆ ಎಂದು ಮೊಹಮ್ಮದ್ ತಿಳಿಸಿದ್ದಾರೆ. ಮೊಬೈಲ್ ಸ್ವಿಚ್ ಆನ್ ಆಗಿರುವಾಗ, ಆ ಅಪ್ಲಿಕೇಶನ್‌ನಲ್ಲಿರುವ ತುರ್ತು ಸಂಖ್ಯೆ ಫೋನ್‌ನ ಪ್ರಸ್ತುತ ಸ್ಥಳದ ಮಾಹಿತಿ ನೀಡುತ್ತದೆ. ಆದರೆ, ಮೊಬೈಲ್ನಲ್ಲಿ ಅಳವಡಿಕೆ ಮಾಡಿರುವ ಬ್ಯಾಟರಿ ಹೊರತೆಗೆದಾಗ ಈ ಆ್ಯಪ್ ಕೆಲಸ ಮಾಡಲ್ಲ.
ವಿಶೇಷವೆಂದರೆ ಮಹಿಳೆಯರಿಗೆ ಯಾರಾದರೂ ತೊಂದರೆ ನೀಡುತ್ತಿರುವ ಸಂದರ್ಭದಲ್ಲೂ ಈ ಆ್ಯಪ್ ಕೆಲಸ ಮಾಡಲಿದ್ದು, ಅವರು ತೊಂದರೆಗೊಳಗಾಗಿರುವ ಸ್ಥಳದ ಬಗ್ಗೆ ನಿಖರ ಮಾಹಿತಿ ನೀಡಲಿದೆ.