ಚೆನ್ನೈ(ತಮಿಳುನಾಡು): ಖಚಿತ ಮಾಹಿತಿಯ ಆಧಾರದ ಮೇಲೆ ದಾಳಿ ನಡೆಸಿರುವ ಚೆನ್ನೈ ಪೊಲೀಸರು ಪುರಾತನ ಹಿಂದೂ ದೇವತೆಗಳ ವಿಗ್ರಹಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಇದರಲ್ಲಿ ಪ್ರಮುಖವಾಗಿ ನಟರಾಜ, ಶಿವ ಮತ್ತು ವಿಷ್ಣುವಿನ ವಿಗ್ರಹಗಳು ಸೇರಿವೆ. ಪಾಂಡಿಚೇರಿಯ ಸಫ್ರೆನ್ ರಸ್ತೆಯಲ್ಲಿ ವಿಗ್ರಹಗಳು ದೊರೆತಿದೆ.
ಈ ಎಲ್ಲ ವಿಗ್ರಹಗಳು ಪುದುಚೇರಿಯ ಜೋಸೆಫ್ ಕೊಲಂಬಾನಿ ಎಂಬುವವರ ವಶದಲ್ಲಿದ್ದವು. ಆದರೆ, ಇವುಗಳಿಗೆ ಸಂಬಂಧಿಸಿದಂತೆ ಯಾವುದೇ ಖಚಿತ ದಾಖಲೆ ಇರಲಿಲ್ಲ. ಸುಮಾರು 600 ವರ್ಷಗಳಷ್ಟು ಹಳೆಯದಾದ ವಿಗ್ರಹಗಳು ಇವಾಗಿವೆ ಎಂದು ಹೇಳಲಾಗ್ತಿದ್ದು, ಹಿಂದೂ ದೇವಾಲಯಗಳಿಂದ ಕಳ್ಳತನ ಮಾಡಲಾಗಿದೆ ಎಂಬ ಶಂಕೆ ವ್ಯಕ್ತಪಡಿಸಲಾಗಿದೆ.
ಇದನ್ನೂ ಓದಿ: ಒಂದೇ ಗಂಟೆಯಲ್ಲಿ ನಿಮ್ಮ ಬ್ಯಾಂಕ್ ಖಾತೆಗೆ PF ಹಣ: ನೀವು ಮಾಡಬೇಕಾದ್ದಿಷ್ಟೇ..
ಲಭ್ಯವಾಗಿರುವ ಮಾಹಿತಿ ಪ್ರಕಾರ, ಚೋಳ ಮತ್ತು ವಿಜಯನಗರ ಸಾಮ್ರಾಜ್ಯದ ಕಾಲಕ್ಕೆ ಸೇರಿರುವ ವಿಗ್ರಹಗಳು ಇವಾಗಿದ್ದು, 23 ಕೆಜಿ ತೂಕದ ನಟರಾಜನ ವಿಗ್ರಹದ ಮೌಲ್ಯ 6 ಕೋಟಿ ರೂ. ಆಗಿದ್ದು, ಉಳಿದೆರಡು ವಿಗ್ರಹಗಳ ಮೌಲ್ಯ ತಲಾ 3 ಕೋಟಿ ರೂ ಎಂದು ಹೇಳಲಾಗಿದೆ. ಈ ವಿಗ್ರಹಗಳು ಮೂಲತಃ ಯಾವ ದೇವಾಲಯಕ್ಕೆ ಸೇರಿವೆ ಎಂಬುದರ ಬಗ್ಗೆ ತನಿಖೆ ನಡೆಯುತ್ತಿದೆ. ಆರೋಪಿಗಳು ವಿಗ್ರಹಗಳನ್ನು ಫ್ರಾನ್ಸ್ಗೆ ಕಳ್ಳಸಾಗಣೆ ಮಾಡಲು ಯತ್ನ ನಡೆಸಿ, ವಿಫಲರಾಗಿದ್ದರು ಎಂದು ತಿಳಿದು ಬಂದಿದೆ.