ಪಹಲ್ಗಾಮ್ (ಜಮ್ಮು ಮತ್ತು ಕಾಶ್ಮೀರ) : ಅಮರನಾಥ ಯಾತ್ರೆ ಇಂದಿನಿಂದ ಪ್ರಾರಂಭವಾಗಿದೆ. ಪಹಲ್ಗಾಮ್ ನನ್ವಾನ್ ಬೇಸ್ ಕ್ಯಾಂಪ್ಯಿಂದ ಅಮರನಾಥ ಯಾತ್ರಾರ್ಥಿಗಳ ಮೊದಲ ತಂಡವು ಶಿವಲಿಂಗದ ದರ್ಶನಕ್ಕಾಗಿ ತೆರಳಿದ್ದು, ಡೆಪ್ಯುಟಿ ಕಮಿಷನರ್ ಅನಂತನಾಗ್ ಸೈಯದ್ ಫಕ್ರುದ್ದೀನ್ ಹಮೀದ್ ಮತ್ತು ಅಮರನಾಥ ಯಾತ್ರೆಯ ನೋಡಲ್ ಅಧಿಕಾರಿ ಡಾ. ಪಿಯೂಷ್ ಸಿಂಗ್ಲಾ ಅವರು 1,997 ಮಂದಿಯ ಮೊದಲ ಬ್ಯಾಚ್‌ಗೆ ಚಾಲನೆ ನೀಡಿದರು.
-
#WATCH | J&K: Administration flags off first batch of pilgrims from Pahalgam to Amarnath Cave for Amarnath Yatra 2023. pic.twitter.com/rL44HxmWDw
— ANI (@ANI) July 1, 2023 " class="align-text-top noRightClick twitterSection" data="
">#WATCH | J&K: Administration flags off first batch of pilgrims from Pahalgam to Amarnath Cave for Amarnath Yatra 2023. pic.twitter.com/rL44HxmWDw
— ANI (@ANI) July 1, 2023#WATCH | J&K: Administration flags off first batch of pilgrims from Pahalgam to Amarnath Cave for Amarnath Yatra 2023. pic.twitter.com/rL44HxmWDw
— ANI (@ANI) July 1, 2023
ಇದಕ್ಕೂ ಮುನ್ನ ಶುಕ್ರವಾರ ದಕ್ಷಿಣ ಕಾಶ್ಮೀರದ ಭಗವತಿ ನಗರ ಬೇಸ್ ಕ್ಯಾಂಪ್‌ನಿಂದ ಯಾತ್ರಾರ್ಥಿಗಳಿಗೆ ಜಮ್ಮು ಮತ್ತು ಕಾಶ್ಮೀರ ಲೆಫ್ಟಿನೆಂಟ್ ಗವರ್ನರ್ ಮನೋಜ್ ಸಿನ್ಹಾ ಚಾಲನೆ ನೀಡಿದ್ದರು. 3,880 ಮೀಟರ್ ಎತ್ತರದಲ್ಲಿರುವ ಅಮರನಾಥ ದೇಗುಲಕ್ಕೆ ಮೊದಲ ಬ್ಯಾಚ್‌ನಲ್ಲಿ 3,400 ಕ್ಕೂ ಹೆಚ್ಚು ಮಂದಿ ಭಕ್ತರು ಯಾತ್ರೆ ಆರಂಭಿಸಿದ್ದಾರೆ.
ಯಾತ್ರಾರ್ಥಿಗಳಿಗೆ ಗಂಡರ್‌ಬಾಲ್ ಜಿಲ್ಲೆಯ ಬಾಲ್ಟಾಲ್ ಮತ್ತು ಪಹಲ್ಗಾಮ್‌ನಲ್ಲಿರುವ ಕ್ಯಾಂಪಸ್‌ಗಳಲ್ಲಿ ವಸತಿ ಸೌಲಭ್ಯ ಕಲ್ಪಿಸಲಾಗಿತ್ತು. ಶನಿವಾರ (ಇಂದು) ಬೆಳಗ್ಗೆ 'ಬಾಬಾ ಬರ್ಫಾನಿ' ದರ್ಶನ ಪಡೆದ ಬಳಿಕ ಅಧಿಕೃತವಾಗಿ ಅಮರನಾಥ ಯಾತ್ರೆ 2023 ಅನ್ನು ಪ್ರಾರಂಭಿಸಲಾಗಿದೆ.
