ETV Bharat / bharat

Senthil Balaji Case: ಸೆಂಥಿಲ್ ಬಾಲಾಜಿ ಬಂಧನಕ್ಕೆ ರಾಜಕೀಯ ಬಣ್ಣ ಬೇಡ, ಇದೊಂದು ಕಾನೂನು ಪ್ರಕ್ರಿಯೆ- ಅಣ್ಣಾಮಲೈ - Senthil Balaji Case

ತಮಿಳುನಾಡು ಸಚಿವ ಸೆಂಥಿಲ್ ಬಾಲಾಜಿ ಬಂಧನದ ಬಗ್ಗೆ ಬಿಜೆಪಿ ರಾಜ್ಯಾಧ್ಯಕ್ಷ ಕೆ.ಅಣ್ಣಾಮಲೈ ಪ್ರತಿಕ್ರಿಯೆ ನೀಡಿದ್ದಾರೆ.

Annamalai posts old video of Tamil Nadu CM Stalin criticising Senthil Balaji's 'corruption'

author img

By

Published : Jun 14, 2023, 6:30 PM IST

ಚೆನ್ನೈ (ತಮಿಳುನಾಡು): ಸೆಂಥಿಲ್ ಬಾಲಾಜಿ ಅವರ ಬಂಧನ ಯಾವುದೇ ಸೇಡಿನ ರಾಜಕಾರಣವಲ್ಲ ಎಂದು ಮಿಳುನಾಡು ಬಿಜೆಪಿ ರಾಜ್ಯಾಧ್ಯಕ್ಷ ಕೆ.ಅಣ್ಣಾಮಲೈ ಬುಧವಾರ ಹೇಳಿದ್ದಾರೆ. ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಜಾರಿ ನಿರ್ದೇಶನಾಲಯದಿಂದ ಬಂಧನಕ್ಕೆ ಒಳಗಾಗಿರುವ ತಮಿಳುನಾಡು ಸಚಿವ ಸೆಂಥಿಲ್‌ ಬಾಲಾಜಿ ಅವರ ಕುರಿತು ಇಲ್ಲಿನ ಬಿಜೆಪಿ ರಾಜ್ಯ ಪ್ರಧಾನ ಕಚೇರಿಯಲ್ಲಿ ಪ್ರತಿಕ್ರಿಯೆ ನೀಡಿರುವ ಅಣ್ಣಾಮಲೈ, ಡಿಎಂಕೆ ನಾಯಕ ಮತ್ತು ತಮಿಳುನಾಡು ಪವರ್​ ಮಿನಿಸ್ಟರ್​ ಸೆಂಥಿಲ್ ಬಾಲಾಜಿ ಬಂಧನ ರಾಜಕೀಯ ದುರುದ್ದೇಶದಿಂದ ಅಲ್ಲ, ಕಾನೂನಿನ ಚೌಕಟ್ಟಿನಲ್ಲಿ ಏನು ನಡೆಯಬೇಕೋ ಅದು ನಡೆದಿದೆ. ಇದರಲ್ಲಿ ರಾಜಕೀಯ ಬೆರೆಸಬೇಡಿ ಎಂದು ಹೇಳಿದ್ದಾರೆ.

  • #WATCH "In 2016, when MK Stalin was the opposition leader, he went to Senthil Balaji's house and also said that Balaji is a corrupt person in this case. In 2018, after S Balaji joined DMK, CM is saying that he is innocent. In 2016, when I-T Dept raided TN Chief Secy's office, MK… pic.twitter.com/bXr81GSN7N

    — ANI (@ANI) June 14, 2023 " class="align-text-top noRightClick twitterSection" data=" ">

ಸುಪ್ರೀಂ ಕೋರ್ಟ್ ನಿರ್ದೇಶನದ ಮೇರೆಗೆ ಸೆಂಥಿಲ್ ಬಾಲಾಜಿ ಅವರ ನಿವಾಸದ ಮೇಲೆ ಜಾರಿ ನಿರ್ದೇಶನಾಲಯ (ಇಡಿ) ದಾಳಿ ನಡೆಸಿದೆ. ಉದ್ಯೋಗ ಹಗರಣಕ್ಕೆ ಸಂಬಂಧಿಸಿದಂತೆ ಹೆಚ್ಚಿನ ವಿಚಾರಣೆಗಾಗಿ ಇಡಿ ದಾಳಿ ನಡೆಸಿ ಅವರನ್ನು ವಶಕ್ಕೆ ಪಡೆದಿದೆ. ಇದು ಸೇಡಿನ ರಾಜಕಾರಣವಲ್ಲ. ಬಿಜೆಪಿ ಪಕ್ಷಕ್ಕೆ ಅದರ ಅವಶ್ಯಕತೆಯೂ ಇಲ್ಲ ಎಂದರು.

