ಮುಂಬೈ: ಬಹು ಕೋಟಿ ರೂಪಾಯಿ ಸುಲಿಗೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮಹಾರಾಷ್ಟ್ರದ ಮಾಜಿ ಗೃಹ ಸಚಿವ ಅನಿಲ್ ದೇಶಮುಖ್ ಅವರನ್ನು ಕೇಂದ್ರೀಯ ತನಿಖಾ ದಳ (ಸಿಬಿಐ) ಇಂದು ಮುಂಬೈನ ಆರ್ಥರ್ ರೋಡ್ ಜೈಲಿನಿಂದ ವಶಕ್ಕೆ ಪಡೆದಿದೆ. 100 ಕೋಟಿ ವಸೂಲಿ ಪ್ರಕರಣಕ್ಕೆ ಸಂಬಂಧಿಸಿದಂತೆ ಅನಿಲ್ ದೇಶಮುಖ್ ಅವರನ್ನು ಬಂಧಿಸಲು ಸಿಬಿಐ ತಂಡವು ಬೆಳಗ್ಗೆ 11 ಗಂಟೆಗೆ ಆರ್ಥರ್ ರೋಡ್ ಜೈಲಿಗೆ ಆಗಮಿಸಿತ್ತು. ನಂತರ 12 ಗಂಟೆಗೆ ಅನಿಲ್ ದೇಶಮುಖ್ ಅವರನ್ನು ಜೈಲಿನಿಂದ ಸಿಬಿಐಗೆ ಒಪ್ಪಿಸಲಾಯಿತು. ನಂತರ ವಿಶೇಷ ನ್ಯಾಯಾಲಯಕ್ಕೆ ಹಾಜರುಪಡಿಸಲಾಯಿತು.
ಇದನ್ನೂ ಓದಿ: ಹಿಂಸಾಚಾರವನ್ನು ತಕ್ಷಣವೇ ಕೊನೆಗೊಳಿಸುವುದನ್ನು ಭಾರತ ಬೆಂಬಲಿಸುತ್ತದೆ : ಸಚಿವ ಎಸ್. ಜೈಶಂಕರ್
ದೇಶ್‌ಮುಖ್ ವಿರುದ್ಧ ಸಿಬಿಐ ಹಣ ಸುಲಿಗೆ ಪ್ರಕರಣ ದಾಖಲಿಸಿತ್ತು. ದೇಶ್‌ಮುಖ್ ಅವರು ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಸಿಬಿಐ ವಿಚಾರಣೆಯಿಂದ ತಪ್ಪಿಸಿಕೊಳ್ಳಲು ಪ್ರಯತ್ನಿಸುತ್ತಿದ್ದಾರೆ. ಇದಕ್ಕಾಗಿ ಆರೋಗ್ಯ ಸಮಸ್ಯೆಯ ನೆಪಗಳನ್ನು ಹೇಳುತ್ತಿದ್ದಾರೆ ಎಂದು ಸಿಬಿಐ ವಿಶೇಷ ನ್ಯಾಯಾಲಯದಲ್ಲಿ ಕೇಂದ್ರ ತನಿಖಾ ಸಂಸ್ಥೆ ಮಂಗಳವಾರ ಆರೋಪಿಸಿತ್ತು. ಇಂದು ಸಿಬಿಐ ಅನಿಲ್ ದೇಶಮುಖ್ ಅವರನ್ನು ತನ್ನ ವಶಕ್ಕೆ ಪಡೆದಿದೆ.