ಅಲಿಗಢ (ಉತ್ತರ ಪ್ರದೇಶ): ಅಲಿಗಢ ಜಿಲ್ಲೆಯಲ್ಲಿ ಪಶುವೈದ್ಯರೊಬ್ಬರು ಆಮೆಯ ಚಿಪ್ಪಿಗೆ ಅಪರೂಪದ ಶಸ್ತ್ರಚಿಕಿತ್ಸೆ ಮಾಡುವ ಮೂಲಕ ಜೀವದಾನ ಮಾಡಿದ್ದಾರೆ. ಆಮೆಯ ವಯಸ್ಸು ಕೇವಲ 3 ವರ್ಷಗಳು. ನಾಯಿಯು ಅಮೆಯನ್ನು ಎಳೆದಾಡಿ ಎತ್ತರದಿಂದ ಕೇಳಗೆ ಎಸೆದಿರುವುದರಿಂದ, ಅದರ ರಕ್ಷಾ ಕವಚದಲ್ಲಿ ಬಿರುಕು ಕಂಡುಬಂದಿದೆ.
ನಂತರ ಆಮೆಗೆ ನಡೆಯಲು ತೊಂದರೆಯಾಗ ತೊಡಗಿತು. ಚಿಪ್ಪಿನ ಬಿರುಕಿನಿಂದ ರಕ್ತ ಬರಲಾರಂಭಿಸಿತು. ಆಮೆಯ ಒಡೆದ ಚಿಪ್ಪಿಗೆ ಉಕ್ಕಿನ ತಂತಿಯಿಂದ ಶಸ್ತ್ರಚಿಕಿತ್ಸೆ ಮಾಡಲಾಗಿದೆ. ಇದನ್ನು ಕಟ್ಟುಪಟ್ಟಿಗಳು ಎಂದು ಕರೆಯಲಾಗುತ್ತದೆ. ಇದನ್ನು ಸಾಮಾನ್ಯವಾಗಿ ಬಾಗಿದ ಹಲ್ಲುಗಳನ್ನು ಸರಿಪಡಿಸಲು ಈ ಕಟ್ಟುಪಟ್ಟಿಗಳನ್ನು ಬಳಸಲಾಗುತ್ತದೆ.
ಆಮೆಯ ಚಿಪ್ಪು ಮುರಿದು ಗಂಭೀರ ಗಾಯ: ಕಾಸಿಂಪುರದಲ್ಲಿ ವಾಸಿಸುವ ಆಮೆಯ ಮಾಲೀಕ ಸುಧೀರ್ ಅವರು, ಕಳೆದ 3 ವರ್ಷಗಳಿಂದ ಆಮೆಯನ್ನು (ಟೊಟೊ) ಸಾಕುತ್ತಿದ್ದಾರೆ ಎಂದು ತಿಳಿಸಿದರು. ಅವರನ್ನು ಪ್ರೀತಿಯಿಂದ ಈ ಆಮೆಗೆ ಟೊಟೊ ಎಂದು ಕರೆಯುತ್ತಾರೆ. ಒಂದು ತಿಂಗಳ ಹಿಂದೆ, ಎತ್ತರದಲ್ಲಿ ಇರಿಸಲಾದ ಅಕ್ವೇರಿಯಂನಿಂದ ಆಮೆ ಬಿದ್ದಿತು. ಇದಾದ ಬಳಿಕ ಅದೇ ಸ್ಥಳದಿಂದ ನಾಯಿಯೂ ಆಮೆಯನ್ನು ಕೆಳಕ್ಕೆ ಎಸೆದಿದ್ದರಿಂದ ಆಮೆಯ ಚಿಪ್ಪಿನಲ್ಲಿ ಬಿರುಕು ಕಾಣಿಸಿಕೊಂಡಿದೆ.
ಇದರ ನಂತರ ಬಿರುಕು ಬಿಟ್ಟ ಭಾಗದಲ್ಲಿ ಸೋಂಕು ಹರಡಿತು. ಈ ಗಂಭೀರ ಗಾಯದಿಂದಾಗಿ ಆಮೆ ನೀರಿನಲ್ಲಿ ನಡೆಯಲು ಮತ್ತು ಈಜಲು ತೊಂದರೆಯಾಗಿದೆ. ಇದರಿಂದ ಮಾಲೀಕ ತನ್ನ ಆಮೆಯನ್ನು ಪಶುವೈದ್ಯರಿಗೆ ತೋರಿಸಿದ್ದಾರೆ. ಆಮೆಯ ಚಿಪ್ಪು ಅದರ ದೇಹದ ಪ್ರಮುಖ ಭಾಗವಾಗಿದ್ದು, ಅದರ ಆಂತರಿಕ ಅಂಗಗಳಿಗೆ ರಕ್ಷಣೆ ನೀಡುತ್ತದೆ. ದೇಹದ ಉಷ್ಣತೆಯನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ ಎಂದು ತಿಳಿಸಿದ್ದು, ಅದಕ್ಕೆ ಚಿಕಿತ್ಸೆ ನೀಡಲು ನಿರ್ಧರಿಸಿದ್ದಾರೆ.
