ETV Bharat / bharat

Allopathy: ಸುಪ್ರೀಂನಲ್ಲಿಂದು ಬಾಬಾ ರಾಮ್​ದೇವ್​ ಹೇಳಿಕೆಗಳ ಮೂಲ ದಾಖಲೆ ಪರಿಶೀಲನೆ - ಭಾರತೀಯ ವೈದ್ಯಕೀಯ ಸಂಘ

ಯೋಗಗುರು ಬಾಬಾ ರಾಮ್​ದೇವ್​ಗೆ ಮತ್ತಷ್ಟು ಸಂಕಷ್ಟ ಎದುರಾಗಿದೆ. Allopathy ಔಷಧಿ ಕುರಿತು ರಾಮ್​ದೇವ್​ ನೀಡಿರುವ ಹೇಳಿಕೆಗಳ ಮೂಲ ದಾಖಲೆಯನ್ನು ಸುಪ್ರೀಂ ಕೋರ್ಟ್ ಇಂದು ಪರಿಶೀಲಿಸಲಿದೆ.

ಬಾಬಾ ರಾಮ್​ದೇವ್
ಬಾಬಾ ರಾಮ್​ದೇವ್
author img

By

Published : Jul 5, 2021, 9:38 AM IST

ನವದೆಹಲಿ: ಕೋವಿಡ್​​​​ ಸಮಯದಲ್ಲಿ ಅಲೋಪತಿ ಚಿಕಿತ್ಸೆ ಹಾಗೂ ಔಷಧಿಗಳ ಬಳಕೆಗೆ ಸಂಬಂಧಿಸಿದಂತೆ ಯೋಗಗುರು ರಾಮ್​ದೇವ್​ ನೀಡಿದ್ದ ಹೇಳಿಕೆಗಳು ವಿವಾದಕ್ಕೆ ಎಡೆಮಾಡಿಕೊಟ್ಟಿದ್ದವು. ಈ ಹೇಳಿಕೆಗಳ ಮೂಲ ದಾಖಲೆಯನ್ನು ಸುಪ್ರೀಂ ಕೋರ್ಟ್ ಇಂದು ಪರಿಶೀಲಿಸಲಿದೆ.

ಈ ಸಂಬಂಧ ದೆಹಲಿಗೆ ಸಂಬಂಧಿಸಿದಂತೆ ದಾಖಲಾಗಿರುವ ಪ್ರಕರಣಗಳ ತನಿಖೆ ಮತ್ತು ವರ್ಗಾವಣೆಯನ್ನು ತಡೆಹಿಡಿಯಬೇಕೆಂದು ರಾಮ್‌ದೇವ್ ಒತ್ತಾಯಿಸಿದ್ದಾರೆ. ಭಾರತೀಯ ವೈದ್ಯಕೀಯ ಸಂಘ (ಐಎಂಎ)ದ ದೂರಿನ ಮೇರೆಗೆ ರಾಮದೇವ್ ವಿರುದ್ಧ ಹಲವಾರು ಎಫ್‌ಐಆರ್​ಗಳು ದಾಖಲಾಗಿವೆ.

ಮುಖ್ಯ ನ್ಯಾಯಮೂರ್ತಿ ಎನ್.ವಿ. ರಮಣ, ನ್ಯಾಯಮೂರ್ತಿ ಎ.ಎಸ್. ಬೋಪಣ್ಣ ಮತ್ತು ನ್ಯಾಯಮೂರ್ತಿ ಹೃಷಿಕೇಶ ರಾಯ್ ಅವರ ತ್ರಿಸದಸ್ಯ ನ್ಯಾಯಪೀಠ ಇಂದು ರಾಮ್ ದೇವ್ ಮನವಿಯನ್ನು ಆಲಿಸಲಿದೆ. ಅಲೋಪತಿ ವಿರುದ್ಧ ನೀಡಿರುವ ಹೇಳಿಕೆಗಳ ಬಗ್ಗೆ ದಾಖಲಾಗಿರುವ ಎಲ್ಲಾ ಎಫ್​ಐಆರ್​ಗಳನ್ನು ದೆಹಲಿಗೆ ವರ್ಗಾಯಿಸಲು ನ್ಯಾಯಪೀಠ ನಿರ್ದೇಶಿಸಿದೆ. ರಾಮ್‌ದೇವ್ ಮಧ್ಯಂತರ ಪರಿಹಾರವಾಗಿ ಕ್ರಿಮಿನಲ್ ದೂರುಗಳಿಗೆ ಸಂಬಂಧಿಸಿದಂತೆ ತನಿಖೆಯನ್ನು ತಡೆಹಿಡಿಯಲು ಕೋರಿದ್ದಾರೆ. ಇದಕ್ಕೆ ಪೀಠ ಆಕ್ಷೇಪ ವ್ಯಕ್ತಪಡಿಸಿದ್ದರಿಂದ ಹಿರಿಯ ವಕೀಲ ಮುಕುಲ್ ರೋಹ್ಟಗಿ, ರಾಮ್​ದೇವ್ ಹೇಳಿಕೆಯ ಮೂಲ ದಾಖಲೆಗಳನ್ನು ನೀಡುವುದಾಗಿ ಹೇಳಿದ್ದರು.

ಅಲೋಪತಿ ವಿರುದ್ಧ ರಾಮ್​ದೇವ್ ನೀಡಿರುವ ಹೇಳಿಕೆ ಸಂಬಂಧ ಭಾರತೀಯ ವೈದ್ಯ ಸಂಘವು ಕ್ರಿಮಿನಲ್ ಮೊಕದ್ದಮೆ ದಾಖಲಿಸಿದೆ. ಅಲ್ಲದೆ ಬಾಬಾರ ಹೇಳಿಕೆಯು ಜನರ ಮೇಲೆ ತೀವ್ರ ಪರಿಣಾಮ ಬೀರಲಿದೆ. ಕೋವಿಡ್​​ಗೆ ಸರಿಯಾದ ಚಿಕಿತ್ಸೆ ಪಡೆಯಲು ಹಿಂದೇಟು ಹಾಕುವ ಸಾಧ್ಯತೆಯಿದೆ ಎಂದು ಐಎಂಎ ದೂರಿನಲ್ಲಿ ಉಲ್ಲೇಖಿಸಿದೆ.

ವಿಪತ್ತು ನಿರ್ವಹಣಾ ಕಾಯ್ದೆ 2005 ರ ವಿಭಾಗಗಳ ಅಡಿಯಲ್ಲಿ ಯೋಗಗುರು ವಿರುದ್ಧ ಪ್ರಕರಣ ದಾಖಲಾಗಿದೆ. ವೈದ್ಯಕೀಯ ಸಂಸ್ಥೆಗಳ ಅನುಮೋದನೆ ಪಡೆಯದ ಕೊರೊನಿಲ್ ಕಿಟ್‌ಗಳನ್ನು ಮಾರಾಟ ಮಾಡುವ ಮೂಲಕ ರಾಮ್‌ದೇವ್ ಅವರ ಪತಂಜಲಿ 1,000 ಕೋಟಿ ರೂ.ಗಳನ್ನು ಗಳಿಸಿದೆ ಎಂದು ಡಿಎಂಎ ಹೇಳಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.