ಮುಂಬೈ: ಕೊರೊನಾ ವೈರಸ್ ದಾಳಿಗೆ ದೇಶದಲ್ಲಿ ಪರಿಸ್ಥಿತಿ ದಿನನಿತ್ಯ ಹದಗೆಡುತ್ತಲೇ ಇದೆ. ಆಸ್ಪತ್ರೆಗಳಲ್ಲಿ ಔಷಧಿಗಳು, ಆಮ್ಲಜನಕ ಸೇರಿ ಲಸಿಕೆಯ ಕೊರತೆ ಸಹ ಎದುರಾಗಿದೆ. ಈ ನಡುವೆ ಈ ಪರಿಸ್ಥಿತಿ ಎದುರಿಸಲು ಅನೇಕ ಬಾಲಿವುಡ್ ನಟರು ನೆರವಿನ ಹಸ್ತ ಚಾಚುತ್ತಿದ್ದು, ಈ ಸಾಲಿಗೆ ಈಗ ನಟ ಅನುಪಮ್ ಖೇರ್ ಸೇರ್ಪಡೆಗೊಂಡಿದ್ದಾರೆ.
ಕೊರೊನಾ ವಿರುದ್ಧದ ಹೋರಾಟಕ್ಕಾಗಿ ‘ಪ್ರಾಜೆಕ್ಟ್ ಹೀಲ್ ಇಂಡಿಯಾ’ ಎಂಬ ಅಭಿಯಾನ ಆರಂಭಿಸಿದ್ದು, ಇದರ ಅಡಿಯಲ್ಲಿ ಭಾರತದಾದ್ಯಂತ ಉಚಿತ ವೈದ್ಯಕೀಯ ನೆರವು ಮತ್ತು ಇತರೆ ಪರಿಹಾರ ಸೇವೆ ಒದಗಿಸಲು ಮುಂದಾಗಿದ್ದಾರೆ.
ಇದಕ್ಕಾಗಿ ಆಮ್ಲಜನಕ ಸಾಂದ್ರಕಗಳು, ವೆಂಟಿಲೇಟರ್ ಸೇರಿದಂತೆ ಅಗತ್ಯ ಉಪಕರಣ ಖರೀದಿಯಲ್ಲಿ ಸಂಸ್ಥೆ ತೊಡಗಿದ್ದು, ಕೆಲವೇ ದಿನಗಳಲ್ಲಿ ಅಗತ್ಯ ಇರುವವರಿಗೆ ವಿತರಿಸಲು ಮುಂದಾಗಿದ್ದಾರೆ.
ಇದನ್ನೂ ಓದಿ: ಕೋವಿಡ್ ಅನುಭವದ ಕುರಿತು ಪುಸ್ತಕ ಬರೆದ ನಟ ಅನುಪಮ್ ಖೇರ್