ETV Bharat / bharat

ನ್ಯೂಯಾರ್ಕ್​ ಟೈಮ್ಸ್​ನಿಂದ ಭಾರತ ವಿರೋಧಿ ಅಭಿಯಾನ: ಸಚಿವ ಅನುರಾಗ್ ಠಾಕೂರ್ ಕಿಡಿ

author img

By

Published : May 5, 2023, 3:25 PM IST

ಭಾರತ ವಿರೋಧಿ ಲೇಖನ ಪ್ರಕಟಿಸಿದ ನ್ಯೂಯಾರ್ಕ್ ಟೈಮ್ಸ್​ ಪತ್ರಿಕೆಯ ವಿರುದ್ಧ ಸಚಿವ ಅನುರಾಗ್ ಠಾಕೂರ್ ಕಿಡಿಕಾರಿದ್ದಾರೆ.

ನ್ಯೂಯಾರ್ಕ್​ ಟೈಮ್ಸ್​ನಿಂದ ಭಾರತ ವಿರೋಧಿ ಅಭಿಯಾನ: ಸಚಿವ ಅನುರಾಗ್ ಠಾಕೂರ್ ಕಿಡಿ
Anurag Thakur accuses NYT of fabricated antiIndia stories

ನವದೆಹಲಿ : ಕಪೋಲಕಲ್ಪಿತವಾದ ಭಾರತ ವಿರೋಧಿ ಲೇಖನಗಳನ್ನು ಪ್ರಕಟಿಸಿರುವ ಅಮೆರಿಕದ ವೃತ್ತಪತ್ರಿಕೆ ದಿ ನ್ಯೂ ಯಾರ್ಕ್ ಟೈಮ್ಸ್ ವಿರುದ್ಧ ಕೇಂದ್ರ ಮಾಹಿತಿ ಮತ್ತು ಪ್ರಸಾರ ಖಾತೆ ಸಚಿವ ಅನುರಾಗ್ ಠಾಕೂರ್ ಆಕ್ರೋಶ ವ್ಯಕ್ತಪಡಿಸಿದ್ದಾರೆ. ನ್ಯೂಯಾರ್ಕ್ ಟೈಮ್ಸ್​ ಅನ್ನು ಡಿಸ್ಟಾರ್ಟ್ ಟೈಮ್ಸ್​ ಎಂದು ಅವರು ಜರಿದಿದ್ದಾರೆ. #TheNewDistortTimes ಎಂಬ ಹ್ಯಾಶ್​ ಟ್ಯಾಗ್​ನೊಂದಿಗೆ ಟ್ವೀಟ್ ಮಾಡಿರುವ ಸಚಿವ ಅನುರಾಗ್ ಠಾಕೂರ್, ಭಾರತದಲ್ಲಿನ ಬೆಳವಣಿಗೆಗಳ ಬಗ್ಗೆ ನ್ಯೂಯಾರ್ಕ್ ಟೈಮ್ಸ್ ಪ್ರಕಟಿಸಿರುವ ಕೆಲ ಲೇಖನಗಳ ಚಿತ್ರಗಳನ್ನು ಶೇರ್ ಮಾಡಿದ್ದಾರೆ. ಯಾವುದೇ ಒಂದು ವಿಚಾರವನ್ನು ಭಾರತ ಹೇಗೆ ನೋಡುತ್ತದೆ ಮತ್ತು ಅದನ್ನೇ ಪಾಶ್ಚಿಮಾತ್ಯ ಮಾಧ್ಯಮಗಳು ಬೇರೆ ರೀತಿಯಾಗಿ ಹೇಗೆ ಬಿಂಬಿಸುತ್ತವೆ ಎಂಬುದನ್ನು ತಿಳಿಸಲು ಅವರು ಪ್ರಯತ್ನಿಸಿದ್ದಾರೆ. ಪಾಶ್ಚಿಮಾತ್ಯ ಮಾಧ್ಯಮಗಳ ಇಂಥ ಕ್ರಮವು ದ್ವೇಷದ ಅಭಿಯಾನವಾಗಿದೆ ಎಂದಿದ್ದಾರೆ.

ಭಾರತದಲ್ಲಿ ಸುದ್ದಿಮನೆಗಳ ಮೇಲೆ ದಾಳಿಗಳು ನಡೆಯುತ್ತಿವೆ ಎಂದು ಆರೋಪಿಸಿ ಅದರ ಬಗ್ಗೆ ವರದಿಗಳನ್ನು ಪ್ರಕಟಿಸಿದ ಅಮೆರಿಕದ ನಂ 1 ವೃತ್ತಪತ್ರಿಕೆಯಾಗಿರುವ ನ್ಯೂಯಾರ್ಕ್ ಟೈಮ್ಸ್​ಗೆ ಠಾಕೂರ್ ಭಾರತದ ಕಾನೂನುಗಳ ಬಗ್ಗೆ ತಿಳಿವಳಿಕೆ ಹೇಳಿದ್ದಾರೆ. "ಭಾರತವು ವಿಶ್ವಮಟ್ಟದಲ್ಲಿ ಬೆಳೆಯುವುದನ್ನು ಹಾಗೂ ಪ್ರಬಲ ಆರ್ಥಿಕ ಶಕ್ತಿಯಾಗುವುದನ್ನು ಸಹಿಸಿಕೊಳ್ಳಲಾಗದ ಕೆಲ ಹಳೆಯ ಮನಸ್ಥಿತಿಯ ಮಾಧ್ಯಮ ಮನೆಗಳು ಭಾರತದ ವಿರುದ್ಧ ದ್ವೇಷ ಅಭಿಯಾನ ನಡೆಸಿವೆ" ಎಂದು ಅನುರಾಗ್ ಠಾಕೂರ್ ಟ್ವೀಟ್ ಮಾಡಿದ್ದಾರೆ.

