ETV Bharat / bharat

ವೈದ್ಯರ ಗ್ರಾಮ ಎಂದೇ ಖ್ಯಾತವಾಗಿರುವ ಊರು ಇದು.. 2800 ಜನಸಂಖ್ಯೆಯಲ್ಲಿ 900ಕ್ಕೂ ಹೆಚ್ಚು ಮಂದಿ ಇಲ್ಲಿ ಉದ್ಯೋಗಸ್ಥರೇ..! - ಕೃಷಿಯೇ ಜೀವನಾಧಾರವಾಗಿರುವ ಪಾಲಕರು

ಆಂಧ್ರಪ್ರದೇಶದಲ್ಲಿ ವೈದ್ಯರ ಗ್ರಾಮ ಎಂದೇ ಪ್ರಸಿದ್ದಿ ಪಡೆದಿರುವು ಊರೊಂದಿದೆ.. ಕಡಿಮೆ ಜನಸಂಖ್ಯೆ ಇರುವ ಇಲ್ಲಿ ಬಹುತೇಕ ಜನರು ಸರ್ಕಾರಿ ನೌಕರರಸ್ಥರಾಗಿರುವುದು ವಿಶೇಷ.. ಯಾವುದು ಆ ಊರು ಅಂತೀರಾ.. ಈ ಸ್ಟೋರಿ ಓದಿ..

Kanugulavalasa popularly known  Kanugulavalasa as the village of doctors  Kanugulavalasa is doctors village  ವೈದ್ಯರ ಗ್ರಾಮ ಎಂದೇ ಖ್ಯಾತವಾಗಿರುವ ಊರು ಇದು  ಆಂಧ್ರಪ್ರದೇಶದಲ್ಲಿ ವೈದ್ಯರ ಗ್ರಾಮ  ಬಹುತೇಕ ಜನರು ಸರ್ಕಾರಿ ನೌಕರರಸ್ಥರಾಗಿರುವುದು ವಿಶೇಷ  ಆ ಹಳ್ಳಿಯ ಪ್ರತಿ ಮನೆಗೆ ಒಬ್ಬ ವೈದ್ಯ  ಇಡೀ ಗ್ರಾಮವೇ ವೈದ್ಯರ ಗ್ರಾಮ  ಪ್ರತಿಯೊಂದು ಕುಟುಂಬಕ್ಕೂ ಒಬ್ಬ ಡಾಕ್ಟರ್  ಕೃಷಿಯೇ ಜೀವನಾಧಾರವಾಗಿರುವ ಪಾಲಕರು
ವೈದ್ಯರ ಗ್ರಾಮ ಎಂದೇ ಖ್ಯಾತವಾಗಿರುವ ಊರು ಇದು
author img

By

Published : Feb 25, 2023, 2:19 PM IST

ಶ್ರೀಕಾಕುಳಂ, ಆಂಧ್ರಪ್ರದೇಶ: ಆ ಹಳ್ಳಿಯ ಪ್ರತಿ ಮನೆಗೆ ಒಬ್ಬ ವೈದ್ಯರಿದ್ದಾರೆ. ಜನಸಂಖ್ಯೆಯಲ್ಲಿ ಗ್ರಾಮ ಚಿಕ್ಕದಾದರೂ ವೃತ್ತಿಯ ಮೇಲಿನ ಒಲವಿನಿಂದ ಹಳ್ಳಿಗರು ತಮ್ಮ ಮಕ್ಕಳನ್ನು ವೈದ್ಯ ವೃತ್ತಿಗೆ ಸೇರಿಸಿದ್ದಾರೆ. ತಂದೆ - ತಾಯಿಯ ಆಸೆಯಂತೆ ಮಕ್ಕಳು ನಡೆದುಕೊಂಡಂತೆ.. ಕೆಲ ಕಾಲದಲ್ಲೇ ಇಡೀ ಗ್ರಾಮವೇ ವೈದ್ಯರ ಗ್ರಾಮವಾಗಿ ಮಾರ್ಪಟ್ಟಿದೆ. ವೈದ್ಯರಷ್ಟೇ ಅಲ್ಲ.. ಕೇಂದ್ರ ಮತ್ತು ರಾಜ್ಯ ಸರ್ಕಾರದ ವಿವಿಧ ಇಲಾಖೆಗಳಲ್ಲಿ ಇಲ್ಲಿನ ಜನ ಸೇವೆ ಸಲ್ಲಿಸುತ್ತಿದ್ದಾರೆ.