ಈಗಿನ ತಮಿಳುನಾಡು ಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್ 2016ರಲ್ಲಿ ಪ್ರತಿಪಕ್ಷದ ನಾಯಕರಾಗಿದ್ದಾಗ ಎಐಎಡಿಎಂಕೆಯಲ್ಲಿದ್ದ ಸೆಂಥಿಲ್ ಬಾಲಾಜಿ ಅವರನ್ನು ಭ್ರಷ್ಟ ಎಂದು ಕರೆದಿದ್ದರು. ಸೆಂಥಿಲ್ ಬಾಲಾಜಿ ವಿರುದ್ಧದ ಆರೋಪಗಳ ಬಗ್ಗೆ ನ್ಯಾಯಯುತ ತನಿಖೆ ಮಾಡುವಂತೆ ಸ್ಟಾಲಿನ್ ಸ್ವತಃ ಅಂದು ಕರೆ ನೀಡಿದ್ದರು. 2016ರಲ್ಲಿ ಮುಖ್ಯ ಕಾರ್ಯದರ್ಶಿ ಕಚೇರಿ ಮೇಲೆ ಐಟಿ ಇಲಾಖೆ ದಾಳಿ ನಡೆಸಿದಾಗ ಸ್ಟಾಲಿನ್ ಸ್ವಾಗತಿಸಿದ್ದರು. 2018ರಲ್ಲಿ ಬದಲಾದ ರಾಜಕೀಯ ಸನ್ನಿವೇಶದಿಂದ ಬಾಲಾಜಿ ಅವರು ಡಿಎಂಕೆ ಸೇರಿದರು. ಡಿಎಂಕೆ ಪಕ್ಷ ಸೇರಿದ ತಕ್ಷಣ ನಿರಪರಾಧಿಯಾಗುತ್ತಾರಾ ಎಂದು ಪ್ರಶ್ನೆ ಮಾಡಿದ ಅಣ್ಣಾಮಲೈ, ಮುಖ್ಯಮಂತ್ರಿಗಳು ಸೇರಿದಂತೆ ಯಾರೇ ಆಗಲಿ, ಇಡಿ ತನಿಖೆಗೆ ಸಹಕರಿಸಬೇಕು. ವ್ಯತಿರಿಕ್ತ ಹೇಳಿಕೆಗಳನ್ನು ನೀಡುವ ಮೂಲಕ ರಾಜ್ಯದ ಪ್ರತಿಷ್ಠೆಯನ್ನು ಹಾಳು ಮಾಡಬಾರದು ಮನವಿ ಮಾಡಿದ್ದಾರೆ.

ಸುಪ್ರೀಂ ಕೋರ್ಟ್ ನಿರ್ದೇಶನದ ಮೇರೆಗೆ ಇಡಿ ದಾಳಿ ಮಾಡಿದೆ. ಪ್ರತಿಪಕ್ಷಗಳು ಇದನ್ನು ರಾಜಕೀಯಗೊಳಿಸುತ್ತಿದ್ದಾರೆ. ಒಂದು ಕಾಲದಲ್ಲಿ ಸರಿ ಅನ್ನುತ್ತಿದ್ದವರೇ ಇಂದು ಇಡಿ ಸೆಕ್ರೆಟರಿಯೇಟ್‌ಗೆ ಪ್ರವೇಶಿಸುವುದು ತಪ್ಪು ಎಂದು ಹೇಳುತ್ತಿದ್ದಾರೆ. ಇದು ಯಾವ ರಾಜಕಾರಣ ಎಂದು ಗೊತ್ತಾಗುತ್ತಿಲ್ಲ. ಡಿಎಂಕೆ ಮತ್ತು ಅದರ ಮಿತ್ರಪಕ್ಷಗಳನ್ನು ಬಗ್ಗುಬಡಿಯಲು ಇಡಿ ಮತ್ತು ಆದಾಯ ತೆರಿಗೆಯಂತಹ ಕೇಂದ್ರೀಯ ಸಂಸ್ಥೆಗಳನ್ನು ಭಾರತೀಯ ಜನತಾ ಪಾರ್ಟಿ ತನ್ನ ಕೈಗೊಂಬೆಯಾಗಿ ಮಾಡಿಕೊಂಡಿದೆ ಎಂದು ಆರೋಪ ಮಾಡುತ್ತಿದ್ದಾರೆ. ಇದು ಸತ್ಯಕ್ಕೆ ದೂರವಾದ ಮಾತು ಎಂದು ಅಣ್ಣಾಮಲೈ ಹೇಳಿದ್ದಾರೆ.

