ಕಾಕಿನಾಡ(ಆಂಧ್ರಪ್ರದೇಶ): ಆಂಧ್ರಪ್ರದೇಶದಲ್ಲಿ ಕಳ್ಳರಿಬ್ಬರ ಕರಾಮತ್ತು ಕಂಡ್ರೆ ಬೆಚ್ಚಿ ಬೀಳಬೇಕು. ಇಬ್ಬರು ಸೇರಿ 23 ಲಕ್ಷ ಮೌಲ್ಯದ 107 ದ್ವಿಚಕ್ರ ವಾಹನಗಳನ್ನು ಕದ್ದಿದ್ದಾರೆ. ಇದೀಗ ಇಬ್ಬರನ್ನು ಬಂಧಿಸಲಾಗಿದ್ದು 107 ಬೈಕ್ಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ನಡಿಗಟ್ಲ ಕೃಷ್ಣ, ವೆಂಕಟ ಸತ್ಯನಾರಾಯಣ ಬಂಧಿತರು. ಪ್ರಮುಖ ಆರೋಪಿಯಾದ ನಡಿಗಟ್ಲ ಕೃಷ್ಣ ಎಂಬಾತ ಮೇಸ್ತ್ರಿ ಕೆಲಸ ಮಾಡಿಕೊಂಡಿದ್ದ. ಕಳೆದ ವರ್ಷದಿಂದ ಈತ ಬೈಕ್ ಕಳ್ಳತನ ಮಾಡುತ್ತಿದ್ದನಂತೆ.
-
#APPolice recovered 107 two wheelers worth Rs 23 lakhs & arrested 2 persons committing thefts and selling without valid documents.#DGP Shri K.V Rajendranath Reddy IPS, appreciates @KAKINADAPOLICE for setting up special teams & nabbing the accused.#biketheft#crimecrackdown pic.twitter.com/6d3ol7xvZB
— Andhra Pradesh Police (@APPOLICE100) June 27, 2022 " class="align-text-top noRightClick twitterSection" data="
">#APPolice recovered 107 two wheelers worth Rs 23 lakhs & arrested 2 persons committing thefts and selling without valid documents.#DGP Shri K.V Rajendranath Reddy IPS, appreciates @KAKINADAPOLICE for setting up special teams & nabbing the accused.#biketheft#crimecrackdown pic.twitter.com/6d3ol7xvZB
— Andhra Pradesh Police (@APPOLICE100) June 27, 2022#APPolice recovered 107 two wheelers worth Rs 23 lakhs & arrested 2 persons committing thefts and selling without valid documents.#DGP Shri K.V Rajendranath Reddy IPS, appreciates @KAKINADAPOLICE for setting up special teams & nabbing the accused.#biketheft#crimecrackdown pic.twitter.com/6d3ol7xvZB
— Andhra Pradesh Police (@APPOLICE100) June 27, 2022
ಸಾರ್ವಜನಿಕ ಸ್ಥಳಗಳು, ಮನೆಗಳ ಮುಂದೆ ನಿಲ್ಲಿಸಿದ ಬೈಕ್ಗಳನ್ನು ಟಾರ್ಗೆಟ್ ಮಾಡುತ್ತಿದ್ದ ಖದೀಮರು, ನಕಲಿ ಕೀ ಬಳಸಿ ಅಥವಾ ಹ್ಯಾಂಡಲ್ ಮುರಿದು ಬೈಕ್ಗಳನ್ನು ಎಗರಿಸುತ್ತಿದ್ದರು. ಬಳಿಕ ಅವುಗಳನ್ನು ಕಡಿಮೆ ದರ ಅಂದರೆ 5 ರಿಂದ 15 ಸಾವಿರ ರೂಪಾಯಿಗಳಿಗೆ ಮಾರಾಟ ಮಾಡುತ್ತಿದ್ದರು. ಪ್ರಮುಖ ಆರೋಪಿಗೆ ವೆಂಕಟ ಸತ್ಯನಾರಾಯಣ ಸಹಾಯ ಮಾಡುತ್ತಿದ್ದ. ಕಡಿಮೆ ಬೆಲೆಯಲ್ಲಿ ಬೈಕ್ ಖರೀದಿ ಮಾಡಿದವರು ದಾಖಲೆಗಳನ್ನು ಕೇಳಿದಾಗ ಕುದುರಿದ ಹಣದಲ್ಲಿ ಅರ್ಧದಷ್ಟು ಹಣವನ್ನು ಮುಂಗಡವಾಗಿ ಪಡೆದು ಉಳಿದ ಹಣವನ್ನು ದಾಖಲೆ ನೀಡಿದಾಗ ಪಡೆಯುವುದಾಗಿ ಹೇಳಿ ನಾಪತ್ತೆಯಾಗುತ್ತಿದ್ದರು.
7 ಜಿಲ್ಲೆಗಳಲ್ಲಿ 107 ಬೈಕ್ ಕಳವು: ಈ ಖದೀಮರಿಬ್ಬರು ಸೇರಿ 7 ಜಿಲ್ಲೆಗಳಲ್ಲಿ ಬೈಕ್ ಕಳ್ಳತನ ಮಾಡಿದ್ದಾರೆ. ಕಾಕಿನಾಡ ಜಿಲ್ಲೆಯಲ್ಲಿ 17, ಪೂರ್ವ ಗೋದಾವರಿಯಲ್ಲಿ 32, ವಿಜಯನಗರಂನಲ್ಲಿ 2, ವಿಶಾಖಪಟ್ಟಣದಲ್ಲಿ 2, ಕೋನಾಸೀಮದಲ್ಲಿ 12, ಅಲ್ಲೂರು ಸೀತಾರಾಮರಾಜು ಜಿಲ್ಲೆಯಲ್ಲಿ 1, ಪಶ್ಚಿಮ ಗೋದಾವರಿ ಜಿಲ್ಲೆಯಲ್ಲಿ ಅತಿಹೆಚ್ಚು ಅಂದರೆ 41 ಬೈಕ್ಗಳನ್ನು ಕದ್ದ ಬಗ್ಗೆ ಪ್ರಕರಣ ದಾಖಲಾಗಿವೆ.
ಇದನ್ನೂ ಓದಿ: 231 ಚುನಾವಣೆಗಳಲ್ಲಿ ಸೋತು ರಾಷ್ಟ್ರಪತಿ ಸ್ಥಾನಕ್ಕೂ ನಾಮಪತ್ರ ಸಲ್ಲಿಸಿದ ಉತ್ಸಾಹಿ!