"ಸತ್ಯ ರಹಿತವಾದ ಹಾಗೂ ಭಾರತ ವಿರೋಧಿ ಕಪೋಲಕಲ್ಪಿತ ವರದಿಗಳನ್ನು ಪ್ರಕಟಿಸುವಲ್ಲಿ ನ್ಯೂಯಾರ್ಕ್ ಟೈಮ್ಸ್​ ತನ್ನದೇ ಆದ ಸಂಪ್ರದಾಯ ಬೆಳೆಸಿಕೊಂಡಿದೆ. ಅದು ಸತ್ಯ ಸಂಗತಿಗಳನ್ನು ಮರೆಮಾಚಲು ಯುನೆಸ್ಕೊದ ವೇದಿಕೆ ಬಳಸಿಕೊಂಡಿದ್ದು ನಾಚಿಕೆಗೇಡಿನ ವಿಚಾರ. ನ್ಯೂಯಾರ್ಕ್ ಟೈಮ್ಸ್​ನ ಎಜಿ ಸುಲ್ಜ್​ಬರ್ಗರ್ ಆ ವೇದಿಕೆಯಲ್ಲಿ ಮಾಧ್ಯಮ ಮನೆಗಳ ಮೇಲೆ ನಡೆದಿವೆ ಎನ್ನಲಾದ ಸೋ ಕಾಲ್ಡ್​ ದಾಳಿಗಳ ಬಗ್ಗೆ ಪ್ರಸ್ತಾಪಿಸಿದ್ದಾರೆ. ಮಾಧ್ಯಮ ಮನೆಯಾಗಿರಲಿ ಅಥವಾ ಮತ್ತಾರೇ ಆಗಿರಲಿ.. ಭಾರತದಲ್ಲಿ ಕಾನೂನು ಸ್ವತಂತ್ರವಾಗಿ ತನ್ನ ಕ್ರಮಗಳನ್ನು ತೆಗೆದುಕೊಳ್ಳುತ್ತದೆ" ಎಂದು ಖಾರವಾಗಿ ಟ್ವೀಟ್ ಮಾಡಿದ್ದಾರೆ ಠಾಕೂರ್.

"ಮಾಧ್ಯಮ ಸಂಸ್ಥೆ ಎಂಬ ಒಂದೇ ಕಾರಣಕ್ಕೆ ಕಾನೂನು ಬಾಹಿರ ಕೆಲಸಗಳನ್ನು ಮಾಡಲು ಸಾಧ್ಯವಿಲ್ಲ. ಯಾವುದೇ ತನಿಖೆಯನ್ನು ನೀವು ಮಾಧ್ಯಮಗಳ ಮೇಲಿನ ದಾಳಿ ಎನ್ನುವುದು ಎಷ್ಟು ಸರಿ? ಭಾರತದಲ್ಲಿ ಪತ್ರಕರ್ತರನ್ನು ಭಯೋತ್ಪಾದಕರ ರೀತಿ ಕಾಣಲಾಗುತ್ತಿದೆ ಎನ್ನುವವರು ಒಂದಿಷ್ಟು ವಿವೇಕದಿಂದ ಯೋಚಿಸಲಿ. ಅದು ನ್ಯೂಯಾರ್ಕ್ ಟೈಮ್ಸ್​ ಅಥವಾ ಡಿಸ್ಟಾರ್ಟ್ ಟೈಮ್ಸ್​ ಎಂಬುದು ಗೊತ್ತಾಗುತ್ತಿಲ್ಲ" ಎಂದು ಅವರು ಹೇಳಿದರು.

ಇದೇ ಸಮಯದಲ್ಲಿ ಭಾರತ ಸರ್ಕಾರದ ಕೆಲ ಜನಪರ ಯೋಜನೆಗಳ ಬಗ್ಗೆ ವರದಿ ಪ್ರಕಟಿಸಿದ್ದಕ್ಕೆ ಸಚಿವ ಠಾಕೂರ್ ನ್ಯೂಯಾರ್ಕ್​ ಟೈಮ್ಸ್​ ಅನ್ನು ಶ್ಲಾಘಿಸಿದ್ದಾರೆ. ಮನೆ ಮನೆಗೆ ಉಚಿತ ಎಲ್​ಪಿಜಿ ಸಿಲಿಂಡರ್ ಪೂರೈಸುವ ಉಜ್ವಲಾ ಯೋಜನೆ, 220 ಕೋಟಿ ಕೋವಿಡ್ ವ್ಯಾಕ್ಸಿನ್ ನೀಡಿದ್ದು, ದೇಶಾದ್ಯಂತ 11 ಕೋಟಿ ಶೌಚಾಲಯ ಕಟ್ಟಿಸಿದ ಸಾಧನೆಗಳ ಬಗ್ಗೆ ಪ್ರಕಟವಾದ ವರದಿಗಳನ್ನು ಅವರು ಶ್ಲಾಘಿಸಿದ್ದಾರೆ.

ಇದನ್ನೂ ಓದಿ : ಆಸ್ಟ್ರೇಲಿಯಾದಲ್ಲಿ ಮತ್ತೆ ಹಿಂದೂ ದೇವಾಲಯದ ಮೇಲೆ ದಾಳಿ: ಖಲಿಸ್ತಾನಿಗಳಿಂದ ಕೃತ್ಯದ ಶಂಕೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.