ಶ್ರೀಕಾಕುಳಂ ಜಿಲ್ಲೆ ಅಮುದಾಲವಲಸ ತಾಲೂಕಿನ ಕಣುಗುಳವಲಸ ಗ್ರಾಮವೂ ವೈದ್ಯರ ಗ್ರಾಮವೆಂದೇ ಪ್ರಸಿದ್ಧ. ಗ್ರಾಮದಲ್ಲಿ ಪ್ರಸ್ತುತ 2,800 ಜನಸಂಖ್ಯೆ ಇದ್ದರೆ, 900ಕ್ಕೂ ಹೆಚ್ಚು ಜನರು ಕೇಂದ್ರ ಮತ್ತು ರಾಜ್ಯ ಸರ್ಕಾರಿ ನೌಕರರಾಗಿ ನೆಲೆಸಿದ್ದಾರೆ. ಪ್ರತಿಯೊಂದು ಕುಟುಂಬಕ್ಕೂ ಒಬ್ಬ ಡಾಕ್ಟರ್, ಇಂಜಿನಿಯರ್, ಪೊಲೀಸ್ ಅಥವಾ ರೈಲ್ವೇ ಉದ್ಯೋಗಿ ಇದ್ದಾರೆ.

1970 ರಲ್ಲಿ ಚಂದ್ರರಾವ್ ಮತ್ತು ಭಾಸ್ಕರ ರಾವ್ ಎಂಬಿಬಿಎಸ್ ಓದಿದ ಮೊದಲಿಗರು.. ಯುವಕರು ಅವರನ್ನು ಸ್ಫೂರ್ತಿಯಾಗಿ ತೆಗೆದುಕೊಂಡು ವೈದ್ಯಕೀಯ ವೃತ್ತಿಯಲ್ಲಿ ಮುಂದುವರಿಯುತ್ತಿದ್ದಾರೆ. ಈ ಗ್ರಾಮದ ಹೆಚ್ಚು ಹೆಚ್ಚು ಜನರು ವೈದ್ಯಕೀಯ ವೃತ್ತಿಗೆ ಹೋಗುತ್ತಿರುವುದು ಗಮನಾರ್ಹ. ಸದ್ಯ ಗ್ರಾಮದಲ್ಲಿ 150ಕ್ಕೂ ಹೆಚ್ಚು ಪ್ರಸಿದ್ಧ ವೈದ್ಯರಿದ್ದಾರೆ. ಇವರು ದೆಹಲಿಯಿಂದ ತೆಲುಗು ರಾಜ್ಯಗಳ ಪ್ರಸಿದ್ಧ ಆಸ್ಪತ್ರೆಗಳಲ್ಲಿ ವೈದ್ಯರಾಗಿ ಸೇವೆ ಸಲ್ಲಿಸುತ್ತಿರುವುದು ವಿಶೇಷ..