ಇಡಿ ಸೆಂಥಿಲ್ ಬಾಲಾಜಿಯನ್ನು ಬಂಧಿಸಿದ ದಿನವೇ ಅವರನ್ನು ಸಚಿವ ಸ್ಥಾನದಿಂದ ಕೆಳಗಿಳಿಸಬೇಕು. ಒಂದು ತಿಂಗಳ ಹಿಂದೆ ಸೆಂಥಿಲ್ ಬಾಲಾಜಿ ಅವರನ್ನು ಸಚಿವ ಸ್ಥಾನದಿಂದ ವಜಾಗೊಳಿಸಬೇಕೆಂದು ರಾಜ್ಯಪಾಲರಿಗೆ ನಾವು ಮನವಿ ಸಲ್ಲಿಸಿದ್ದೆವು. ಅಲ್ಲದೇ ಸೆಂಥಿಲ್ ಬಾಲಾಜಿ ವಿರುದ್ಧ ಚಾರ್ಜ್‌ಶೀಟ್ ಸಲ್ಲಿಸುವಂತೆ ತಮಿಳುನಾಡು ಪೊಲೀಸರಿಗೆ ಸುಪ್ರೀಂ ಕೋರ್ಟ್ ನಿರ್ದೇಶನ ನೀಡಿದ್ದರೂ ಮುಖ್ಯಮಂತ್ರಿ ಈ ಬಗ್ಗೆ ಕ್ರಮ ಕೈಗೊಳ್ಳಲಿಲ್ಲ. ಅವರ ಅಹಂಕಾರವೇ ಅವರನ್ನು ಕಾಡುತ್ತಿದೆ. ಅವರನ್ನು ಸಚಿವ ಸ್ಥಾನದಿಂದ ತೆಗೆಯದಿರುವುದು ಸಹಜ ನ್ಯಾಯದ ತತ್ವಕ್ಕೆ ಅಪಚಾರ. ಮೊದಲು ಆ ಕೆಲಸ ಮಾಡಬೇಕು ಎಂದು ಅಣ್ಣಾಮಲೈ ಒತ್ತಾಯಿಸಿದರು.

  • #WATCH | I condemn the harassment of the TN minister Senthil Balaji by ED. What was the need to arrest him in the night? Opposition parties will not be scared by all this, says Congress Pres Mallikarjun Kharge on ED action against V Senthil Balaji in a money laundering case. pic.twitter.com/4HplnjV58m

ಇದೇ ವೇಳೆ ಮಾಜಿ ಮುಖ್ಯಮಂತ್ರಿ ದಿವಂಗತ ಜಯಲಲಿತಾ ಅವರ ಬಗ್ಗೆ ಪ್ರತಿಕ್ರಿಯಿಸಿದ ಅಣ್ಣಾಮಲೈ, ನಾನು ಜಯಲಲಿತಾ ಅವರನ್ನು ಅತ್ಯಂತ ಗೌರವದಿಂದ ಕಾಣುತ್ತೇನೆ. ಅವರ ಬಗ್ಗೆ ಹಲವು ಬಾರಿ ಮಾತನಾಡಿದ್ದು ನಿಜ. ಆದರೆ, ಅವರನ್ನು ಭ್ರಷ್ಟ ಮುಖ್ಯಮಂತ್ರಿ ಎಂದು ಎಲ್ಲೂ ಹೇಳಿಲ್ಲ. ನನ್ನ ಮಾತನ್ನು ತಿರುಚಲಾಗಿದೆ ಎಂದು ಈ ಹಿಂದೆ ತಾವು ಹೇಳಿದ್ದ ಹೇಳಿಕೆ ಬಗ್ಗೆ ಸ್ಪಷ್ಟೀಕರಣ ನೀಡಿದರು.

