ಹರಿದ್ವಾರ, ಉತ್ತರಾಖಂಡ್: ಹರಿದ್ವಾರದಲ್ಲಿ ನಡೆದ ಧರ್ಮ ಸಂಸದ್ನ ದ್ವೇಷಪೂರಿತ ಭಾಷಣ ವಿಚಾರಕ್ಕೆ ಸಂಬಂಧಿಸಿದಂತೆ ವಿವಾದ ಇನ್ನೂ ತಣ್ಣಗಾಗಿಲ್ಲ. ಹರಿದ್ವಾರ ಧರ್ಮ ಸಂಸದ್ನ ವಿವಾದದ ಕರಿನೆರಳು ಉತ್ತರಪ್ರದೇಶದ ಅಲಿಗಢದಲ್ಲಿ ಜನವರಿ 22 ಮತ್ತು 23ರಂದು ನಡೆಯಲಿರುವ ಧರ್ಮ ಸಂಸದ್ ಸಮಾರಂಭಕ್ಕೆ ತೊಡಕುಗಳನ್ನು ಉಂಟುಮಾಡುತ್ತಿದೆ.
ಹರಿದ್ವಾರದಲ್ಲಿ ನಡೆದ ಧರ್ಮ ಸಂಸದ್ನಲ್ಲಿ ಧಾರ್ಮಿಕ ದ್ವೇಷ ಬಿತ್ತುವ ಭಾಷಣಗಳನ್ನು ನಡೆಸಿದ್ದರು ಎಂಬ ಆರೋಪದ ಮೇಲೆ ನಿರಂಜನಿ ಅಖಾಡದ ಮಹಾಮಂಡಲೇಶ್ವರರಾದ ಅನ್ನಪೂರ್ಣ ಭಾರತಿ ಮೇಲೆ ಕೆಲವರು ಕರೆಗಳು ಮತ್ತು ಸಂದೇಶದ ಮೂಲಕ ಬೆದರಿಕೆ ಹಾಕುತ್ತಿದ್ದಾರೆ. ಇವರು ಉತ್ತರ ಪ್ರದೇಶದಲ್ಲಿ ಅಲಿಗಢದ ರಾಮ್ಲೀಲಾ ಮೈದಾನದಲ್ಲಿ ನಡೆಯಲಿರುವ ಧರ್ಮ ಸಂಸದ್ನ ಸಂಚಾಲಕರಾಗಿದ್ದು, ಈ ಸಮಾರಂಭಕ್ಕೂ ತೊಡಕಾಗಿ ಪರಿಣಮಿಸಿವೆ.
ಅನ್ನಪೂರ್ಣ ಭಾರತಿ ಧರ್ಮ ಸಂಸದ್ ಸಂಚಾಲಕರಾಗಿದ್ದಾರೆ ಎಂದು ಸ್ವಾಮಿ ಯತಿ ನರಸಿಂಹಾನಂದ ಗಿರಿ ತಿಳಿಸಿದ್ದು, ಕೆಲವು ಜಿಹಾದಿಗಳು ಫೋನ್ ಮೂಲಕ ಅವರಿಗೆ ಬೆದರಿಕೆ ಹಾಕುತ್ತಿದ್ದಾರೆ. ಹಿಂದುತ್ವಕ್ಕಾಗಿ ಹೋರಾಡುತ್ತಿರುವ ಅನ್ನಪೂರ್ಣ ಭಾರತಿ ಅವರಿಗೆ ಆದಷ್ಟು ಬೇಗ ಭದ್ರತೆ ಒದಗಿಸಲು ಕೇಂದ್ರ ಗೃಹ ಸಚಿವ ಅಮಿತ್ ಶಾ ಮತ್ತು ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ಕ್ರಮ ಕೈಗೊಳ್ಳಬೇಕೆಂದು ನರಸಿಂಹಾನಂದ ಗಿರಿ ಒತ್ತಾಯಿಸಿದ್ದಾರೆ.
ಇದರ ಜೊತೆಗೆ ಮಹಿಳೆಯಾಗಿರುವ ಆಕೆಗೆ ಇಂತಹ ಬೆದರಿಕೆಗಳು ಬರುವುದು ತಪ್ಪು. ಆದ್ದರಿಂದ ಆದಷ್ಟು ಬೇಗ ಅನ್ನಪೂರ್ಣ ಭಾರತಿಗೆ ರಕ್ಷಣೆ ನೀಡಬೇಕು ಎಂದಿರುವ ನರಸಿಂಹಾನಂದ ಗಿರಿ , ಅನ್ನಪೂರ್ಣ ಭಾರತಿ ಇಂತಹ ಬೆದರಿಕೆಗಳಿಗೆ ಹೆದರುವುದಿಲ್ಲ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಅಲಿಗಢದಲ್ಲಿ ಧರ್ಮ ಸಂಸದ್ ನಡೆದ ನಂತರ ಹಿಮಾಚಲ ಪ್ರದೇಶದಲ್ಲೂ ಧರ್ಮ ಸಂಸದ್ ನಡೆಯಲಿದ್ದು, ಈ ಮೊದಲು ಹರಿದ್ವಾರದಲ್ಲಿ ನಡೆದಿತ್ತು.
ಹರಿದ್ವಾರದಲ್ಲಿ ಧರ್ಮ ಸಂಸದ್ ಕಾರ್ಯಕ್ರಮದಲ್ಲಿ ದ್ವೇಷ ಪೂರಿತ ಹೇಳಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ಜಿತೇಂದ್ರ ನಾರಾಯಣ ಸಿಂಗ್ ತ್ಯಾಗಿ (ವಾಸಿಂ ರಿಜ್ವಿ), ಅನ್ನಪೂರ್ಣ ಭಾರತಿ, ಸಾಗರ್ ಸಿಂಧು ಮಹಾರಾಜ್ ಮತ್ತು ಯತಿ ನರಸಿಂಹಾನಂದ ಗಿರಿ ಅವರ ಮೇಲೆ ದೂರು ದಾಖಲಾಗಿದೆ.
ಇದನ್ನೂ ಓದಿ: Bulli Bai App Case : ಮತ್ತೊಬ್ಬ ಆರೋಪಿ ಬಂಧನ, ಮಾಸ್ಟರ್ಮೈಂಡ್ ಶ್ವೇತಾ ಸಿಂಗ್ ಇಂದು ಕೋರ್ಟ್ಗೆ ಹಾಜರು