ಈ ಹಿಂದೆ ನಮ್ಮ ಗ್ರಾಮದಲ್ಲಿ ಸಾಕಷ್ಟು ಜನ ಕೃಷಿ ಮಾಡುತ್ತಿದ್ದರು. ತಂದೆ ತಾಯಿಯ ಕಷ್ಟ ನೋಡಿ ಮಕ್ಕಳು ತುಂಬಾ ಕಷ್ಟಪಟ್ಟು ಓದುತ್ತಿದ್ದರು. ಆ ನಂತರ ಅನೇಕರಿಗೆ ಅಧ್ಯಾಪಕರ ಕೆಲಸ ಸಿಕ್ಕಿತು. ಅವರ ಮಕ್ಕಳೂ ಕಷ್ಟಪಟ್ಟು ಓದಿ, ಕೇಂದ್ರ ಮತ್ತು ರಾಜ್ಯ ಸರ್ಕಾರಿ ಉದ್ಯೋಗಗಳಲ್ಲಿ ನೆಲೆಸಿದರು. ಏಮ್ಸ್​ನಿಂದ ಜಿಲ್ಲಾ ಕೇಂದ್ರ ಆಸ್ಪತ್ರೆಯಲ್ಲಿ ನಮ್ಮ ಗ್ರಾಮದ ವೈದ್ಯರಿದ್ದಾರೆ. - ನೂಕರಾಜು, ಕಣುಗುಳವಲಸ ಸರಪಂಚ್​..

ನಮ್ಮ ಹಳ್ಳಿಯಲ್ಲಿ ಮಕ್ಕಳು ಬಹಳ ಶಿಸ್ತಿನಿಂದ ಓದಿ ಸರ್ಕಾರಿ ಕೆಲಸ ಗಿಟ್ಟಿಸಿಕೊಂಡಿದ್ದಾರೆ. ರೈಲ್ವೇ, ಪೊಲೀಸ್, ಸೇನೆ ಸೇರಿ ಹಲವು ಕ್ಷೇತ್ರಗಳಲ್ಲಿ ತಮ್ಮನ್ನು ತಾವು ಸ್ಥಾಪಿಸಿಕೊಂಡಿದ್ದಾರೆ. ಸದ್ಯ ನಮ್ಮ ಗ್ರಾಮದಲ್ಲಿ ಎಂಬಿಬಿಎಸ್ ಓದಿದ 120ಕ್ಕೂ ಹೆಚ್ಚು ವೈದ್ಯರು ಇದ್ದಾರೆ. - ಬೊಡ್ಡೆಪಲ್ಲಿ ನಾರಾಯಣರಾವ್, ನಿವೃತ್ತ ನೌಕರ..

ಶಿಕ್ಷಕರು, ವೈದ್ಯರು ಮತ್ತು ಇಂಜಿನಿಯರ್‌ಗಳು.. ಎಲ್ಲ ಕ್ಷೇತ್ರಗಳಲ್ಲಿ ಸರಾಸರಿ ಎರಡು ಸರ್ಕಾರಿ ಉದ್ಯೋಗಗಳು ಪ್ರತಿ ಮನೆಗೆ ಇವೆ. ಇದಕ್ಕೆ ಮುಖ್ಯ ಕಾರಣ ಶಿಕ್ಷಣಕ್ಕೆ ಹೆಚ್ಚಿನ ಆದ್ಯತೆ ನೀಡುವುದು. ಎಲ್ಲರೂ ಕೃಷಿ ಮತ್ತು ಮಧ್ಯಮ ವರ್ಗದ ಕುಟುಂಬಗಳಿಂದ ಬಂದವರು. - ಬೊಡ್ಡೆಪಲ್ಲಿ ಜನಾರ್ದನ್ ರಾವ್, ನಿವೃತ್ತ ಶಿಕ್ಷಕ

ನಮ್ಮ ಪೂರ್ವಜರು ಮಕ್ಕಳಿಗೆ ಉತ್ತಮ ಶಿಕ್ಷಣ ಕೊಡಿಸಲು ತುಂಬಾ ಶ್ರಮಿಸಿದ್ದರು. ಅವರ ಕಷ್ಟ ವ್ಯರ್ಥವಾಗಲಿಲ್ಲ. ಶಿಕ್ಷಣಕ್ಕೆ ಒತ್ತು ನೀಡಿರುವುದರಿಂದ ನಮ್ಮ ಗ್ರಾಮದ ಯುವಕರು ಯಾವುದೇ ವರ್ಗದಲ್ಲಿ ಗೋಚರಿಸುತ್ತಾರೆ. - ಶ್ರೀರಾಮಮೂರ್ತಿ, ನಿವೃತ್ತ ಶಿಕ್ಷಕ..