ಶಸ್ತ್ರಚಿಕಿತ್ಸೆಗಾಗಿ ವಿಶೇಷ ತಂತ್ರ ಅನುಸರಿಸಿದ ವೈದ್ಯರು: ಆಮೆಯ ಚಿಪ್ಪಿನಲ್ಲಿ ಗಂಭೀರವಾದ ಬಿರುಕು ಉಂಟಾಗಿರುವ ಬಗ್ಗೆ ಆಳವಾಗಿ ಅಧ್ಯಯನ ನಡೆಸಲಾಗಿದೆ ಎಂದು ಪಶುವೈದ್ಯ ಡಾ.ವಿರಾಮ್ ವರ್ಷ್ಣೆ ತಿಳಿಸಿದ್ದಾರೆ. ಇದರ ನಂತರ, ಆಮೆ ಚಿಪ್ಪಿನ ಶಸ್ತ್ರಚಿಕಿತ್ಸೆಗೆ ವಿಶೇಷ ಬ್ರೇಸ್ ತಂತ್ರ ಬಳಸಿ ಚಿಕಿತ್ಸೆ ನೀಡಲಾಗಿದೆ. ಇದನ್ನು ಸ್ಪ್ಲಿಂಟ್ ಎಂದೂ ಕರೆಯುತ್ತಾರೆ. ಸುಮಾರು 25 ದಿನಗಳ ಹಿಂದೆ ಉಕ್ಕಿನ ತಂತಿಗಳಿಂದ ಮುರಿದ ರಕ್ಷಾ ಕವಚಕ್ಕೆ 3 ಗಂಟೆಗಳ ಕಾಲ ಶಸ್ತ್ರಚಿಕಿತ್ಸೆ ನಡೆಸಿ, ಅದರ ಆರೋಗ್ಯ ಕಾಪಾಡಲು ಶ್ರಮಿಸಲಾಗಿದೆ ಎಂದು ಡಾ.ವಿರಾಮ್ ಹೇಳಿದರು.
ಪಶುವೈದ್ಯಕೀಯ ಔಷಧದಲ್ಲಿ ಅಂತಹ ಯಾವುದೇ ತಂತ್ರವಿಲ್ಲ. ಆದರೆ, ಬಾಗಿದ ಹಲ್ಲುಗಳನ್ನು ಹೇಗೆ ಕಟ್ಟಲಾಗುತ್ತದೆ. ಅದೇ ರೀತಿಯಲ್ಲಿ ಆಮೆಯ ಚಿಪ್ಪನ್ನು ಸಂಪರ್ಕಿಸಲು ಬ್ರೇಸ್ ತಂತ್ರವನ್ನು ಬಳಸಿ ಶಸ್ತ್ರಚಿಕಿತ್ಸೆಯನ್ನು ಮಾಡಲಾಯಿತು. ಆಮೆಯ ರಕ್ಷಾ ಕವಚವನ್ನು ಉಕ್ಕಿನ ತಂತಿಗಳಿಂದ ಕಟ್ಟಿ, ಗಾಯಗಳು ಬೇಗ ವಾಸಿಯಾಗುವಂತೆ ಔಷಧಗಳನ್ನು ನೀಡಲಾಗಿದೆ ಎಂದು ಡಾ.ವಿರಾಮ್ ತಿಳಿಸಿದರು.
ವಾಸಿಯಾದ ಆಮೆಯ ಚಿಪ್ಪಿನ ಬಿರುಕು: 20 ದಿನಗಳ ನಂತರ ಆಮೆಯ ಚಿಪ್ಪಿನ ಬಿರುಕು ವಾಸಿಯಾಗಿದೆ. ಗುಣಮುಖವಾದ ನಂತರ, ಈಗ ಆಮೆ ಆರಾಮವಾಗಿ ನಡೆಯಲು ಆರಂಭಿಸಿದೆ. ಅವರು ಸಾಮಾನ್ಯವಾಗಿ ನಟ್, ಬೋಲ್ಟ್ ಮತ್ತು ರಾಡ್‌ಗಳ ಮೂಲಕ ಶಸ್ತ್ರಚಿಕಿತ್ಸೆಯ ಮೂಲಕ ಪ್ರಾಣಿಗಳಲ್ಲಿನ ಮೂಳೆಗಳು ಇತ್ಯಾದಿಗಳನ್ನು ಸರಿಪಡಿಸುತ್ತಾರೆ ಎಂದು ಅವರು ಹೇಳಿದರು. ಇಂತಹ ಪ್ರಕರಣ ಬೆಳಕಿಗೆ ಬಂದಿದ್ದು ಇದೇ ಮೊದಲು. ಮುರಿದ ಚಿಪ್ಪನ್ನು ಸರಿಪಡಿಸಿದಾಗ ಆಮೆಯು ಮೊದಲಿನಂತಾಗಿದೆ.
ಇದನ್ನೂ ಓದಿ: ವಿದ್ಯಾರ್ಥಿಗೆ ಕಚ್ಚಿದ ಪಿಟ್ ಬುಲ್ ನಾಯಿ: ಶ್ವಾನ ಮಾಲೀಕನಿಗೆ 5 ಸಾವಿರ ರೂ ದಂಡ!