ಆಂಧ್ರಪ್ರದೇಶ: ಇಲ್ಲಿನ ವಿಶಾಖಪಟ್ಟಣಂ ಜಿಲ್ಲಾ ಪೊಲೀಸರು ವಿಶೇಷ ಕಾರ್ಯಾಚರಣೆ ನಡೆಸಿ ಆಂಧ್ರ-ಒಡಿಶಾ ಗಡಿಯಲ್ಲಿ ಆರು ಮಂದಿ ನಕ್ಸಲರನ್ನು ಬಂಧಿಸಿದ್ದಾರೆ.
ಬಂಧಿತರಲ್ಲಿ ಮಾವೋವಾದಿ ನಾಯಕ ಆರ್.ಕೆ ಗನ್ಮೆನ್ ಕೂಡ ಸೇರಿದ್ದಾನೆ. ಈ ನಕ್ಸಲರು ಅರಕು ವಿಧಾನಸಭೆ ಕ್ಷೇತ್ರದ ಶಾಸಕ ಕಿದರಿ ಸರ್ವೇಶ್ವರ ರಾವ್ ಮತ್ತು ಮಾಜಿ ಶಾಸಕ ಸಿವೇರಿ ಸೋಮ ಹತ್ಯೆಯಲ್ಲಿ ಭಾಗಿಯಾಗಿದ್ದರು ಎನ್ನಲಾಗಿದೆ.
ಇಡೀ ಪ್ರಕರಣದ ಬಗ್ಗೆ ಆಂಧ್ರಪ್ರದೇಶ ಡಿಜಿಪಿ ಗೌತಮ್ ಸವಾಂಗ್ ಮಾಧ್ಯಮಗೋಷ್ಟಿ ನಡೆಸುತ್ತಿದ್ದು, ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗುತ್ತಿದೆ.