ಶ್ರೀಕಾಕುಳಂ ಪಟ್ಟಣದ ಎಲ್ಲಾ ಪ್ರಮುಖ ಆಸ್ಪತ್ರೆಗಳಲ್ಲಿ ಕನುಗುಳವಲಸ ಗ್ರಾಮದ ವೈದ್ಯರು ಕಂಡುಬರುತ್ತಾರೆ. ಜಿಲ್ಲಾ ಕೇಂದ್ರದಲ್ಲಿ ಸುಮಾರು 25 ಮಂದಿ ವೈದ್ಯಕೀಯ ಸೇವೆ ನೀಡುತ್ತಿದ್ದಾರೆ. ನರರೋಗ ತಜ್ಞರು, ಸ್ತ್ರೀರೋಗ ತಜ್ಞರು, ಕಿವಿ, ಮೂಗು, ಗಂಟಲು ತಜ್ಞರು, ದಂತ ತಜ್ಞರು, ಮೂಳೆ ತಜ್ಞರು ಹೇಳುವಂತೆ ಗ್ರಾಮದಲ್ಲಿ ಎಲ್ಲ ರೀತಿಯ ಕಾಯಿಲೆಗಳಿಗೆ ವೈದ್ಯರಿದ್ದಾರೆ. - ಡಾ.ಬೊಡ್ಡೆಪಲ್ಲಿ ಸುರೇಶ್, ಸನ್‌ರೈಸ್ ಆಸ್ಪತ್ರೆ, ಶ್ರೀಕಾಕುಳಂ..

ಕೃಷಿಯೇ ಜೀವನಾಧಾರವಾಗಿರುವ ಪಾಲಕರು ಉತ್ತಮ ಭವಿಷ್ಯಕ್ಕಾಗಿ ವಿದ್ಯಾಭ್ಯಾಸಕ್ಕೆ ಮೊರೆ ಹೋಗುವಂತೆ ಪ್ರೇರೇಪಿಸಿದರು ಎನ್ನುತ್ತಾರೆ ವಿವಿಧ ಉದ್ಯೋಗದಲ್ಲಿ ನೆಲೆಸಿ ನಿವೃತ್ತರಾದವರು. ಆರಂಭದಲ್ಲಿ ಅಧ್ಯಾಪಕ, ಪೊಲೀಸ್, ಸೇನೆ ಮತ್ತಿತರ ಸರ್ಕಾರಿ ಕೆಲಸಗಳತ್ತ ಆಕರ್ಷಿತರಾಗಿ... ನಂತರ ವೈದ್ಯ ವೃತ್ತಿಯತ್ತ ಹೆಚ್ಚಿನ ಒಲವು ತೋರುತ್ತಿದ್ದಾರೆ ಎನ್ನಲಾಗಿದೆ.. ಒಟ್ಟಿನಲ್ಲಿ 2800 ಜನರ ಇರುವ ಗ್ರಾಮದಲ್ಲಿ 900 ಜನರು ಸರ್ಕಾರಿ ನೌಕರರು ಮತ್ತು ವೈದ್ಯರಾಗಿರುವುದು ಇಲ್ಲಿನ ಗ್ರಾಮಸ್ಥರಿಗೆ ಹೆಮ್ಮೆಯ ವಿಷಯವಾಗಿದೆ..

ಓದಿ: ಹಾಲಿವುಡ್​ ಕ್ರಿಟಿಕ್ಸ್​ ಅಸೋಸಿಯೇಶನ್​ ಫಿಲ್ಮ್​ ಅವಾರ್ಡ್: 'ಆರ್​ಆರ್​ಆರ್' ಮುಡಿಗೇರಿದ 4 ಅತ್ಯುನ್ನತ ಪ್ರಶಸ್ತಿಗಳು

ETV Bharat Logo

Copyright © 2025 Ushodaya Enterprises Pvt. Ltd., All Rights Reserved.