ಪ್ರಕಾಶಂ, ಆಂಧ್ರಪ್ರದೇಶ : ವ್ಯಕ್ತಿಯೊಬ್ಬರು ತಮ್ಮ ಮನೆಯಲ್ಲಿಯೇ ಪತ್ನಿಯ ಅಂತ್ಯಸಂಸ್ಕಾರಕ್ಕೆ ವ್ಯವಸ್ಥೆ ಮಾಡಿದ್ದ ಘಟನೆ ಆಂಧ್ರಪ್ರದೇಶದ ಪ್ರಕಾಶಂ ಜಿಲ್ಲೆಯಲ್ಲಿ ನಡೆದಿದೆ. ಜಿಲ್ಲೆಯ ಪುಲಿಪಾಡು ಮೂಲದ ಸತ್ಯನಾರಾಯಣ ಎಂಬುವರು ತಮ್ಮ ಪತ್ನಿಯ ಅಂತ್ಯಸಂಸ್ಕಾರಕ್ಕೆ ಸ್ವಂತ ಮನೆಯಲ್ಲಿಯೇ ವ್ಯವಸ್ಥೆ ಮಾಡಿದ್ದರು. ಗ್ರಾಮಸ್ಥರೇ ಸ್ಮಶಾನ ಭೂಮಿಯನ್ನು ಆಕ್ರಮಿಸಿದ್ದರ ಕಾರಣದಿಂದಾಗಿ ಆ ವ್ಯಕ್ತಿ ಈ ನಿರ್ಧಾರ ತೆಗೆದುಕೊಂಡಿದ್ದಾರೆ ಎನ್ನಲಾಗಿದೆ.
ಘಟನೆ ಕುರಿತು ಗ್ರಾಮಸ್ಥರು ಪೊಲೀಸರು ಹಾಗೂ ಕಂದಾಯ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕಾಗಮಿಸಿದ ಅಧಿಕಾರಿಗಳು ಸತ್ಯನಾರಾಯಣ ಅವರಿಗೆ ಶವವನ್ನು ಸ್ಮಶಾನಕ್ಕೆ ಸ್ಥಳಾಂತರಿಸುವಂತೆ ಸೂಚಿಸಿದ್ದು, ಪೊಲೀಸರ ಸೂಚನೆಯ ನಂತರ ಸತ್ಯನಾರಾಯಣ ಪತ್ನಿಯ ಮೃತದೇಹವನ್ನು ಸ್ಥಳಾಂತರ ಮಾಡಿದ್ದಾರೆ.
ಇದನ್ನೂ ಓದಿ:100 ಅಡಿ ಎತ್ತರದ ವಿದ್ಯತ್ ಟವರ್ ಏರಿ ಕುಳಿತ ಯುವಕ : ಕೆಳಗಿಳಿಸಲು ಹರಸಾಹಸ