-
#WATCH | J&K: Administration flags off first batch of pilgrims from Baltal to Amarnath Cave for Amarnath Yatra 2023. pic.twitter.com/PfMImGHdco
— ANI (@ANI) July 1, 2023 " class="align-text-top noRightClick twitterSection" data="
">#WATCH | J&K: Administration flags off first batch of pilgrims from Baltal to Amarnath Cave for Amarnath Yatra 2023. pic.twitter.com/PfMImGHdco
— ANI (@ANI) July 1, 2023#WATCH | J&K: Administration flags off first batch of pilgrims from Baltal to Amarnath Cave for Amarnath Yatra 2023. pic.twitter.com/PfMImGHdco
— ANI (@ANI) July 1, 2023
ಅಮರನಾಥ ಯಾತ್ರೆಯನ್ನು ಶಾಂತಿಯುತವಾಗಿ ನಡೆಸಲು ಬಿಗಿ ಭದ್ರತೆ ಕೈಗೊಳ್ಳಲಾಗಿದೆ. ಸೂಕ್ತ ಭದ್ರತೆಗಾಗಿ ಪೊಲೀಸ್, ಸಿಆರ್‌ಪಿಎಫ್, ಐಟಿಬಿಪಿ ಮತ್ತು ಸೇನೆಯನ್ನು ನಿಯೋಜಿಸಲಾಗಿದೆ. ಜೊತೆಗೆ ಯಾತ್ರಾರ್ಥಿಗಳ ರಕ್ಷಣೆಗೆ ಹೆಚ್ಚುವರಿಯಾಗಿ 85 ಸಿಆರ್‌ಪಿಎಫ್ ಸಿಬ್ಬಂದಿ ನಿಯೋಜಿಸಲಾಗಿದೆ. ಈ ಮಧ್ಯೆ, ಜಿಲ್ಲಾಡಳಿತವು ಜಮ್ಮು-ಶ್ರೀನಗರ ರಾಷ್ಟ್ರೀಯ ಹೆದ್ದಾರಿಗಾಗಿ ಹೊಸ ಸಂಚಾರ ಯೋಜನೆಯನ್ನು ಸಿದ್ಧಪಡಿಸಿದೆ, ಇದರಲ್ಲಿ ಯಾತ್ರಾರ್ಥಿಗಳ ಸುಗಮ ಸಂಚಾರವನ್ನು ಖಚಿತಪಡಿಸಿಕೊಳ್ಳಲು ಯಾತ್ರೆಯ ಸಮಯದಲ್ಲಿ ನಾಗರಿಕ ಸಂಚಾರವನ್ನು ನಿರ್ಬಂಧಿಸಲಾಗಿದೆ.
