ETV Bharat / bharat

ಆನಂದಯ್ಯ ಕೋವಿಡ್​ ಔಷಧಕ್ಕೆ ಆಂಧ್ರ ಸರ್ಕಾರ ಅನುಮೋದನೆ - ಆಂಧ್ರ ಸಿಎಂ ಜಗನ್​ಮೋಹನ್​

ಸೋಮವಾರ ಮುಖ್ಯಮಂತ್ರಿ ವೈ.ಎಸ್.ಜಗನ್ ಮೋಹನ್ ರೆಡ್ಡಿ ಅವರ ಅಧ್ಯಕ್ಷತೆಯಲ್ಲಿ ನಡೆದ ಕೋವಿಡ್ -19 ಉನ್ನತ ಮಟ್ಟದ ಪರಿಶೀಲನಾ ಸಭೆಯಲ್ಲಿ ಅಧಿಕಾರಿಗಳು ಆನಂದಯ್ಯ ಅವರ ಗಿಡಮೂಲಿಕೆಗಳ ಕುರಿತು ಚರ್ಚಿಸಿದರು.

jagan
jagan
author img

By

Published : May 31, 2021, 10:21 PM IST

ಅಮರಾವತಿ: ಮುಖ್ಯಮಂತ್ರಿ ವೈ.ಎಸ್. ಜಗನ್ ಮೋಹನ್ ರೆಡ್ಡಿ ಅವರ ಅಧ್ಯಕ್ಷತೆಯಲ್ಲಿ ನಡೆದ ಕೋವಿಡ್ -19 ಉನ್ನತ ಮಟ್ಟದ ಪರಿಶೀಲನಾ ಸಭೆಯಲ್ಲಿ ಅಧಿಕಾರಿಗಳು ಆನಂದಯ್ಯ ಅವರ ಗಿಡಮೂಲಿಕೆಗಳ ಕುರಿತು ಚರ್ಚಿಸಿದರು.

ಆನಂದಯ್ಯ ಕಣ್ಣಿಗೆ ಹಾಕುವ ಔಷಧವನ್ನು ಹೊರತುಪಡಿಸಿ ಉಳಿದ ಔಷಧಗಳನ್ನು ಸಭೆಯಲ್ಲಿ ಅನುಮೋದಿಸಲಾಯಿತು. ಪಿ.ಎಲ್ ಮತ್ತು ಎಫ್ ಹೆಸರಿನ ಮೂರು ಸಾಂಪ್ರದಾಯಿಕ ಗಿಡಮೂಲಿಕೆ ಔಷಧ ಬಳಕೆಗೆ ಅನುಮತಿ ನೀಡಲು ತೀರ್ಮಾನಿಸಲಾಯಿತು.

ಸಂಪೂರ್ಣ ವರದಿಗಳನ್ನು ಇನ್ನೂ ಸಲ್ಲಿಸಬೇಕಾಗಿರುವುದರಿಂದ ಕಣ್ಣಿನ ಹನಿಗಳನ್ನು ನಿರ್ವಹಿಸಲು ಆನಂದಯ್ಯ ಅವರಿಗೆ ಸರ್ಕಾರ ಅನುಮತಿ ನೀಡಿಲ್ಲ. ಇನ್ನೂ 2-3 ವಾರಗಳು ತೆಗೆದುಕೊಳ್ಳಬಹುದು ಎಂದು ಅಧಿಕಾರಿಗಳು ಹೇಳಿದ್ದಾರೆ. ಈ ಸಾಂಪ್ರದಾಯಿಕ ಮಿಶ್ರಣವು ಕೋವಿಡ್ ಅನ್ನು ಕಡಿಮೆ ಮಾಡುತ್ತದೆ ಎಂಬುದರ ಬಗ್ಗೆ ಯಾವುದೇ ಖಚಿತತೆ ಇಲ್ಲದಿರುವುದರಿಂದ ಕೋವಿಡ್​ ಔಷಧಗಳ ಬಳಕೆಯನ್ನು ನಿಲ್ಲಿಸಬಾರದು ಎಂದು ಸಭೆಯಲ್ಲಿ ಸ್ಪಷ್ಟಪಡಿಸಿದರು.

ಕೋವಿಡ್ -19 ಸೋಂಕಿತರು, ಕೃಷ್ಣಪಟ್ಟಣಕ್ಕೆ ಔಷಧಿ ತೆಗೆದುಕೊಳ್ಳಲು ಬರಬಾರದು. ಆದರೆ, ಅವರ ಸಂಬಂಧಿಕರು ಅದನ್ನು ಪಡೆಯಬಹುದು ಎಂದು ಅಧಿಕಾರಿಗಳು ಹೇಳಿದ್ದಾರೆ.

ಔಷಧಗಳ ವಿತರಣೆಯ ಸಮಯದಲ್ಲಿ ಕೋವಿಡ್ -19 ಪ್ರೋಟೋಕಾಲ್ ಕಟ್ಟುನಿಟ್ಟಾಗಿ ಅನುಸರಿಸಬೇಕು. ಈ ಗಿಡಮೂಲಿಕೆಗಳ ಮಿಶ್ರಣವು ಪ್ರತಿಕೂಲ ಪರಿಣಾಮ ಬೀರುವ ಬಗ್ಗೆ ಯಾವುದೇ ಪುರಾವೆಗಳಿಲ್ಲ. ಕಣ್ಣಿನ ಡ್ರಾಪ್ಸ್​ಗಳ ಜೊತೆಗೆ ಆನಂದಯ್ಯ ಪಿ, ಎಲ್, ಎಫ್, ಕೆ ಎಂಬ ನಾಲ್ಕು ಪೂರಕಗಳನ್ನು ನೀಡುತ್ತಿದ್ದಾರೆ. ಕಚ್ಚಾ ವಸ್ತುಗಳ ಅಲಭ್ಯತೆಯಿಂದಾಗಿ ಸಮಿತಿ ಮಿಶ್ರಣವನ್ನು ಸಿದ್ಧಪಡಿಸಿಲ್ಲ ಎಂದು ಅಧಿಕಾರಿಗಳು ಮಾಹಿತಿ ನೀಡಿದರು.

ಈ ಪೂರಕಗಳು ಕೋವಿಡ್ -19 ಅನ್ನು ಗುಣಪಡಿಸುತ್ತದೆಯೇ ಎಂದು ತಿಳಿಯಲು ರಾಷ್ಟ್ರೀಯ ಆಯುರ್ವೇದ ಸಂಶೋಧನಾ ಸಂಸ್ಥೆ, ಸಿಸಿಆಎಆರ್​​ಎಸ್ ಪ್ರಯೋಗಗಳನ್ನು ನಡೆಸಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ ಮತ್ತು ಇದು ಕೋವಿಡ್ ಅನ್ನು ಗುಣಪಡಿಸುತ್ತಿದೆ ಎಂಬುದಕ್ಕೆ ಯಾವುದೇ ಪುರಾವೆಗಳಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಆದಾಗ್ಯೂ, ಗಿಡಮೂಲಿಕೆಗಳ ತಯಾರಿಕೆಯಲ್ಲಿ ಬಳಸುವ ಪದಾರ್ಥಗಳಿಂದ ಯಾವುದೇ ಹಾನಿ ಇಲ್ಲ ಎಂದು ವರದಿಯು ದೃಢಪಡಿಸಿದೆ, ಆದರೆ ಇವುಗಳನ್ನು ಆಯುರ್ವೇದ ಎಂದು ಗುರುತಿಸಲು ಸಾಧ್ಯವಿಲ್ಲ ಎಂದು ಹೇಳಲಾಗಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.