ETV Bharat / bharat

ಗ್ರಾಮಗಳಿಗಾಗಿ ಎರಡು ರಾಜ್ಯಗಳ ನಡುವೆ ಫೈಟ್​; ನಿರ್ಬಂಧದ ನಡುವೆ ಎಲೆಕ್ಷನ್​ ಮಾಡಿದ ಅಧಿಕಾರಿಗಳು; VIDEO

ಆಂಧ್ರಪ್ರದೇಶ ಚುನಾವಣಾ ಆಯೋಗ ಹಾಗೂ ಅಲ್ಲಿನ ಪೊಲೀಸರು ಚುನಾವಣೆ ನಡೆಸಲು ಬೂತ್​ಗಳನ್ನ ಏರ್ಪಾಡು ಮಾಡಿ ಬೆಳಗ್ಗೆ 7 ರಿಂದ ಮತದಾನ ಪ್ರಕ್ರಿಯೆ ಆರಂಭಿಸಿದ್ದರು. ಈ ಎರಡೂ ಹಳ್ಳಿಗಳು ತಮಗೆ ಸೇರಿದ್ದು ಎಂದು ಆಂಧ್ರಪ್ರದೇಶ ಮತ್ತು ಒಡಿಶಾ ಸರ್ಕಾರಗಳು ಪ್ರತಿಪಾದನೆ ಮಾಡಿದ್ದು, ಈ ವೇಳೆ ಅಧಿಕಾರಿಗಳ ನಡುವೆ ಮಾತಿನ ಚಕಮಕಿ ನಡೆದಿದೆ.

ap-officials-hold-polling-in-odisha-despite-restrictions
ಅಧಿಕಾರಿಗಳ ನಡುವೆ ಮಾರಾಮಾರಿ
author img

By

Published : Apr 8, 2021, 10:51 PM IST

ಕೋರಾಪುಟ್ (ಒಡಿಶಾ)​: ಗಡಿ ಸಮಸ್ಯೆಯಿಂದಾಗಿ ಚುನಾವಣಾ ಆಯೋಗ ಹಾಗೂ ಒಡಿಶಾ ಸರ್ಕಾರದ ನಡುವೆ ಗೊಂದಲ ಏರ್ಪಟ್ಟಿದ್ದು, ಅಧಿಕಾರಿಗಳ ನಡುವೆ ಗಲಾಟೆ ನಡೆದಿದೆ. ಯಾವ ರಾಜ್ಯಗಳಿಗೆ ಈ ಹಳ್ಳಿಗಳು ಸೇರಬೇಕೆಂಬುದು ನಿರ್ಧಾರವಾಗದಿರುವ ಹಿನ್ನೆಲೆ ಈ ಗೊಂದಲ ಏರ್ಪಟ್ಟಿತ್ತು. ಆಂಧ್ರಪ್ರದೇಶ ಮತ್ತು ಒಡಿಶಾ ರಾಜ್ಯಗಳ ನಡುವೆ ವಿವಾದವಿದ್ದು, ಈ ನಡುವೆ ಒಡಿಶಾ ಸರ್ಕಾರ ಎರಡೂ ಗ್ರಾಮಗಳನ್ನ ಕಂಟೇನ್ಮೆಂಟ್​ ಝೋನ್​( ನಿರ್ಬಂಧಿತ ವಲಯ) ಎಂದು ಘೋಷಣೆ ಮಾಡಿದೆ.

ಒಡಿಶಾ ಸರ್ಕಾರದ ಈ ಆದೇಶದ ನಡುವೆಯೂ ಆಂಧ್ರಪ್ರದೇಶ ಚುನಾವಣಾ ಆಯೋಗದ ಅಧಿಕಾರಿಗಳು ಚುನಾವಣೆ ನಡೆಸಿದ್ದಾರೆ. ಕೊಟಿಯಾ ಗ್ರಾಮ ಪಂಚಾಯತ್​ ವ್ಯಾಪ್ತಿಯ ಎರಡು ಹಳ್ಳಿಗಳಲ್ಲಿ ವಿವಾದ ನಡೆದಿದ್ದು, ಫತ್ತುಸುನೇರಿ ಮತ್ತು ನೆರೆಡಿಬಾಲಸಾ ಹಳ್ಳಿಗಳನ್ನು ಕಂಟೇನ್​ಮೆಂಟ್​ ವಲಯ ಎಂದು ಗುರುತಿಸಿ ಕೊರಾಪುಟ್​ ಜಿಲ್ಲಾಧಿಕಾರಿ ಸೆಕ್ಷನ್​ 144ರ ಅನ್ವಯ ನಿಷೇಧಾಜ್ಞೆ ಜಾರಿಗೊಳಿಸಿದ್ದರು.

ಅಧಿಕಾರಿಗಳು, ಪೊಲೀಸರ ನಡುವೆ ಮಾರಾಮಾರಿ

ಆದರೆ ಆಂಧ್ರಪ್ರದೇಶ ಚುನಾವಣಾ ಆಯೋಗ ಹಾಗೂ ಅಲ್ಲಿನ ಪೊಲೀಸರು ಚುನಾವಣೆ ನಡೆಸಲು ಬೂತ್​ಗಳನ್ನ ಏರ್ಪಾಡು ಮಾಡಿ ಬೆಳಗ್ಗೆ 7 ರಿಂದ ಮತದಾನ ಪ್ರಕ್ರಿಯೆ ಆರಂಭಿಸಿದ್ದರು. ಈ ಎರಡೂ ಹಳ್ಳಿಗಳು ತಮಗೆ ಸೇರಿದ್ದು ಎಂದು ಆಂಧ್ರಪ್ರದೇಶ ಮತ್ತು ಒಡಿಶಾ ಸರ್ಕಾರಗಳು ಪ್ರತಿಪಾದನೆ ಮಾಡಿದ್ದು, ಈ ವೇಳೆ ಅಧಿಕಾರಿಗಳ ನಡುವೆ ಮಾತಿನ ಚಕಮಕಿ ನಡೆದಿದೆ.

ಹೀಗಾಗಿ ಎರಡೂ ಗ್ರಾಮಗಳಲ್ಲಿ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಗಿತ್ತು. ಇದೆಲ್ಲದರ ನಡುವೆ ಈ ಭಾಗದಲ್ಲಿ ಕಡಿಮೆ ಮತದಾನವೂ ನಡೆಯಿತು. ಈ ಎರಡೂ ಗ್ರಾಮಗಳಲ್ಲಿ ಸುಮಾರು 1,291 ಮತದಾರರಿದ್ದಾರೆ. ಇದರಲ್ಲಿ ಕೇವಲ 223 ಮತದಾರರು ಮತದಾನ ಮಾಡಿದ್ದಾರೆ. ಕಳೆದ ಫೆಬ್ರವರಿಯಲ್ಲಿ ನಡೆದ ಸರ್​ಪಂಚ್​ ಚುನಾವಣೆಯಲ್ಲಿ ಇಲ್ಲಿ ಶೇ 66ರಷ್ಟು ಮತದಾನವಾಗಿತ್ತು. ಈ ನಡುವೆ ಗ್ರಾಮಗಳ ಹಕ್ಕಿನ ವಿಚಾರವಾಗಿ ಆಂಧ್ರಪ್ರದೇಶ ಮತ್ತು ಒಡಿಶಾ ರಾಜಕೀಯ ನಾಯಕರು ಅಧಿಕಾರಿಗಳು ಮತ್ತು ಪೊಲೀಸರ ನಡುವೆ ಮಾತಿನ ಚಕಮಕಿಗೆ ಕಾರಣವಾಗಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.