-
#WATCH | Amarnath Yatra 2023: First batch of pilgrims begin yatra from Baltal base camp in Ganderbal, J&K to Amarnath Cave. pic.twitter.com/L4AUwjfGYU
— ANI (@ANI) July 1, 2023 " class="align-text-top noRightClick twitterSection" data="
">#WATCH | Amarnath Yatra 2023: First batch of pilgrims begin yatra from Baltal base camp in Ganderbal, J&K to Amarnath Cave. pic.twitter.com/L4AUwjfGYU
— ANI (@ANI) July 1, 2023#WATCH | Amarnath Yatra 2023: First batch of pilgrims begin yatra from Baltal base camp in Ganderbal, J&K to Amarnath Cave. pic.twitter.com/L4AUwjfGYU
— ANI (@ANI) July 1, 2023
ಯಾತ್ರೆ ಹಿನ್ನೆಲೆಯಲ್ಲಿ ನಿಯೋ ಯೋಗ ಟನಲ್ ಖಾಜಿಗುಂಡ್‌ನಿಂದ ಅಮರನಾಥ ಘಪ್ಪಾ ವರೆಗೆ ಬಿಗಿ ಭದ್ರತೆ ಕಲ್ಪಿಸಲಾಗಿದೆ. ಅಮರನಾಥ ಗುಫಾ ಸುತ್ತ ಸಿಆರ್‌ಪಿಎಫ್ ಬದಲಿಗೆ ಐಟಿಬಿ ಜವಾನರನ್ನು ನಿಯೋಜಿಸಲಾಗಿದೆ. ಭದ್ರತಾ ಪಡೆಗಳಿಂದ ಅಲ್ಲಲ್ಲಿ ಬಂಕರ್‌ಗಳು ಮತ್ತು ಬ್ಯಾರಿಕೇಡ್‌ಗಳನ್ನು ಅಳವಡಿಸಲಾಗಿದ್ದು, ಯಾತ್ರಾರ್ಥಿಗಳ ಭದ್ರತೆಯ ದೃಷ್ಟಿಯಿಂದ ವಿಶೇಷವಾಗಿ ಜಮ್ಮು-ಶ್ರೀನಗರ ರಾಷ್ಟ್ರೀಯ ಹೆದ್ದಾರಿಯಲ್ಲಿ ವಾಹನಗಳನ್ನು ತಪಾಸಣೆ ಮತ್ತು ಗುರುತಿನ ಚೀಟಿಗಳನ್ನು ಪರಿಶೀಲಿಸಲಾಗುತ್ತಿದೆ.
ಇದನ್ನೂ ಓದಿ : Amarnath Yatra 2023: ಅಮರನಾಥ ಯಾತ್ರೆ ಆರಂಭ... ಬಿಗಿ ಭದ್ರತೆಯಲ್ಲಿ ಯಾತ್ರೆಗೆ ಹೊರಟ ಮೊದಲ ಬ್ಯಾಚ್ - ವಿಡಿಯೋ
ಜು.1ರಿಂದ ಆ.31ರ ವರೆಗೆ 62 ದಿನಗಳ ಕಾಲ ಈ ವರ್ಷದ ಅಮರನಾಥ ಯಾತ್ರೆ ನಡೆಯಲಿದೆ. 2 ಮಾರ್ಗಗಳಲ್ಲಿ, ಅನಂತ್‌ನಾಗ್ ಜಿಲ್ಲೆಯ ನನ್ವಾನ್-ಪಹಲ್ಗಾಮ್ 48 ಕಿ.ಮೀ. ಮಾರ್ಗ ಹಾಗೂ ಗಂಡೆರ್‌ಬಾಲ್ ಜಿಲ್ಲೆಯ ಬಲ್ತಾಳ್‌ನ 14 ಕಿ.ಮೀ ಮಾರ್ಗವಾಗಿ ಭಕ್ತರು ಯಾತ್ರೆ ಮಾಡಲಿದ್ದಾರೆ. ಯಾತ್ರಾರ್ಥಿಗಳಿಗೆ ಆಡಳಿತದಿಂದ ಹೆಲಿಕಾಪ್ಟರ್ ಸೇವೆ ಸೇರಿದಂತೆ ವಿಮಾ ಸೌಲಭ್ಯವನ್ನೂ ಒದಗಿಸಲಾಗಿದೆ. ಈ ವರ್ಷ ಸುಮಾರು 9 ಲಕ್ಷ ಯಾತ್ರಾರ್ಥಿಗಳು ಆಗಮಿಸುವ ನಿರೀಕ್ಷೆಯಿದೆ ಎಂದು ಸರ್ಕಾರ ಹೇಳಿಕೊಂಡಿದೆ.
ಇದನ್ನೂ ಓದಿ : ಅಮರನಾಥ ಯಾತ್ರಿಕರು ತೆರಳುತ್ತಿದ್ದ ಬಸ್ ಭೀಕರ ಅಪಘಾತ.. 13 ಮಂದಿಗೆ ಗಾಯ.. ವಿಡಿಯೋ