ಎಐಎಡಿಎಂಕೆ ಸರ್ಕಾರದಲ್ಲಿ ಕ್ಯಾಬಿನೆಟ್ ಸಚಿವರಾಗಿದ್ದ ಸೆಂಥಿಲ್ ಬಾಲಾಜಿ ವಿರುದ್ಧ ಡಿಎಂಕೆ ನಾಯಕ ಮಾತನಾಡುತ್ತಿರುವ ಹಳೆಯ ವಿಡಿಯೋವೊಂದನ್ನು ಕೂಡ ಕೆ.ಅಣ್ಣಾಮಲೈ ಜಾಲತಾಣದಲ್ಲಿ ಟ್ವೀಟ್​ ಹಂಚಿಕೊಂಡಿದ್ದಾರೆ. ಸೆಂಥಿಲ್ ಬಾಲಾಜಿ ಓರ್ವ ಭ್ರಷ್ಟ. ಅವರ ಬಗ್ಗೆ ತನಿಖೆಯಾಗಲಿ ಎಂದು ಕೆಲವು ವರ್ಷಗಳ ಹಿಂದೆ ನೀವೇ (ಸ್ಟಾಲಿನ್) ಆಡಿದ ಮಾತುಗಳನ್ನು ಮರೆತುಬಿಟ್ರಾ? ಎಂದು ಅಣ್ಣಾಮಲೈ ಟ್ವಿಟರ್‌ನಲ್ಲಿ ಬರೆದುಕೊಂಡಿದ್ದಾರೆ.

ಅಕ್ರಮ ಹಣ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸಚಿವ ಸೆಂಥಿಲ್ ಬಾಲಾಜಿ ಅವರನ್ನು ಇಂದು (ಜೂನ್ 14) ಇಡಿ ಅಧಿಕಾರಿಗಳು ವಿಚಾರಣೆಗಾಗಿ ವಶಕ್ಕೆ ತೆಗೆದುಕೊಂಡರು. ಅವರ ಬಂಧನವನ್ನು ತಮಿಳುನಾಡು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್, ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಸಂಸದ ಸಂಜಯ್ ರಾವುತ್, ಎನ್‌ಸಿಪಿ ಸಂಸದೆ ಸುಪ್ರಿಯಾ ಸುಳೆ ಸೇರಿದಂತೆ ಹಲವರು ಖಂಡಿಸಿದ್ದಾರೆ.

ಇಡಿ ಬುಧವಾರ ಬೆಳ್ಳಂಬೆಳಗ್ಗೆ ಬಿಗಿ ಭದ್ರತೆಯ ನಡುವೆ ಬಾಲಾಜಿಯನ್ನು ವೈದ್ಯಕೀಯ ಪರೀಕ್ಷೆಗಾಗಿ ಚೆನ್ನೈನ ಒಮಂದೂರಾರ್ ಸರ್ಕಾರಿ ಆಸ್ಪತ್ರೆಗೆ ಕರೆ ತಂದಿದೆ. ನಮ್ಮ ನಾಯಕ ಹಾಗೂ ಮಾಜಿ ಸಚಿವ ಜಯಕುಮಾರ್ ಅವರನ್ನು ಬಂಧಿಸಿದಾಗ 20 ದಿನ ಜೈಲುವಾಸ ಅನುಭವಿಸಿದ್ದರು. ಔಷಧಗಳನ್ನು ಸೇವಿಸಲು ಸಹ ಅವರಿಗೆ ಅನುಮತಿ ಇರಲಿಲ್ಲ. ಸೆಂಥಿಲ್ ಬಾಲಾಜಿ ಈಗ ನಾಟಕ ಮಾಡುತ್ತಿದ್ದಾರೆ. ನೈತಿಕ ಹೊಣೆ ಹೊತ್ತು ತಮ್ಮ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಬೇಕು ಎಂದು ತಮಿಳುನಾಡು ಲೋಪಿ ಮತ್ತು ಎಐಎಡಿಎಂಕೆ ಪ್ರಧಾನ ಕಾರ್ಯದರ್ಶಿ ಎಡಪ್ಪಾಡಿ ಕೆ. ಪಳನಿಸ್ವಾಮಿ ಒತ್ತಾಯ ಮಾಡಿದ್ದಾರೆ.

ಇದನ್ನೂ ಓದಿ: ED ವಶದಲ್ಲಿದ್ದ ಡಿಎಂಕೆ ಸಚಿವ ಸೆಂಥಿಲ್​ ಆಸ್ಪತ್ರೆಗೆ ದಾಖಲು.. ಬೈಪಾಸ್​ ಸರ್ಜರಿಗೆ ವೈದ್ಯರ ಶಿಫಾರಸು.. ಕೋರ್ಟ್​​ಗೆ ಹೇಬಿಯಸ್​ ಕಾರ್ಪಸ್​ ಅರ್ಜಿ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.